ಮಡಿಕೇರಿ, ಮೇ ೨೭: ಹತ್ತು ಕುಟುಂಬ ಹದಿನೆಂಟು ಗೋತ್ರದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏರ್ಪಡಿಸಲಾಗಿರುವ ಪ್ರಥಮ ವರ್ಷದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ತಾ. ೨೮ ರಂದು (ಇಂದು) ನಡೆಯಲಿದೆ.

ಇಂದು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯಾಟದಲ್ಲಿ ಟಾಸ್ ಗೆದ್ದ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಕಾಫಿ ಕ್ರಿಕೆರ‍್ಸ್ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿತು. ಕಾಫಿ ಕ್ರಿಕೆರ‍್ಸ್ ತಂಡ ನಿಗದಿತ ೧೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೭೨ ರನ್ ಕಲೆ ಹಾಕಿತು. ತಂಡದ ಪರ ಅನಿಲ್ ಕುಡೆಕಲ್ ಒಂದು ಸಿಕ್ಸರ್, ನಾಲ್ಕು ಬೌಂಡರಿಗಳ ಸಹಿತ ೧೮ ಎಸೆತಗಳಲ್ಲಿ ೩೪ ರನ್ ಗಳಿಸಿದರು. ಎಲೈಟ್ ತಂಡದ ಪರವಾಗಿ ಅವಿನ್ ೨ ವಿಕೆಟ್ ಕಬಳಿಸಿದರು.

ನಂತರ ಬ್ಯಾಟ್ ಮಾಡಿದ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ೫.೫. ಓವರ್‌ಗಳಲ್ಲಿ ೭೫ ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ತಂಡದ ಪರವಾಗಿ ತಳೂರ್ ವಿಕ್ಕಿ ೨೪ ಎಸೆತಗಳಲ್ಲಿ ೫ ಸಿಕ್ಸರ್ ಹಾಗೂ ಮೂರು ಬೌಂಡರಿಗಳೊAದಿಗೆ ೫೦ ರನ್ ಬಾರಿಸಿದರು. ಜಿಪಿಎಲ್ ಪಂದ್ಯಾವಳಿಯಲ್ಲಿ ವಿಕ್ಕಿ ಅವರ ಮೂರನೇ ಅರ್ಧ ಶತಕ ಇದಾಗಿದೆ. ಕಾಫಿ ಕ್ರಿಕೆರ‍್ಸ್ ಪರವಾಗಿ ಅನಿಲ್ ಕುಡೆಕಲ್ ೧ ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಎಲೈಟ್ ಕ್ರಿಕೆಟ್ ಕ್ಲಬ್ ಮೊದಲ ತಂಡವಾಗಿ ಫೈನಲ್‌ಗೆ ಪ್ರವೇಶ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪಡೆದುಕೊಂಡಿದೆ. ತಳೂರು ವಿಕ್ಕಿ ಪ್ಲೇಯರ್ ಆಫ್ ದಿ ಮ್ಯಾಚ್ ಬಹುಮಾನ ಪಡೆದುಕೊಂಡರು.

ನAತರ ನಡೆದ ಮೊದಲ ಎಲಿಮಿನೇಟರ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಮಡಿಕೇರಿ ಚಾಂಪಿಯನ್ ಬಾವಾಸ್ (ಎಂಸಿಬಿ) ತಂಡ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಟೀಂ ಭಗವತಿ ತಂಡ ನಿಗದಿತ ೧೦ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೮೬ ರನ್ ಗಳಿಸಿತು. ತಂಡದ ಪರ ಕೊಂಬಾರನ ರಂಜು ೧೯ ಎಸೆತಗಳಲ್ಲಿ ೩ ಸಿಕ್ಸರ್‌ಗಳೊಂದಿಗೆ ೩೧ ರನ್ ಗಳಿಸಿದರು. ಎಂಸಿಬಿ ಪರ ಬೈಲೆ ಮೊನಿಷ್ ೨ ವಿಕೆಟ್ ಪಡೆದರು. ಉತ್ತರವಾಗಿ ಆಡಿದ ಎಂಸಿಬಿ ತಂಡ ೯.೪. ಓವರ್‌ಗಳಲ್ಲಿ ೪ ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿಯಲ್ಲಿ ಕೊನೆಯ ಹಂತದಲ್ಲಿ ಕೊಂಬಾರನ ಹರ್ಷ ಸಿಡಿಸಿದ ಸಿಕ್ಸರ್ ತಂಡದ ಗೆಲುವಿನಲ್ಲಿ ನೆರವಾಯಿತು. ತಂಡದ ಪರ ಬೈಲೆ ಮೊನಿಷ್ ೨ ಸಿಕ್ಸರ್, ಮೂರು ಬೌಂಡರಿ ಸಹಿತ ೧೭ ಎಸೆತಗಳಲ್ಲಿ ೩೫ ರನ್‌ಗಳನ್ನು ಕೊಡುಗೆಯಾಗಿ ನೀಡಿದರು. ಭಗವತಿ ಪರವಾಗಿ ಬೇಕಲ್ ವರುಣ್‌ರಾಜ್, ಕುಟ್ಟನ ಪ್ರಶಾಂತ್, ಜಗತ್ ದಂಬೆಕೋಡಿ ತಲಾ ಒಂದು ವಿಕೆಟ್ ಪಡೆದರು. ಬೈಲೆ ಮೊನಿಷ್ ಪ್ಲೇಯರ್ ಆಫ್ ದಿ ಮ್ಯಾಚ್ ಬಹುಮಾನ ಪಡೆದುಕೊಂಡರು.

ಇAದು ಫೈನಲ್

ತಾ. ೨೮ ರಂದು (ಇಂದು) ಬೆಳಿಗ್ಗೆ ೯.೩೦ ಗಂಟೆಗೆ ಎರಡನೇ ಕ್ವಾಲಿಫೈಯರ್ ಪಂದ್ಯಾಟ ನಡೆಯಲಿದೆ. ಕಾಫಿ ಕ್ರಿಕೆರ‍್ಸ್ ಹಾಗೂ ಎಂಸಿಬಿ ತಂಡಗಳ ನಡುವೆ ಪಂದ್ಯಾಟ ನಡೆಯಲಿದ್ದು, ಇದರಲ್ಲಿ ವಿಜಯಶಾಲಿಯಾಗುವ ತಂಡ ಫೈನಲ್‌ನಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡದೊAದಿಗೆ ಸೆಣಸಾಡಲಿದೆ. ಫೈನಲ್ ಪಂದ್ಯಾಟ ಮಧ್ಯಾಹ್ನ ೧ ಗಂಟೆಗೆ ನಡೆಯಲಿದ್ದು, ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯ ನಡೆಯಲಿದೆ.

- ಸಂತೋಷ್