ಸುಂಟಿಕೊಪ್ಪ, ಮೇ ೨೭: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಡಿ.ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್ ಕಪ್ ಪುಟ್ಬಾಲ್ ಪಂದ್ಯಾವಳಿಯು ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತಿಯೊಂದಿಗೆ ತಾ. ೨೮ರಂದು ಸಂಪನ್ನಗೊಳ್ಳಲಿದೆ.

ಕಳೆದ ೨೫ ವರ್ಷಗಳಿಂದ ಈ ಪಂದ್ಯಾವಳಿಯ ಆಯೋಜಕರಾಗಿರುವ ಬೆಟ್ಟಗೇರಿ ತೋಟದ ಮಾಲೀಕರಾಗಿರುವ ಡಿ.ವಿನೋದ್ ಶಿವಪ್ಪ ಉದ್ಘಾಟಿಸಲಿದ್ದು, ಡಿ.ವಿಶಾಲ್ ಶಿವಪ್ಪ ಅವರು ಬಹುಮಾನ ವಿತರಿಸಲಿದ್ದಾರೆ. ನೂತನ ಶಾಸಕದ್ವಯಾರಾದ ಡಾ. ಮಂಥರ್‌ಗೌಡ ಮತ್ತು ಎ.ಎಸ್.ಪೊನ್ನಣ್ಣ ಅವರೊಂದಿಗೆ ಕನ್ನಡ ಚಿತ್ರರಂಗದ ಉದೋಯೋನ್ಮುಖ ತಾರೆಯರಾದ ಶುಭ್ರ ಅಯ್ಯಪ್ಪ ಮತ್ತು ಅಭಿಷೇಕ್ ಅಂಬರೀಷ್ ಪಾಲ್ಗೊಳ್ಳಲಿದ್ದಾರೆ.

ಇವರೊಂದಿಗೆ ವಿಟ್ಲದ ಮಾಜಿ ಶಾಸಕ ಕೆ.ಎಂ.ಇಬ್ರಾಹಿA, ಪೊಲೀಸ್ ವರೀಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್, ಕಾಫಿ ಬೆಳೆಗಾರರಾದ ಆನಂದ್ ಬಸಪ್ಪ ಮತ್ತು ಗೌತಮ್ ಬಸಪ್ಪ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಕಾಂಗ್ರೆಸ್ ಮುಖಂಡ ಪಿ.ಸಿ.ಹಸೈನಾರ್, ಉದ್ಯಮಿ ಹರಪಳ್ಳಿ ರವೀಂದ್ರ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ರಾಜ್ಯ ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ಎಸ್‌ಎಲ್‌ಎನ್ ಸಂಸ್ಥೆಯ ಮುಖ್ಯಸ್ಥ ಸಾತಪನ್ ಮತ್ತು ವಿಶ್ವನಾಥನ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಸಿದ್ಧಲಿಂಗಪುರದ ಉದ್ಯಮಿ ಎ.ಎಸ್.ರಾಮಣ್ಣ, ಪ್ರಶಾಂತ್ ವೆಂಕಟರಾಮಣ್ಣ, ಬ್ಲೂಬಾಯ್ಸ್ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಜರ್ಮಿಡಿಸೋಜ ಅವರುಗಳು ಭಾಗವಹಿಸಲಿದ್ದಾರೆ ಎಂದು ಬ್ಲೂಬಾಯ್ಸ್ ಯುವಕ ಸಂಘದ ಪ್ರಕಟಣೆ ತಿಳಿಸಿದೆ.

ಈ ಬಾರೀ ವಿಜೇತ ತಂಡಕ್ಕೆ ರೂ ಒಂದು ಲಕ್ಷ ನಗದು ಮತ್ತು ಗೋಲ್ಡ್ ಕಪ್ ದೊರೆಯಲಿದೆ. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.೫೦,೦೦೦ ನಗದು ಮತ್ತು ಆಕರ್ಷಕ ಟ್ರೋಫಿ ಜೊತೆ ವೈಯಕ್ತಿಕ ಬಹುಮಾನ ನೀಡಲಾಗುವುದು.