ಕಣಿವೆ, ಮೇ ೨೮: ಅರಣ್ಯ ಇಲಾಖೆ ವತಿಯಿಂದ ಇತ್ತೀಚೆಗೆ ನಡೆದ ಕಾಡಾನೆಗಳ ಗಣತಿಯಲ್ಲಿ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ೫೩ ಕಾಡಾನೆಗಳು ಕಂಡು ಬಂದಿರುವುದಾಗಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ತಿಳಿಸಿದ್ದಾರೆ.

ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮೀನುಕೊಲ್ಲಿ, ದುಬಾರೆ, ಆನೆಕಾಡು, ಅತ್ತೂರು ವಿವಿಧೆಡೆಗಳಲ್ಲಿ ಅರಣ್ಯ ವ್ಯಾಪ್ತಿಯ ಕೆರೆ ಕಟ್ಟೆಗಳ ಆವರಣ ಸೇರಿದಂತೆ ಇತರೆಡೆಗಳಲ್ಲಿ ನಿರಂತರವಾಗಿ ನಡೆಸಿದ ಕಾಡಾನೆಗಳ ಗಣತಿ ಕಾರ್ಯಾಚರಣೆಯಲ್ಲಿ ವಿವಿಧ ೬೦ ಕಾಡಾನೆಗಳು ಕಂಡುಬAದಿರುವುದಾಗಿ ಶಿವರಾಂ ತಿಳಿಸಿದ್ದಾರೆ.

ರಾಜ್ಯದಲ್ಲಿ ೬೦೪೯ ಆನೆಗಳು

೨೦೧೯ - ೨೦೨೨ ರ ಜನಗಣತಿಯಲ್ಲಿ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ ೬೦೪೯ ಆನೆಗಳಿವೆ. ಅನಂತರ ಅಸ್ಸಾಂ ರಾಜ್ಯದಲ್ಲಿ ೫೭೧೯, ಕೇರಳದಲ್ಲಿ ೫೭೦೬ ಕಾಡಾನೆಗಳಿರುವುದಾಗಿ ತಿಳಿದಬಂದಿದೆ.

ಸಾಮಾನ್ಯವಾಗಿ ಕೊಡಗು ಜಿಲ್ಲೆಯ ಕಾಡಾನೆಗಳು ಬೇಸಿಗೆಯ ದಿನಗಳಲ್ಲಿ ಕಬಿನಿಯತ್ತ ಮುಖ ಮಾಡುತ್ತವೆ. ಮಳೆಗಾಲದಲ್ಲಿ ನಾಗರಹೊಳೆಯತ್ತ ಧಾವಿಸುತ್ತವೆ. ಹಾಗೆಯೇ ಹಲಸು ಹಣ್ಣಿನ ಸಂದರ್ಭ ಕಾಫಿ ತೋಟಗಳು ಸೇರಿದಂತೆ ನಾಡಿನತ್ತ ಮುಖ ಮಾಡುತ್ತವೆ ಎಂದು ವಲಯ ಅರಣ್ಯಾಧಿಕಾರಿ ಶಿವರಾಂ ‘ಶಕ್ತಿ’ಗೆ ಮಾಹಿತಿ ನೀಡಿದರು.

- ಕೆ.ಎಸ್. ಮೂರ್ತಿ