ಮಡಿಕೇರಿ, ಮೇ ೨೭ : ಮೂರ್ನಾಡು ೩೩/೧೧ಕೆವಿ ಎಂಯುಎಸ್‌ಎಸ್ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ತಾ. ೨೯ ರಂದು ಬೆಳಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಆದ್ದರಿಂದ, ಪಾರಾಣೆ, ನಾಪೋಕ್ಲು, ಹೊದ್ದೂರು, ಮರಗೋಡು, ಮೂರ್ನಾಡು, ಹಾಕತ್ತೂರು, ಕಾಂತೂರು, ಹೊದವಾಡ, ಚೆಯ್ಯಂಡಾಣೆ, ಕಕ್ಕಬೆ, ನೆಲಜಿ, ಪಾಲೂರು, ಯವಕಪಾಡಿ, ಬೇತು ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಹಾಗೆಯೇ ಪೊನ್ನಂಪೇಟೆ ೬೬/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್ ೧ ನಲ್ಲೂರು, ಎಫ್ ೨ ಬಾಳೆಲೆ, ಎಫ್೨ ರಾಜಾಪುರ ಫೀಢರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ತಾ. ೨೯ ರಂದು ಬೆಳಗ್ಗೆ ೧೦ ರಿಂದ ಸಂಜೆ ೪ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಆದ್ದರಿಂದ ನಲ್ಲೂರು, ಬೆಸಗೂರು, ಪೊನ್ನಪ್ಪಸಂತೆ, ಬಾಳೆಲೆ, ರಾಜಾಪುರ, ಮಳ್ಳೂರು, ನಿಟ್ಟೂರು, ಕೊಟ್ಟಗೇರಿ, ಬಿಳೂರು, ದೇವನೂರು ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.