ಮಡಿಕೇರಿ, ಮೇ ೨೬: ಹೊದ್ದೂರು ಪಾಲೆಮಾಡುವಿನಲ್ಲಿ ಪ್ರಗತಿಯಲ್ಲಿರುವ ನೂತನ ಕ್ರಿಕೆಟ್ ಸ್ಟೇಡಿಯಂ ಸ್ಥಳಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ಅಧ್ಯಕ್ಷರಾದ ರಘುರಾಮ್ಭಟ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಸಿಸಿಐನ ಕ್ಯುರೇಟರ್ ಪ್ರಶಾಂತ್ ಅವರೊಂದಿಗೆ ಕಾಮಗಾರಿ ಪರಿಶೀಲನೆ ನಡೆಸಿದ ಅವರು ಕೆ.ಎಸ್.ಸಿ.ಎ.ಯ ಜಿಲ್ಲಾ ಸಂಯೋಜಕ ಚೇನಂಡ ಪ್ರಥ್ವಿ ದೇವಯ್ಯ ಅವರಿಂದ ಮಾಹಿತಿ ಪಡೆದುಕೊಂಡರು.
ಪ್ರಸ್ತುತ ಕಾಂಪೌAಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ಸುತ್ತಲಿನ ಕೆಲಸ ಬಹುತೇಕ ಪೂರ್ಣಗೊಳ್ಳುವತ್ತ ಸಾಗಿದೆ. ಸದ್ಯದಲ್ಲಿ ಮಳೆಗಾಲ ಆರಂಭವಾಗಲಿರುವು ದರಿಂದ, ಮಳೆಗಾಲ ಮುಗಿದ ಬಳಿಕ ಪೂರ್ಣಪ್ರಮಾಣದ ಕೆಲಸವನ್ನು ಕೈಗೆತ್ತಿಕೊಳ್ಳುವ ಬಗ್ಗೆ ಅವರು ಇಂಗಿತ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಸಾಕಷ್ಟು ಸಮಯಗಳಿಂದ ಕಾರಣಾಂತರಗಳಿAದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅಡ್ಡಿ ಎದುರಾಗಿತ್ತು. ಇದೀಗ ಕೆಲವು ಸಮಯದ ಹಿಂದೆ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಿ ಇದಕ್ಕೆ ಮಂಜೂರು ಮಾಡಿರುವ ಜಾಗದ ಅಗತ್ಯ ದಾಖಲೆಗಳನ್ನು ಕೆ.ಎಸ್.ಸಿ.ಎ.ಗೆ ಹಸ್ತಾಂತರಿಸಿದೆ. ಜಿಲ್ಲಾಡಳಿತದ ತ್ವರಿತ ಸ್ಪಂದನೆಯನ್ನು ರಘುರಾಮ್ಭಟ್ ಸ್ಮರಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಜಾಗದ ಅಧಿಕೃತ ಹಸ್ತಾಂತರದ ಬಳಿಕ ಆರಂಭಿಕ ಹಂತದ ಕಾಮಗಾರಿಗಳು ಜರುಗುತ್ತಿದ್ದು, ವಸ್ತುಸ್ಥಿತಿಯ ಬಗ್ಗೆ ರಘುರಾಮ್ಭಟ್ ಹಾಗೂ ಕ್ಯುರೇಟರ್ ಪ್ರಶಾಂತ್ ಅವಲೋಕಿಸಿದ್ದಾಗಿ ಪ್ರಥ್ವಿದೇವಯ್ಯ ಅವರು ತಿಳಿಸಿದ್ದಾರೆ.