ಸಿದ್ದಾಪುರ, ಮೇ ೨೮: ಅಂಗನ ವಾಡಿ ಕಾರ್ಯಕರ್ತೆಯಾಗಿ ಸಿದ್ದಾಪುರದ ವಿವಿಧೆಡೆ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿರುವ ವಾಹಿದಾ ಖಾನ್ ಅವರನ್ನು ಕೊಡಗು ಜಿಲ್ಲಾ ಅಂಬೇಡ್ಕರ್ ಸೇನೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸತೀಶ್ ಟಿ.ಆರ್. ಮಾತನಾಡಿ, ಸಮಾಜದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅತ್ಯವಶ್ಯಕವಾಗಿದ್ದು, ಗ್ರಾಮದಲ್ಲಿನ ಇವರ ಜವಾಬ್ದಾರಿ ಹಾಗೂ ಸೇವೆಗೆ ಅನು ಗುಣವಾಗಿ ವೇತನ ದೊರೆಯುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ ವೇತನದೊಂದಿಗೆ ಸರಕಾರದ ಎಲ್ಲಾ ಸೌಲಭ್ಯ ದೊರಕಬೇಕು. ಅಲ್ಲದೆ ಸಾಮಾನ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರು ಬಡ ಕುಟುಂಬದಿAದ ಬಂದಿರುವವ ರಾಗಿದ್ದು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಕುಟುಂಬದ ನಿರ್ವಹಣೆಗೆ ಕೂಲಿ ಕೆಲಸಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ನಿಟ್ಟಿನಲ್ಲಿ ಸರಕಾರವು ಇವರಿಗೆ ನಿವೃತ್ತಿ ವೇತನ ವನ್ನು ನೀಡು ವಂತಾಗಬೇಕೆAದರು. ಈ ಸಂದರ್ಭ ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಮಂಜು ಎನ್.ಎಸ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಜಿ., ವೀರಾಜಪೇಟೆ ತಾಲೂಕು ಸಿಐಟಿಯು ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಶೀಲಾ, ಪ್ರಧಾನ ಕಾರ್ಯದರ್ಶಿ ಎಂ.ಬಿ. ಲೀಲಾವತಿ ಇನ್ನಿತರರು ಹಾಜರಿದ್ದರು.