ಮಡಿಕೇರಿ, ಮೇ ೨೭: ಅಖಿಲ ಭಾರತ ಸಂಯೋಜಿತ ಸಂಶೋಧನಾ ಪ್ರಾಜೆಕ್ಟ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮತ್ತು ಬೆಂಗಳೂರಿನ ವನದುರ್ಗಿ ಅಗಾರ್ವುಡ್ ಇಂಡಿಯಾ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ತಾ. ೨೯ರಂದು ಅರಣ್ಯ ಮಹಾ ವಿದ್ಯಾಲಯದಲ್ಲಿ ಬೆಳಿಗ್ಗೆ ೧೦.೧೫ಕ್ಕೆ ಅಗಾರ್ವುಡ್ ಉತ್ಪಾದನೆ ಮತ್ತು ಇನಾಕ್ಯುಲೇಷನ್ ಕುರಿತು ತರಬೇತಿ ಮತ್ತು ಸಂವಾದವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ೯೪೪೮೩೧೨೯೭೮, ೯೪೮೦೮೩೮೨೧೦ ಸಂಖ್ಯೆಯನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳುವAತೆ ಪ್ರಕಟಣೆ ತಿಳಿಸಿದೆ.