ಮಡಿಕೇರಿ, ಮೇ ೨೮: ಹತ್ತು ಕುಟುಂಬ ಹದಿನೆಂಟು ಗೋತ್ರದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಗೌಡ ಪ್ರೀಮಿಯರ್ ಲೀಗ್ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಾಫಿ ಕ್ರಿಕೆರ‍್ಸ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಇAದು ನಡೆದ ಫೈನಲ್ ಪಂದ್ಯಾಟದಲ್ಲಿ ಟಾಸ್‌ಗೆದ್ದ ಕಾಫಿ ಕ್ರಿಕೆಟರ್ಸ್ ತಂಡ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಎಲೈಟ್ ತಂಡ ೧೦ ಓವರ್‌ಗೆ ೭ ವಿಕೆಟ್ ನಷ್ಟಕ್ಕೆ ೯೪ ರನ್ ಬಾರಿಸಿತು. ಎಲೈಟ್ ತಂಡದ ಪರವಾಗಿ ತಳೂರು ವಿಕ್ಕಿ ೩ ಸಿಕ್ಸ್, ೨ ಬೌಂಡರಿಗಳನ್ನು ಒಳಗೊಂಡು ೧೭ ಎಸೆತಕ್ಕೆ ೩೨ ರನ್ ಬಾರಿಸಿದರು. ಕಾಫಿ ಕ್ರಿಕೆರ‍್ಸ್ನ ಕುದುಕುಳಿ ಮಿಥುನ್, ಕುಡೆಕಲ್ ಅನಿಲ್ ತಲಾ ೨ ವಿಕೆಟ್ ಪಡೆದರು. ಪೊನ್ನಚ್ಚನ ಮೌರ್ಯ ೧ ವಿಕೆಟ್ ಪಡೆದರು. ರನ್‌ಔಟ್ ಮೂಲಕ ೨ ವಿಕೆಟ್ ಉದುರಲ್ಪಟ್ಟಿತು.

ಎಲೈಟ್ ತಂಡ ನೀಡಿದ್ದ ೯೫ ರನ್‌ಗಳ ಸವಾಲನ್ನು ಬೆನ್ನಟ್ಟಿದ ಕಾಫಿ ಕ್ರಿಕೆರ‍್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಸ್ಫೋಟಕ ಬ್ಯಾಟ್ಸ್ಮನ್ ಕುಡೆಕಲ್ ಅನಿಲ್ ಕೇವಲ ೩ ರನ್‌ಗಳಿಸಿ ಔಟ್ ಆಗುವುದರೊಂದಿಗೆ ಕಾಫಿ ಕ್ರಿಕೆರ‍್ಸ್ ತಂಡ ಸಂಕಷ್ಟಕ್ಕೆ ಸಿಲುಕಿತು. ಉಳಿದ ಆಟಗಾರರು ಎಷ್ಟೇ ಪ್ರಯತ್ನಪಟ್ಟರೂ ಕೂಡ ಎಲೈಟ್ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ೧೦ ಓವರ್‌ಗೆ ೭ ವಿಕೆಟ್‌ನಷ್ಟಕ್ಕೆ ೬೮ ರನ್‌ಗಳಿಸಿ ಕಾಫಿ ಕ್ರಿಕೆರ‍್ಸ್ ತಂಡ ಸೋಲಿಗೆ ಶರಣಾಯಿತು.

ಎಲೈಟ್ ಪರ ಲೋಕೇಶ್ ಹಾಗೂ ವಿಕ್ಕಿ ತಲಾ ೨ ವಿಕೆಟ್ ಪಡೆದರು. ಅವಿನ್ ಮತ್ತು ಗಣಿತ್ ತಲಾ ಒಂದೊAದು ವಿಕೆಟ್ ಗಳಿಸಿದರು. ರನೌಟ್ ಮೂಲಕ ೧ ವಿಕೆಟ್ ಉರುಳಿತು. ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕಾಫಿ ಕ್ರಿಕೆರ‍್ಸ್ ತಂಡದ ಕುಡೆಕಲ್ ಅನಿಲ್ ಪಡೆಯುವ ಮೂಲಕ ಟಿವಿಎಸ್ ಸ್ಕೂಟರ್‌ನ್ನು ತಮ್ಮದಾಗಿಸಿಕೊಂಡರು. ಅಂತಿಮ ಪಂದ್ಯದ ಪಂದ್ಯ ಪುರುಷೋತ್ತಮ ಹಾಗೂ ಬೆಸ್ಟ್ಬ್ಯಾಟ್ಸ್ಮೆನ್ ಪ್ರಶಸ್ತಿಯನ್ನು ಎಲೈಟ್ ತಂಡದ ತಳೂರು ವಿಕ್ಕಿ ಪಡೆದುಕೊಂಡರು. ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಕಾಫಿ ಕ್ರಿಕೆರ‍್ಸ್ನ ಜೆಪಿ ಮಾವಾಜಿ ಪಡೆದರು. ಬೆಸ್ಟ್ ಕ್ಯಾಚರ್ ಪ್ರಶಸ್ತಿಯನ್ನು ಕಾಫಿ ಕ್ರಿಕೆರ‍್ಸ್ನ ವಿವಾನ್, ಬೆಸ್ಟ್ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ನಯನ್ ಚೆರಿಯಮನೆ, ಫೇರ್‌ಪ್ಲೇ ಪ್ರಶಸ್ತಿಯನ್ನು ಕೆಜಿಎಸ್ ಸ್ಟೆçöÊಕರ್ಸ್ ಪಡೆದುಕೊಂಡಿತು.

ಇದಕ್ಕೂ ಮುನ್ನ ನಡೆದ ೨ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್‌ಗೆದ್ದ ಎಂಸಿಬಿ ತಂಡ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್‌ಮಾಡಿದ ಕಾಫಿ ಕ್ರಿಕೆರ‍್ಸ್ ತಂಡ ೧೦ ಓವರ್‌ಗೆ ೩ ವಿಕೆಟ್ ನಷ್ಟಕ್ಕೆ ೧೦೦ ರನ್ ಬಾರಿಸಿತು. ಕುಡೆಕಲ್ ಅನಿಲ್ ೪ ಸಿಕ್ಸರ್, ೬ ಬೌಂಡರಿ ಒಳಗೊಂಡು ೨೭ ಎಸೆತಗಳಲ್ಲಿ ೬೨ ರನ್ ಬಾರಿಸಿದರು. ಎಂಸಿಬಿ ಪರವಾಗಿ ಕುಶ್ವಂತ್ ಕೋಳಿಬೈಲು ೨, ಕೊಂಬಾರನ ಹರ್ಷ ೧ ವಿಕೆಟ್ ಪಡೆದರು. ನಂತರ ಬ್ಯಾಟ್ ಮಾಡಿದ ಎಂಸಿಬಿ ೧೦ ಓವರ್‌ಗೆ

೩ಐದನೇ ಪುಟಕ್ಕೆ

ಇಂತಹ ಕ್ರೀಡಾಕೂಟಗಳಿಗೆ ಸಮುದಾಯ ಬಾಂಧವರು ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಆಶಿಸಿದರು. ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಅವರು ಮಾತನಾಡಿ, ಕ್ರೀಡೆಯಲ್ಲಿ ಜಾತಿ ಮತ ಎಂಬ ಯಾವುದೇ ಬೇಧಭಾವ ಇರುವುದಿಲ್ಲ. ಕ್ರೀಡೆಯಲ್ಲಿ ಒಗ್ಗಟ್ಟಿನ ಹೋರಾಟ ಮಾತ್ರ ಇರುತ್ತದೆ. ಇಂತಹ ಒಗ್ಗಟ್ಟಿನ ಮನೋಭಾವದೊಂದಿಗೆ ಪ್ರತಿಯೊಬ್ಬರು ಮುಂದುವರಿಯಬೇಕು ಎಂದು ಹೇಳಿದರು. ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಮಾತನಾಡಿ, ಇಂತಹ ಕ್ರೀಡಾಕೂಟಕ್ಕೆ ಸರ್ಕಾರದ ಮಟ್ಟದಿಂದ ಅನುದಾನ ತರಲು ಗೌಡ ಯುವವೇದಿಕೆ ಪ್ರಯತ್ನಿಸಬೇಕೆಂದು ಸಲಹೆಯಿತ್ತರು. ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಮಾತನಾಡಿ, ಗೌಡ ಕ್ರೀಡಾಕೂಟವನ್ನು ಜನಾಂಗದವರು ಪ್ರೋತ್ಸಾಹಿಸುವಂತಾಗಬೇಕೆAದರು.

ಫ್ರಾAಚೈಸಿಗಳ ಪರವಾಗಿ ಮಾತನಾಡಿದ ಡಾ. ಕುಶ್ವಂತ್ ಕೋಳಿಬೈಲು, ಗೌಡ ಯುವ ವೇದಿಕೆಯ ಸಂಘಟಿತ ಪ್ರಯತ್ನದಿಂದ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿದ್ದು, ನಮ್ಮ ಸಮುದಾಯದ ಕ್ರೀಡಾಕೂಟಕ್ಕೆ ಸರ್ಕಾರದಿಂದ ಅನುದಾನ ಸಿಗುವಂತಾಗಬೇಕೆAದರು.

ಅಧ್ಯಕ್ಷತೆ ವಹಿಸಿದ್ದ ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಮಾತನಾಡಿ, ಮುಂದಿನ ಬಾರಿ ಗೌಡ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ನಡೆಸಲು ಗೌಡ ಕುಟುಂಬಗಳು ಮುಂದೆ ಬಂದರೆ ಸಹಕಾರ ನೀಡಲಾಗುವುದು. ಇಲ್ಲವಾದರೆ ಯುವ ವೇದಿಕೆ ವತಿಯಿಂದಲೇ ಮುಂದುವರಿಸಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಗೌಡ ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಗೌಡ ಯುವವೇದಿಕೆ ಮಾಜಿ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ದಾನಿ ಚೊಕ್ಕಾಡಿ ಶರತ್‌ಕುಶಾಲಪ್ಪ, ವಿಜೇತ ತಂಡದ ಮಾಲೀಕ ಎಡಿಕೇರಿ ಪ್ರಸನ್ನ, ರನ್ನರ್ಸ್ ತಂಡದ ಮಾಲೀಕ ಪೊನ್ನಚ್ಚನ ಮಧು ಮತ್ತಿತರರು ಉಪಸ್ಥಿತರಿದ್ದರು. ನಾಟ್ಯಮಿಲನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಟ್ಟೆಮನೆ ಸೋನಾಜಿತ್ ನಿರೂಪಿಸಿ, ಸೋನಲ್ ಸೀತಮ್ಮ ಪ್ರಾರ್ಥಿಸಿದರು. ದೇರಳ ನವೀನ್ ಸ್ವಾಗತಿಸಿ, ಪುದಿಯನೆರವನ ರಿಷಿತ್ ಮಾದಯ್ಯ ವಂದಿಸಿದರು. - ಉಜ್ವಲ್