ಸಿದ್ದಾಪುರ, ಮೇ ೨೫: ಸಿದ್ದಾಪುರದ ಜಗನ್ಮೋಹನ ನಾಟ್ಯಾಲಯದ ೩ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಸಿದ್ದಾಪುರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿ.ಪಂ ಮಾಜಿ ಸದಸ್ಯರಾದ ಎಂ.ಎಸ್ ವೆಂಕಟೇಶ್ ಉದ್ಘಾಟಿಸಿದರು. ಸಮಾರಂಭದಲ್ಲಿ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ತೀತಮಾಡ ತುಳಸಿ ಗಣಪತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ವೀರಾಜಪೇಟೆ ಸ್ವರಾರ್ಣವ ಸಂಗೀತ ಶಾಲೆಯ ವ್ಯವಸ್ಥಾಪಕ ವಿದ್ವಾನ್ ದಿಲಿಕುಮಾರ್ ಬಿ.ಎಸ್, ತಾಲ್ಲೂಕು ಜಾನಪದ ಕಲಾ ಪರಿಷತ್ ಅಧ್ಯಕ್ಷರಾದ ಟಾಮಿ ಥಾಮಸ್, ಚಂಡೆ ಕಲಾವಿದ ಶಾಜಿ ಸಿ.ಎಸ್, ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾದ ವಿವೇಕ್ ಜೋಯಪ್ಪ ಹಾಗೂ ಜಗನ್ಮೋಹನ್ ನಾಟ್ಯಾಲಯದ ಪ್ರಮುಖರಾದ ವಿದ್ವಾನ್ ರಾಜೇಶ್ ಆಚಾರ್ಯ ಮತ್ತು ಕೃಷ್ಣಪ್ರಿಯ ಹಾಜರಿದ್ದರು. ಕಾರ್ಯಕ್ರಮದಲ್ಲಿ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ-ನೃತ್ಯೋತ್ಸವ ನಡೆಯಿತು.