ಗೋಣಿಕೊಪ್ಪಲು, ಮೇ ೨೫: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಕೀರೆ ಹೊಳೆಯು ಹೂಳು ತುಂಬಿದ್ದು ಇನ್ನೂ ಕೂಡ ಹೂಳೆತ್ತುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಮುಂದೆ ಬಂದಿಲ್ಲ. ಕಳೆದ ಬಾರಿ ಸುರಿದ ಭಾರೀ ಮಳೆಗೆ ಕೀರೆ ಹೊಳೆಯು ತುಂಬಿ ಹರಿದಿತ್ತು. ಕೀರೆ ಹೊಳೆಯಲ್ಲಿ ತುಂಬಿದ್ದ ಹೂಳನ್ನು ತೆಗೆಯುವಲ್ಲಿ ಪಂಚಾಯಿತಿ ಕ್ರಮ ವಹಿಸಿತ್ತು. ಇದರಿಂದಾಗಿ ಸಹಜವಾಗಿಯೇ ಹೆಚ್ಚಿನ ಅನಾಹುತ ಸಂಭವಿಸಿರಲಿಲ್ಲ.

ವರ್ಷAಪ್ರತಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಗೋಣಿಕೊಪ್ಪ ಗ್ರಾಮ ಪಂಚಾಯ್ತಿಯ ಆಡಳಿತ ಮಂಡಳಿಯು ಮೇ ತಿಂಗಳು ಮುಗಿಯುತ್ತ ಬಂದರೂ ಈ ಬಗ್ಗೆ ಇನ್ನೂ ಕೂಡ ಕಾರ್ಯ ಪ್ರವೃತ್ತವಾಗಿಲ್ಲ.

ಕಳೆದ ಎರಡು ವರ್ಷಗಳ ಹಿಂದೆ ಕೀರೆ ಹೊಳೆಯ ಬದಿಯಲ್ಲಿರುವ ಬಡಾವಣೆಗಳು ಸೇರಿದಂತೆ ಪ್ರತಿಷ್ಠಿತ ಬಡಾವಣೆಗಳಿಗೆ ಈ ಹೊಳೆಯು ತುಂಬಿ ಹರಿದ ಪರಿಣಾಮ ಎರಡು ದಿನಗಳ ಕಾಲ ನಗರವು ಸ್ತಬ್ಧವಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಪೊನ್ನಂಪೇಟೆ ಮುಖ್ಯರಸ್ತೆ ಸಂಪರ್ಕ ಕಳೆದುಕೊಂಡಿತ್ತು. ಗೋಣಿಕೊಪ್ಪ ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿರುವ ಕಿರಿದಾದ ಸೇತುವೆ ಅಗಲೀಕರಣಗೊಂಡಿದ್ದರೂ ನೀರು ಹರಿಯುವ ಜಾಗವನ್ನು ಇನ್ನಷ್ಟು ಕಿರಿದು ಮಾಡಿದೆ. ಇದರಿಂದ ನೀರು ರಸ್ತೆಯ ಮೇಲ್ಭಾಗದಲ್ಲಿ ಹರಿದರೂ ಅಚ್ಚರಿ ಇಲ್ಲ.

ಜೂನ್ ಮೊದಲ ವಾರದಲ್ಲಿ ಮಳೆ ಆರಂಭವಾಗುವ ಮುನ್ಸೂಚನೆ ಗೋಣಿಕೊಪ್ಪಲು, ಮೇ ೨೫: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಕೀರೆ ಹೊಳೆಯು ಹೂಳು ತುಂಬಿದ್ದು ಇನ್ನೂ ಕೂಡ ಹೂಳೆತ್ತುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಮುಂದೆ ಬಂದಿಲ್ಲ. ಕಳೆದ ಬಾರಿ ಸುರಿದ ಭಾರೀ ಮಳೆಗೆ ಕೀರೆ ಹೊಳೆಯು ತುಂಬಿ ಹರಿದಿತ್ತು. ಕೀರೆ ಹೊಳೆಯಲ್ಲಿ ತುಂಬಿದ್ದ ಹೂಳನ್ನು ತೆಗೆಯುವಲ್ಲಿ ಪಂಚಾಯಿತಿ ಕ್ರಮ ವಹಿಸಿತ್ತು. ಇದರಿಂದಾಗಿ ಸಹಜವಾಗಿಯೇ ಹೆಚ್ಚಿನ ಅನಾಹುತ ಸಂಭವಿಸಿರಲಿಲ್ಲ.

ವರ್ಷAಪ್ರತಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಗೋಣಿಕೊಪ್ಪ ಗ್ರಾಮ ಪಂಚಾಯ್ತಿಯ ಆಡಳಿತ ಮಂಡಳಿಯು ಮೇ ತಿಂಗಳು ಮುಗಿಯುತ್ತ ಬಂದರೂ ಈ ಬಗ್ಗೆ ಇನ್ನೂ ಕೂಡ ಕಾರ್ಯ ಪ್ರವೃತ್ತವಾಗಿಲ್ಲ.

ಕಳೆದ ಎರಡು ವರ್ಷಗಳ ಹಿಂದೆ ಕೀರೆ ಹೊಳೆಯ ಬದಿಯಲ್ಲಿರುವ ಬಡಾವಣೆಗಳು ಸೇರಿದಂತೆ ಪ್ರತಿಷ್ಠಿತ ಬಡಾವಣೆಗಳಿಗೆ ಈ ಹೊಳೆಯು ತುಂಬಿ ಹರಿದ ಪರಿಣಾಮ ಎರಡು ದಿನಗಳ ಕಾಲ ನಗರವು ಸ್ತಬ್ಧವಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಪೊನ್ನಂಪೇಟೆ ಮುಖ್ಯರಸ್ತೆ ಸಂಪರ್ಕ ಕಳೆದುಕೊಂಡಿತ್ತು. ಗೋಣಿಕೊಪ್ಪ ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿರುವ ಕಿರಿದಾದ ಸೇತುವೆ ಅಗಲೀಕರಣಗೊಂಡಿದ್ದರೂ ನೀರು ಹರಿಯುವ ಜಾಗವನ್ನು ಇನ್ನಷ್ಟು ಕಿರಿದು ಮಾಡಿದೆ. ಇದರಿಂದ ನೀರು ರಸ್ತೆಯ ಮೇಲ್ಭಾಗದಲ್ಲಿ ಹರಿದರೂ ಅಚ್ಚರಿ ಇಲ್ಲ.

ಜೂನ್ ಮೊದಲ ವಾರದಲ್ಲಿ ಮಳೆ ಆರಂಭವಾಗುವ ಮುನ್ಸೂಚನೆ