ಎಲ್ಲ ರಾಜಕೀಯ ಪಕ್ಷಗಳ ಹಣೆಬರಹ ಒಂದೇ! ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆಗಾಗಿ ವಿವಾದ ತಲೆದೋರಿದಾಗ ಕರ್ನಾಟಕದ ಆಡಳಿತಕಾರರಿಗೆ ಕಾವೇರಿಯ ನೆನಪಾಗುತ್ತದೆ. ಮಳೆ ಕಡಿಮೆ ಬಿದ್ದಾಗ, ಕೆ. ಆರ್. ಎಸ್ ನಲ್ಲಿ ನೀರಿನ ಮಟ್ಟ ಕುಸಿದಾಗ ಕಾವೇರಿಯ ತವರೂರು ಕೊಡಗು ನೆನಪಾಗುತ್ತದೆ. ಕಾವೇರಿ ನದಿ ನೀರನ್ನು ಬಳಸಿಕೊಳ್ಳದೆ, ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ, ಕೃಷಿ, ಕಾಫಿ ತೋಟಗಳ ನಿರ್ವಹಣೆಗಾಗಿ ನೀರಾವರಿ ಸೌಲಭ್ಯ ಕಲ್ಪಿಸಲು ಜಲಸಂಪನ್ಮೂಲವಿಲ್ಲದೆ ಅಲ್ಲಲ್ಲಿ, ಕೊಳವೆ ಬಾವಿ ಸ್ಥಳೀಯ ಹೊಳೆ-ತೊರೆಗಳನ್ನು ಅವಲಂಬಿಸಿ ಕೊಡಗಿನ ಬೆಳೆಗಾರರು ಹೇಗೊ ಕೃಷಿ, ಕಾಫಿ, ಏಲಕ್ಕಿ, ಕರಿಮೆಣಸು ಬೆಳೆಗಳನ್ನು ಕಷ್ಟಪಟ್ಟು ನಿರ್ವಹಿಸಿಕೊಂಡು ತ್ರಾಸದಾಯಕ ಜೀವನ ಸಾಗಿಸುತ್ತಿದ್ದಾರೆ.

ಆದರೆ, ಕೊಡಗು ಹೊರತುಪಡಿಸಿ ಕಾವೇರಿಯು ಕರ್ನಾಟಕದ ಅನೇಕ ಜಿಲ್ಲೆಗಳ ಜನತೆಗೆ ಸಮೃದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದಾಳೆ. ಇದರಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಕೂಡ ಒಳಗೊಂಡಿದೆ. ಅದೇ ರೀತಿ ಮಂಡ್ಯ ಮೊದಲಾದ ಅನೇಕ ಜಿಲ್ಲೆಗಳ ಕೃಷಿಕರ ಬೆಳೆಗಳ ನೀರಾವರಿಗೆ ಸಮೃದ್ಧ ಜಲನೀಡಿ ವರದಾಯಿನಿಯಾಗಿದ್ದಾಳೆ. ಮುಖ್ಯವಾಗಿ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಹರಿದು, ತಂಪೆರೆದು, ಅಲ್ಲಿನ ಜನರ ತೃಷೆ ತಣಿಸಿ, ಕೃಷಿ ಭೂಮಿಗೆ ಉಣಬಡಿಸಿ ಲೋಕೋಪಕಾರಿಣಿಯಾಗಿದ್ದಾಳೆ.

ಇಂತಹ ಜೀವದಾಯಿನಿ ಕಾವೇರಿಯ ತವರೂರಿಗೆ ಕಳೆದ ಹಲವಾರು ವರ್ಷಗಳಿಂದ ರಾಜ್ಯದ, ದೇಶದ ರಾಜಕೀಯ ನಾಯಕರು ಅನ್ಯಾಯಮಾಡುತ್ತಾ ಬರುತ್ತ್ತಿದ್ದಾರೆ, ಐತಿಹಾಸಿಕ ಕಾಲದಲ್ಲಿ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಜಿಲ್ಲೆಯ ಅಸ್ತಿತ್ವವನ್ನೇ ಈಗ ಮರೆತಂತೆ ನಿರ್ಲಕ್ಷö್ಯ ಮಾಡುತ್ತಿದ್ದಾರೆ. ಈ ಹಿಂದೆ ಮೂರು ವಿಧಾನಸಭಾ ಕ್ಷೇತ್ರವಾಗಿದ್ದ ಕೊಡಗು ಜಿಲ್ಲ್ಲೆಯಲ್ಲಿ ಡಿ-ಲಿಮಿಟೇಷನ್ ನೆಪದಲ್ಲಿ ೨೦೦೮ ರಿಂದ ಎರಡು ಕ್ಷೇತ್ರಗಳಾಗಿ ಮೊಟಕುಗೊಳಿಸಲ್ಪಟ್ಟಿತು. ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಆ ಪಕ್ಷದ ಶಾಸಕರುಗಳು ಆಯ್ಕೆಗೊಂಡಾಗ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪ್ಪಿಸದೆ ಕೊಡಗನ್ನು ಬಿಜೆಪಿ ಆಡಳಿತಕಾರರು, ಹೈಕಮಾಂಡ್ ಪ್ರಮುಖರು ಕಡೆಗಣಿಸಿದರು. ಬೇರೆಡೆಯಿಂದ ಆಯ್ಕೆಗೊಂಡು ಸಚಿವರುಗಳಾದವರನ್ನು ಕೊಡಗಿನ ಉಸ್ತುವಾರಿಗಳನ್ನಾಗಿ ಹೇರಿ ಕೊಡಗಿನ ಶಾಸಕರುಗಳು ಹಾಗೂ ಅವರುಗಳನ್ನು ಆರಿಸಿದ ಜನತೆಯನ್ನು ತಲೆ ತಗ್ಗಿಸುವ ಕುರಿಗಳಾಗಿಸಿದರು.

೧೯೯೪ ರಲ್ಲಿ ಜನತಾದಳ ಅಧಿಕಾರಕ್ಕೆ ಬಂದಾಗ ಜೆ.ಹೆಚ್. ಪಟೇಲ್ ಅವರು ಮುಖ್ಯಮಂತ್ರ‍್ರಿಯಾಗಿದ್ದಾಗ ಕೊಡಗಿನ ಎಂ.ಸಿ ನಾಣಯ್ಯ ಅವರನ್ನು ರಾಜ್ಯದ ಕಾನೂನು ಸಚಿವರಾಗಿ ಆರಿಸಲಾಗಿದ್ದುದು ಒಂದು ಸವಿ ನೆನಪು. ಈ ಸಂದರ್ಭ ನಿಜಕ್ಕೂ ಮೆಚ್ಚಬೇಕಾದುದು ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಎಸ್. ಎಂ. ಕೃಷ್ಣ ಅವರನ್ನು. ೧೯೯೯ ರಿಂದ ೨೦೦೪ ರವರೆಗೆ ಅವರು ಮುಖ್ಯಮಂತ್ರಿಯಾಗಿದ್ದಾಗ ಸುಮಾ ವಸಂತ್, ಎಂ. ಎಂ. ನಾಣಯ್ಯ (ಈಗ ದಿವಂಗತರು) ಹಾಗೂ ಟಿ. ಜಾನ್ (ಈಗ ದಿವಂಗತರು) ಈ ಮೂವರಿಗೂ ಸಚಿವ ಸ್ಥಾನ ಕಲ್ಪಿಸಿದ್ದರು.

ಮಾತ್ರವಲ್ಲ, ಕೊಡಗಿನ ಜನತೆಯ, ಸಂಘಟನೆಗಳ, ಜನಪ್ರತಿನಿಧಿಗಳ ಬೇಡಿಕೆಯಾಗಿದ್ದ ತಲಕಾವೇರಿ- ಭಾಗಮಂಡಲ ಪವಿತ್ರ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಚಾಲನೆ ಕೃಷ್ಣ ಅವರು ನೀಡಿದ್ದರು.

ಇದೀಗ ಕಳೆದ ಹಲವು ದಶಕಗಳಿಂದ ಬಿಜೆಪಿಯ ಭದ್ರ ಕೋಟೆ ಮುರಿದು ಕೊಡಗಿನಲ್ಲಿ ಕಾಂಗ್ರೆಸ್‌ನಿAದ ಆಯ್ಕೆಗೊಂಡಿರುವ ತರುಣರುಗಳಾದ ಎ.ಎಸ್. ಪೊನ್ನಣ್ಣ ಹಾಗೂ ಮಂಥರ್ ಗೌಡ ಇವರಲ್ಲಿ ಯಾರನ್ನೂ ಸಚಿವರನ್ನಾಗಿ ಆಯ್ಕೆ ಮಾಡದೆ ಕಾಂಗ್ರೆಸ್ ಬಿಜೆಪಿಯ ಚಾಳಿಯನ್ನೇ ಮುಂದುವರಿಸಿ ಈ ಜಿಲ್ಲೆಗೆ ಅನ್ಯಾಯ ಮಾಡಿದೆ. ಮುಂದೆ ಬೇರೆ ಯಾರನ್ನೋ ಕೊಡಗು ಜಿಲ್ಲೆಯ ಉಸ್ತುವಾರಿಯಾಗಿ ಹೇರಲಿದೆ.

ಜಾತೀಯ ಲೆಕ್ಕಾಚಾರವನ್ನೇ ಮಾನದಂಡವಾಗಿಟ್ಟುಕೊAಡು ಆಯ್ಕೆ ಮಾಡಿರಬಹುದಾದ ಈಗಿನ ಸಚಿವ ಸಂಪುಟದಲ್ಲಿ ಕೊಡಗನ್ನು ಆ ದಿಸೆಯಲ್ಲ್ಲಿಯಾದರೂ ಪರಿಗಣಿಸಬಹುದಿತ್ತು. ರಾಜ್ಯದಲ್ಲಿ ಕಡಿಮೆ ಜನಸಂಖ್ಯೆಯಲ್ಲ್ಲಿರುವÀ ಆದರೂ ದೇಶದ ಸೇನೆಗೆ ಆಪಾರ ಕೊಡುಗೆ ನೀಡಿರುವ, ಕ್ರೀಡಾ ಮತ್ತ್ತಿತರ ವಿಭಾಗಗಳಲ್ಲಿ ಹೆಸರು ಮಾಡಿರುವ ಕೊಡವ ಜನಾಂಗಕ್ಕೆ ಪ್ರಾತಿನಿಧ್ಯ ನೀಡಬೇಕಿತ್ತು. ಸಚಿವರಾಗಲು ಎಲ್ಲ ಅರ್ಹತೆ ಪಡೆದಿರುವ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಕಾಂಗ್ರೆಸ್‌ನ ರಾಜ್ಯ ಅಥವಾ ರಾಷ್ಟç ವರಿಷ್ಠರು ಆಯ್ಕೆ ಮಾಡುವಷ್ಟು ಪ್ರಬುದ್ಧತೆಯನ್ನು ತೋರದಿರುವದು ನಿಜಕ್ಕೂ ಜಿಲ್ಲೆಗೆ ಎಸಗಿದ ಅನ್ಯಾಯವಾಗಿದೆ.

-ಜಿ.ರಾಜೇಂದ್ರ , ಪ್ರಧಾನ ಸಂಪಾದಕ