ಚಂದ್ರಯಾನ-೨: ಭಾಗಶಃ ವಿಫಲತೆಯ ೪ ವರ್ಷಗಳ ಬಳಿಕ ಚಂದ್ರನ ಪದರದಲ್ಲಿ ರೋವರ್ (ವಾಹನ) ಅನ್ನು ಸುರಕ್ಷಿತವಾಗಿ ಇಳಿಸುವ ಹಂಬಲದಲ್ಲಿರುವ ISಖಔ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಮುಂಬರುವ ಜುಲೈ ತಿಂಗಳಿನಲ್ಲಿ ಚಂದ್ರಯಾನ-೩ ಯೋಜನೆ ಕೈಗೊಳ್ಳಲು ಸಿದ್ಧತೆ ನಡೆಸು ತ್ತಿದೆ.

ಪ್ರಸ್ತುತದ ರಷ್ಯಾ ಆಗಿರುವ ಆಗಿನ ಸೋವಿಯತ್ ಯೂನಿಯನ್, ಅಮೇರಿಕಾ ಹಾಗೂ ಚೀನಾ ದೇಶಗಳು ಬಿಟ್ಟರೆ, ಬೇರಾವ ದೇಶವೂ ಭೂಮಿಯ ಉಪಗ್ರಹವಾಗಿರುವ ಚಂದ್ರನ ಪದರದಲ್ಲಿ ಯಶಸ್ವಿಯಾಗಿ ರೋವರ್ (ಇತರ ಗ್ರಹ, ಉಪಗ್ರಹಗಳಲ್ಲಿ ಸಂಚರಿಸುವ ವಾಹನಗಳ ಸಾಮಾನ್ಯ ಹೆಸರು) ಅನ್ನು ಇಳಿಸಲು ಸಫಲತೆ ಕಂಡಿಲ್ಲ್ಲ. ಭಾರತವು ೨೦೧೯ ರಲ್ಲಿ ಚಂದ್ರಯಾನ-೨ ಮೂಲಕ ಪ್ರಖ್ಯಾತ ರಾಷ್ಟçಗಳ ಪಟ್ಟಿಯಲ್ಲಿ ಸೇರಲು ಶ್ರಮಿಸಿತ್ತಾದರೂ ಲ್ಯಾಂಡರ್ ಹಾಗೂ ರೋವರ್ ಕೊನೆ ಗಳಿಗೆಯಲ್ಲಿ ಚಂದ್ರಲೋಕಕ್ಕೆ ಅಪ್ಪಳಿಸಿ ನಶಿಸಿದವು. ಕೇವಲ ಆರ್ಬಿಟರ್ ಮಾತ್ರ ಚಂದ್ರನ ಕಕ್ಷೆಯನ್ನು ಸುತ್ತುವಲ್ಲಿ ಸಫಲವಾಗಿ ಚಂದ್ರಯಾನ-೨ ಭಾಗಶಃ ಯಶಸ್ವಿಯಾಯಿತಾದರೂ ಅದರ ಮುಖ್ಯ ಉದ್ದೇಶ (ರೋವರ್ ಅನ್ನು ಚಂದ್ರನ ಪದರದಲ್ಲಿ ಸಂಚರಿಸಿ ಹೆಚ್ಚು ಅನ್ವೇಷಣೆ ನಡೆಸುವುದು) ಈಡೇರಲಿಲ್ಲ. ಇದೀಗ ಚಂದ್ರಯಾನ-೩ ಮೂಲಕ ಈ ಗುರಿಯನ್ನು ಸಾಧಿಸಿ ಇಂತಹ ಸಾಧನೆ ಮಾಡಿದ ೪ನೆ ರಾಷ್ಟç ಎಂಬ ಹೆಗ್ಗಳಿಕೆ ಪಡೆಯಲು ಸಿದ್ಧತೆಗಳು ಇಸ್ರೋ ವತಿಯಿಂದ ನಡೆಯುತ್ತಿದೆ. ಜುಲೈ ೧೨ ರಂದು ಈ ಯೋಜನೆಗೆ ಹಸಿರು ನಿಶಾನೆ ದೊರಕಲಿದೆ.

ಚಂದ್ರಯಾನ ೧-ಚಂದ್ರನಲ್ಲಿ ನೀರು ಪತ್ತೆ ಹಚ್ಚಿದ ಹೆಮ್ಮೆ

ಚಂದ್ರಯಾನ ೧ ರೂ.೩೮೬ ಕೋಟಿ ವೆಚ್ಚದ ಯೋಜನೆಯಾಗಿತ್ತು. ಆಂದ್ರಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಪಿ.ಎಸ್.ಎಲ್.ವಿ-ಎಕ್ಸ್.ಎಲ್. (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ಸಹಾಯದಿಂದ ೨೦೦೮ರ ಅಕ್ಟೋಬರ್-೨೨ ರಂದು ಯೋಜನೆಯ ಪ್ರಮುಖ ಭಾಗಗಳಾದ ಆರ್ಬಿಟರ್ ಹಾಗೂ ಇಂಪ್ಯಾಕ್ಟರ್‌ಗಳನ್ನು ಉಡಾವಣೆಗೊಳಿಸಲಾಯಿತು. ನವೆಂಬರ್ ೮ ರಂದು ಇಂಪ್ಯಾಕ್ಟರ್‌ಅನ್ನು ಒಳಗೊಂಡ ಆರ್ಬಿಟರ್ ಚಂದ್ರನ ಸುತ್ತದ ಕಕ್ಷೆಯಲ್ಲಿ ಪ್ರದಕ್ಷಿಸಲಾರಂಭಿಸಿತು. ನವೆಂಬರ್ ೧೪ ರಂದು ಇಂಪ್ಯಾಕ್ಟರ್, ಪೂರ್ವ ಯೋಜಿತದಂತೆ ಆರ್ಬಿಟರ್ ಇಂದ ಬೇರ್ಪಟ್ಟು ಚಂದ್ರನ ದಕ್ಷಿಣ ಭಾಗಕ್ಕೆ ಅಪ್ಪಳಿಸಿತು. ಈ ಜಾಗವನ್ನು ಜವಾಹರ್ ಪಾಯಿಂಟ್ ಎಂದು ಕರೆಯ ಲಾಯಿತು. ಚಂದ್ರನ ಯಾವುದೇ ಭಾಗಕ್ಕೆ ನಿಖರವಾಗಿ ತಲುಪಬಹುದಾದ ತಾಂತ್ರಿಕತೆಯು ಇಸ್ರೋ ಬಳಿಯಿದೆ ಎಂಬುದನ್ನು ಸಾಬೀತುಪಡಿಸುವುದೇ ಚಂದ್ರಯಾನ ೧ ಮುಖ್ಯ ಉದ್ದೇಶವಾಗಿತ್ತು, ಯೋಜನೆಯು ಸಫಲವಾಯಿತು. ಇದಕ್ಕಿಂತ ಇನ್ನೂ ಸಫಲತೆ ಕಂಡ ಇಂಪ್ಯಾಕ್ಟರ್, ತಾನು ಚಂದ್ರನಿಗೆ ಅಪ್ಪಳಿಸಿದ ಸ್ಥಳದಲ್ಲಿ ನೀರಿನ ಅಂಶವನ್ನು ಕಂಡು ಹಿಡಿಯಿತು. ಉಳಿದಂತೆ ಆರ್ಬಿಟರ್, ೩೧೨ ದಿನಗಳ ಕಾಲ ಚಂದ್ರನ ಸುತ್ತದ ಕಕ್ಷೆಯನ್ನು ಪ್ರದಕ್ಷಿಸಿ ನಂತರ ತನ್ನೆಲ್ಲಾ ಸಂಪರ್ಕಗಳನ್ನು ಇಸ್ರೋದೊಂದಿಗೆ ಕಳೆದುಕೊಂಡಿತು.

ಚAದ್ರಯಾನ ೨-ಭಾಗಶಃ ಸಫಲತೆ

ಚಂದ್ರಯಾನ ೧ ಯಶಸ್ವಿ ಬಳಿಕ ಚಂದ್ರಯಾನ ೨ ಮೂಲಕ ಹೊಸ ಇತಿಹಾಸವನ್ನೇ ರೂಪಿಸುವ ಕಾರ್ಯಕ್ಕೆ ಭಾರತ, ಇಸ್ರೋದ ಮೂಲಕ ಕೈ ಹಾಕಿತು. ಚಂದ್ರಯಾನ ೧ ಯೋಜನೆಯಲ್ಲಿ ಆರ್ಬಿಟರ್ ಹಾಗೂ ಇಂಪ್ಯಾಕ್ಟರ್ ಇದ್ದರೆ, ಈ ಬಾರಿ ಆರ್ಬಿಟರ್‌ನೊಂದಿಗೆ ಇಂಪ್ಯಾಕ್ಟರ್ ಬದಲಿಗೆ ಲ್ಯಾಂಡರ್ ಹಾಗೂ ರೋವರ್‌ಅನ್ನು ಕಳುಹಿಸಲಾಯಿತು. ಯೋಜನೆಯ ಒಟ್ಟು ವೆಚ್ಚ ರೂ.೬೦೩ ಕೋಟಿ ಆಗಿತ್ತು.

೨೦೧೯ರ ಜುಲೈ ೨೨ ರಂದು ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಎಲ್.ವಿ.ಎಮ್-೩ (ಲಾಂಚ್ ವೆಹಿಕಲ್ ಮಾರ್ಕ್ ೩) ರಾಕೆಟ್ ಮೂಲಕ ಆರ್ಬಿಟರ್, ರೋವರ್ ಹಾಗೂ ಲ್ಯಾಂಡರ್‌ಗಳು ಉಡಾವಣೆಗೊಂಡವು. ಆಗಸ್ಟ್ ೨೦ ರಂದು ಚಂದ್ರ ಕಕ್ಷೆಯನ್ನು ತಲುಪಿದ ಆರ್ಬಿಟರ್, ರೋವರ್ ಹಾಗೂ ಲ್ಯಾಂಡರ್‌ಗಳು ಪ್ರದಕ್ಷಿಸಲಾರಂಭಿಸಿದವು. ಸೆಪ್ಟೆಂಬರ್ ೬ ರಂದು ಆರ್ಬಿಟರ್‌ನಿಂದ ಬೇರ್ಪಟ್ಟ ಲ್ಯಾಂಡರ್ ಹಾಗೂ ರೋವರ್, ಚಂದ್ರನ ಪದರದ ಮೇಲೆ ನಯವಾಗಿ ಲ್ಯಾಂಡ್ ಆಗಲು (ಈ ಹಿಂದಿನ ಇಂಪ್ಯಾಕ್ಟರ್ ರೀತಿಯ ಘರ್ಷಿತ ಲ್ಯಾಂಡಿಗ್ ರೀತಿ ಅಲ್ಲ) ಪ್ರಯತ್ನಿಸಿದವು. ದುರಾದೃಷ್ಟವಷಾತ್ ಲ್ಯಾಂಡರ್ ಹಾಗೂ ರೋವರ್ ಚಂದ್ರನ ಪದರಕ್ಕೆ ಪದಾರ್ಪಣೆ ಮಾಡ ಬೇಕಾಗಿದ್ದ ಕೆಲವೇ ಕ್ಷಣಗಳ ಮುನ್ನ ಇಸ್ರೋದೊಂದಿಗೆ ಸಂಪರ್ಕ ಕಳೆದು ಕೊಂಡವು. ಲ್ಯಾಂಡಿAಗ್ ವಿಫಲಗೊಂಡಿದ್ದು, ಲ್ಯಾಂಡರ್ ಹಾಗೂ ರೋವರ್ ಪದರಕ್ಕೆ ಅಪ್ಪಳಿಸಿ ನಶಿಸಿ ಹೋಗಿರುವುದಾಗಿ ಊಹಿಸಲಾಗಿದೆ. ಅದಾಗ್ಯೂ ಆರ್ಬಿಟರ್ ಇಂದಿಗೂ ಕೂಡ ಚಂದ್ರನ ಸುತ್ತ ಪ್ರದಕ್ಷಿಸಿ ಮಾಹಿತಿ, ಚಿತ್ರಗಳನ್ನು ಕಳುಹಿಸುತ್ತಾ ವೈಜ್ಞಾನಿಕ ಅಧ್ಯಯನಗಳಿಗೆ ಸಹಕಾರಿಯಾಗಿದೆ.

ಜುಲೈ ೧೨ ರಂದು ಚಂದ್ರಯಾನ ೩

ಚಂದ್ರಯಾನ-೨ ನಲ್ಲಿ ಲ್ಯಾಂಡರ್ ಹಾಗೂ ರೋವರ್ ವಿಫಲತೆ ಕಂಡ ಕಾರಣ ಮತ್ತೊಂದು ಪ್ರಯತ್ನದಲ್ಲಿ ಈ ಯೋಜನೆ ಸಫಲತೆಗೆ ಇಸ್ರೋ ಪಣ ತೊಟ್ಟಿದೆ. ಚಂದ್ರಯಾನ ೨ ನಲ್ಲಿ ಸಂಭವಿಸಿದ ತಪ್ಪು ಗಳನ್ನು ಈ ಬಾರಿಯ ಲ್ಯಾಂಡರ್‌ನಲ್ಲಿ ಸರಿಪಡಿಸಿ ಜುಲೈ ೧೨ ರಂದು ರಾಕೆಟ್ ಎಲ್.ವಿ.ಎಮ್ ೩ ಸಹಾಯ ದಿಂದಲೇ ಲ್ಯಾಂಡರ್ ಹಾಗೂ ರೋವರ್‌ಅನ್ನು ಉಡಾವಣೆಗೊಳಿಸಲಾಗು ವುದು. ಈಗಾಗಲೇ ಚಂದ್ರಯಾನ-೨ ಯೋಜನೆಯ ಆರ್ಬಿಟರ್ ಇನ್ನೂ ಚಲಾವಣೆಯಲ್ಲಿರುವ ಕಾರಣ ಈ ಬಾರಿ ಕೇವಲ ಲ್ಯಾಂಡರ್ ಹಾಗೂ ರೋವರ್ ಮಾತ್ರ ರಾಕೆಟ್ ಮೂಲಕ ಚಂದ್ರನೆಡೆಗೆ ಸಾಗಲಿವೆ. ಒಟ್ಟು ವೆಚ್ಚ ರೂ.೬೦೦ ಕೋಟಿಗೂ ಮಿಗಿಲಾಗಬಹುದೆಂದು ಅಂದಾಜಿಸಲಾಗಿದೆ. ಜುಲೈ ೧೨ ರಂದು ರಾಖೆಟ್ ಸಹಾಯದಿಂದ ರೋವರ್ ಒಳಗೊಂಡ ಲ್ಯಾಂಡರ್ ಉಡಾವಣೆಗೊಳ್ಳಲಿದ್ದು, ಆಗಸ್ಟ್ ೨೩ ರಂದು ಚಂದ್ರನ ದಕ್ಷಿಣ ಧ್ರುವವನ್ನು ಲ್ಯಾಂಡರ್ ಮುಟ್ಟಲಿದ್ದು, ಅದರಿಂದ ರೋವರ್ ಬೇರ್ಪಟ್ಟು ಚಂದ್ರನ ಪದರ ಸಂಚರಿಸಲಿದೆ.

-ಪ್ರಜ್ವಲ್ ಜಿ. ಆರ್.