ಮಡಿಕೇರಿ, ಮೇ ೨೮: ಗೂಡ್ಸ್ ವಾಹನ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ನಗರದ ಫೀ.ಮಾ. ಕಾರ್ಯಪ್ಪ ವೃತ್ತದ (ಸುದರ್ಶನ ವೃತ್ತ) ಬಳಿ ನಡೆದಿದೆ.
೨ನೇ ಮೊಣ್ಣಂಗೇರಿಯ ಬಿ.ಎಸ್. ಧನಂಜಯ್ (೫೬) ಮೃತ ದುರ್ಧೈವಿ. ೨ನೇ ಮೊಣ್ಣಂಗೇರಿಯಿAದ ಮಡಿಕೇರಿ ಸಮೀಪದ ಚೈನ್ಗೇಟ್ ಬಳಿ ಸ್ನೇಹಿತರೊಬ್ಬರ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮನೆಗೆ ಊಟಕ್ಕೆಂದು ತೆರಳುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.
ಕಾರ್ಯಪ್ಪ ವೃತ್ತದಿಂದ ಕುಶಾಲನಗರ ರಸ್ತೆಯ ಕಡೆ ತನ್ನ ಆ್ಯಕ್ಟೀವಾ ಹೊಂಡಾ ಸ್ಕೂಟರ್ನಲ್ಲಿ ತೆರಳುವ ಸಂದರ್ಭ ಕಾರೊಂದನ್ನು ಓವರ್ಟೇಕ್ ಮಾಡಲು ಧನಂಜಯ ಪ್ರಯತ್ನಿಸಿದ್ದಾರೆ. ಈ ಸಂದರ್ಭ ತಮಿಳುನಾಡಿನಿಂದ ಮಂಗಳೂರಿಗೆ ಸರಕು ಸಾಗಿಸುತ್ತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಸವಾರನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.