ಶನಿವಾರಸಂತೆ, ಮೇ ೨೮: ಇಲ್ಲಿನ ಗ್ರಾಮ ಪಂಚಾಯಿತಿ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷೆ ಫರ್ಜಾನಾ ಶಾಹಿದ್ ಖಾನ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆ ಆರಂಭವಾಗುತ್ತಿದ್ದAತೆ ಪಟ್ಟಣದಲ್ಲಿ ಕಸ ಸಮಸ್ಯೆ ಗಂಭೀರ ವಾಗುತ್ತಿದೆ, ಸಾರ್ವಜನಿಕರೂ ಕಸ ವಿಲೇವಾರಿಗೆ ಸ್ಪಂದಿಸುತ್ತಿಲ್ಲ, ಪರಿಸರ ಮಾಲಿನ್ಯದ ಬಗ್ಗೆ ಅರಿವೇ ಇಲ್ಲ.

ಕಸ ವಿಲೇವಾರಿ ಬಗ್ಗೆ, ಸ್ವಚ್ಛತೆ ಕಾಪಾಡುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶೀಘ್ರ ಸಭೆ ಕರೆಯಬೇಕು ಎಂದು ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎಸ್.ಎನ್. ರಘು ಹಾಗೂ ಎಸ್.ಸಿ. ಶರತ್ ಶೇಖರ್ ಆಗ್ರಹಿಸಿದರು.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಂಡಳ್ಳಿ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಇನ್ನೂ ಉದ್ಘಾಟಣೆಯಾಗಿಲ್ಲ. ತಾತ್ಕಾಲಿಕವಾಗಿ ತಂತಿ ಬೇಲಿ ನಿರ್ಮಿಸಿ, ಮೆಸ್ ಹಾಕಿ ಸ್ವಚ್ಛತೆ ಕಾಪಾಡಬೇಕು. ವಿದ್ಯುತ್ ಸೌಲಭ್ಯ ಒದಗಿಸಬೇಕು. ಅನುದಾನ ತರಬೇಕು.

ಇನ್ನೊಂದು ವಾರದಲ್ಲಿ ನೂತನ ಶಾಸಕರನ್ನು ಸ್ಥಳಕ್ಕೆ ಆಹ್ವಾನಿಸಿ, ಕಸ ವಿಲೇವಾರಿ ಘಟಕವನ್ನು ಉದ್ಘಾಟಿಸಲೇಬೇಕು ಎಂದು ಸದಸ್ಯರಾದ ಸರ್ದಾರ್ ಅಹಮ್ಮದ್, ಶರತ್ ಶೇಖರ್ ಹಾಗೂ ಎಸ್.ಎನ್. ರಘು ಪಟ್ಟು ಹಿಡಿದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜಿ. ಮೇದಪ್ಪ ಅವರಿಗೆ ಸಲಹೆ ನೀಡಿದರು.

ಕೆಲವು ಹೊಟೇಲ್‌ಗಳು, ಕೋಳಿ ಮಾಂಸದ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ. ಚರಂಡಿಗಳಲ್ಲಿ ಕೋಳಿ ಸ್ವಚ್ಛಗೊಳಿಸಿದ ನೀರನ್ನು ಬಿಡ ಲಾಗುತ್ತಿದೆ ಎಂದು ಆರೋಪಿಸಿದ ಸದಸ್ಯರು ಹೊಟೇಲ್ ಮತ್ತು ಕೋಳಿ ಮಾಂಸದ ಅಂಗಡಿಗಳಲ್ಲಿ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳಲು ಹಾಗೂ ಪರವಾನಗಿ ಪಡೆದುಕೊಳ್ಳಲು ತಿಳಿಸುವಂತೆ ಸೂಚಿಸಿದರು. ಅಂಗನವಾಡಿ ಉದ್ಘಾಟನೆಯಾಗಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಕಾವೇರಿ ರಸ್ತೆಯಲ್ಲಿ ಇರುವ ಪುರಾತನ ಮಕ್ಕಳ ಕಟ್ಟೆ ಕೆರೆಯನ್ನು ದುರಸ್ತಿಪಡಿಸಿ ಉದ್ಯಾನ ನಿರ್ಮಿಸಲು ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸ ಲಾಯಿತು. ಪಂಚಾಯಿತಿ ಸದಸ್ಯ ಕಾವೇರಿ, ಸರಸ್ವತಿ, ಪಂಚಾಯಿತಿ ಕಾರ್ಯದರ್ಶಿ ದೇವರಾಜ್ ಹಾಗೂ ಸಿಬ್ಬಂದಿ ಹಾಜರಿದ್ದರು.