ಚೆಯ್ಯAಡಾಣೆ, ಮೇ ೨೬: ಗುಂಡಿಕೆರೆಯ ಮಂಡೇAಡ ರಫೀಕ್ ಅವರ ಗದ್ದೆಯಲ್ಲಿ ಮೀತಲ್ತಂಡ ಅಕ್ಬರ್ ದುಬೈ ಆಯೋಜಿಸಿದ ಲೆಜೆಂಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವೈಟ್ ಎಲಿಫೆಂಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಸಿಎ ಮನ್ ಝಿಲ್ ತಂಡ ರನ್ನರ್ಸ್ ಪ್ರಶಸ್ತಿ ಗಳಿಸಿತು.
ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ವೈಟ್ ಎಲಿಪೆಂಟ್ ತಂಡ ಗಳಿಸಿದರೆ ದ್ವಿತೀಯ ಸ್ಥಾನವನ್ನು ಅಲ್ ಜೂಕ್ ತಂಡ ಪಡೆದು ಕೊಂಡಿತು. ಇದಕ್ಕೂ ಮುನ್ನ ನಡೆದ ಸೆಮಿಪೈನಲ್ ಪಂದ್ಯದಲ್ಲಿ ಅಲ್ ಜೂಕ್ ತಂಡವನ್ನು ಸೋಲಿಸಿ ಸಿಎ ಮನ್ ಝಿಲ್ ತಂಡವು ಫೈನಲ್ ಹಂತಕ್ಕೆ ಪ್ರವೇಶಿಸಿತ್ತು. ಮತ್ತೊಂದು ಸೆಮಿಫೈನಲ್‌ನಲ್ಲಿ ಸೌದಿ ಮೊಬೈಲ್ ತಂಡವನ್ನು ವೈಟ್ ಎಲಿಫೆಂಟ್ ತಂಡವು ಸೋಲಿಸಿ ಫೈನಲ್ ಪ್ರವೇಶಿಸಿತು. ಪಂದ್ಯ ಪುರುಷ ಪ್ರಶಸ್ತಿಯನ್ನು ಮುಟ್ಟಲ್ ರಸೀಕ್ ಪಡೆದು ಕೊಂಡರೆ, ಉತ್ತಮ ಬೌಲರ್ ಆಗಿ ಸೈದು ಶಾರ್ಜಾ, ಅಲ್‌ರೌಂಡರ್ ಆಗಿ ಎಂ.ಎA. ರಝಾಕ್, ಬೆಸ್ಟ್ ಕ್ಯಾಚರ್ ಆಗಿ ಖಲೀಲ್ ಪ್ರಶಸ್ತಿ ಪಡೆದು ಕೊಂಡರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಹೆಚ್‌ಐಜಿ ಫ್ಯೂಚರ್ ಸಂಘಟನೆಯ ಅಧ್ಯಕ್ಷ ಸಿ.ಎಂ. ಸಲೀಮ್, ಮಾಜಿ ಅಧ್ಯಕ್ಷರಾದ ನಿಝಾರ್ ಎಂ.ಯು., ನಝೀರ್ ಹಾಜಿ, ಬಷೀರ್ ಎಂ.ಬಿ, ಸೈದು ಮೀತಲ್ತಂಡ, ಮಾಜಿ ಸೈನಿಕ ಬಷೀರ್, ಅಚ್ಚು ಕೊಚ್ಚಿ, ಗ್ಲೋಬಸ್ ಟ್ರಾವೆಲ್ಸ್ ಮಾಲೀಕ ಉಬೈದ್, ಶಾಹಿದ್ ಮೀತಲ್ತಂಡ, ಲತೀಫ್ ಸಿ.ಎ. ಮತ್ತಿತರರು ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಬದ್ರುದ್ದೀನ್ ಹಾಗೂ ಲತೀಫ್ ಕಾರ್ಯನಿರ್ವಹಿಸಿದರೆ ವೀಕ್ಷಕ ವಿವರಣೆಯನ್ನು ಶಫೀಕ್ ನಿರ್ವಹಿಸಿದರು.