ಸೋಮವಾರಪೇಟೆ, ಮೇ ೨೬: ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ವತಿಯಿಂದ ರಾಷ್ಟಿçÃಯ ತರಬೇತಿ ದಿನದ ಪ್ರಯುಕ್ತ ರಾಷ್ಟಿçÃಯ ಜೇಸಿಐ ನಿರ್ದೇಶನದಂತೆ..'ಗೈಡೆಡ್ ಬೈ ಪರ್ಪೋಸ್' ವಿಷಯದ ಬಗ್ಗೆ ತರಬೇತಿ ಕಾರ್ಯಾಗಾರ ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆಯಿತು.

ಜೆಸಿಐ ಅಧ್ಯಕ್ಷೆ ರುಬೀನಾ ಎಂ.ಎ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜೇಸಿ ಮತ್ತು ಜೇಸಿಯೇತರರಿಗೆ ವಲಯ ೧೫ ರ ಪ್ರಾವಿಜನಲ್ ರಾಷ್ಟಿçÃಯ ತರಬೇತುದಾರರಾದ ಮೂಡಬಿದಿರೆಯ ವರ್ಷ ಕಾಮತ್ ಮತ್ತು ವಲಯ ಉಪಾಧ್ಯಕ್ಷೆ ಮೈಸೂರಿನ ಆಶಾ ಜೈನ್ ಅವರುಗಳು ತರಬೇತಿ ನೀಡಿದರು. ಜೇಸಿ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆ, ಗ್ರಾಮ ಪಂಚಾಯಿತಿ, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.