ನಾಪೋಕ್ಲು, ಮೇ ೨೭: ಪಾಲೂರು ಗ್ರಾಮದ ಗ್ರಾಮದೇವತೆಯಾದ ಶ್ರೀ ಕಾಳಿಕಾಂಬ ತಾಯಿಯ ವಾರ್ಷಿಕೋತ್ಸವ ಬುಧವಾರ ವಿಜೃಂಭಣೆಯಿAದ ಸಂಪನ್ನಗೊAಡಿತು.
ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ವಾದ್ಯಗೋಷ್ಠಿಯೊಂದಿಗೆ ಭಕ್ತರು ಮೆರವಣಿಗೆ ತೆರಳಿ ದೇವರ ಜಳಕ ಕೈಗೊಂಡರು. ಬಳಿಕ ದೇವಾಲಯದಲ್ಲಿ ಮಹಾಪೂಜೆ ನಡೆಯಿತು. ಪ್ರಸಾದ ವಿತರಣೆಯ ಬಲಿಕ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ದಿಗೆ ವಿವಿಧ ಹರಕೆ, ಕಾಣಿಕೆ ಒಪ್ಪಿಸಿದರು. ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ತಕ್ಕ ಮುಖ್ಯಸ್ಥರು ಊರ ಮತ್ತು ಪರವೂರಿನ ಕಾಳಿಕಾಂಬ ಭಕ್ತಾದಿಗಳು ಪಾಲ್ಗೊಂಡಿದ್ದರು.