ಮಡಿಕೇರಿ, ಮೇ ೨೬: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸಚಿವ ಸಂಪುಟದ ೨ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೊಡಗು ಜಿಲ್ಲೆಯ ಶಾಸಕರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ನಿರೀಕ್ಷೆ ಹುಸಿಯಾಗಿದೆ.

೨ನೇ ಪಟ್ಟಿಯಲ್ಲಿ ೨೪ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಹೆಚ್.ಕೆ. ಪಾಟೀಲ್, ಕೃಷ್ಣೆಬೈರೇಗೌಡ, ಎನ್. ಚೆಲುವರಾಯಸ್ವಾಮಿ, ಕೆ. ವೆಂಕಟೇಶ್, ಡಾ. ಹೆಚ್.ಸಿ. ಮಹದೇವಪ್ಪ, ಈಶ್ವರ್ ಖಂಡ್ರೆ, ಕ್ಯಾತಸಂದ್ರ ಎನ್. ರಾಜಣ್ಣ, ದಿನೇಶ್ ಗುಂಡೂರಾವ್, ಶರಣಪ್ಪ ದರ್ಶನಪುರ್, ಶಿವಾನಂದ್ ಪಾಟೀಲ್, ಟಿ.ಆರ್. ಬಲ್ಲಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಶಿವರಾಜ್ ತಂಗಡಗಿ, ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಮನಕಲ್ ವೈದ್ಯ, ಲಕ್ಷಿö್ಮ ಹೆಬ್ಬಾಳಕರ್, ರಹೀಂ ಖಾನ್, ಡಿ. ಸುಧಾಕರ್, ಸಂತೋಷ್ ಲಾಡ್, ಎನ್.ಎಸ್. ಬೋಸೆರಾಜ್, ಬಿ.ಎಸ್. ಸುರೇಶ್, ಮಧುಬಂಗಾರಪ್ಪ, ಡಾ. ಎಂ.ಸಿ. ಸುಧಾಕರ್, ಬಿ. ನಾಗೇಂದ್ರ ಅವರುಗಳು ಇದ್ದಾರೆ. ತಾ. ೨೭ ರಂದು (ಇಂದು) ನೂತನ ಸಚಿವರುಗಳು ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಹುಸಿಯಾದ ನಿರೀಕ್ಷೆ

ಈ ಬಾರಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುತ್ತದೆ ಎಂಬ ಅಚಲ ವಿಶ್ವಾಸ ಕಾಂಗ್ರೆಸ್ ಪಾಳಯದಲ್ಲಿತ್ತು. ಮೊದಲ ಪಟ್ಟಿ ಬಿಡುಗಡೆಯಾದ ನಂತರವೂ ೨ನೇ ಪಟ್ಟಿಯಲ್ಲಿ ಸ್ಥಾನ ದೊರಕುವ ವಿಶ್ವಾಸವಿತ್ತು. ಆದರೆ, ಸಂಪುಟದಿAದ ಕೈ ಬಿಟ್ಟಿರುವುದು ಜನವಲಯ ಹಾಗೂ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ.