ಕುಶಾಲನಗರ, ಮೇ ೨೫: ಕುಶಾಲನಗರ ವಿವಿದೋದ್ಧೇಶ ಮಹಿಳಾ ಸಂಘದ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮಹಿಳಾ ಸಮಾಜದ ಆವರಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕುಶಾಲನಗರ ಪುರಸಭೆ ಅಧ್ಯಕ್ಷ ಜಯವರ್ಧನ್ ಚಾಲನೆ ನೀಡಿದರು.

ಮಹಿಳಾ ಸಮಾಜದ ಅಧ್ಯಕ್ಷೆ ಸಲಿನಾ ಡಿ ಕುನ್ನ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂರ‍್ರಾಷ್ಟಿçÃಯ ಮಟ್ಟದ ಕಬಡ್ಡಿ ಮತ್ತು ವೈಟ್‌ಲಿಫ್ಟರ್ ನ್ಯಾನ್ಸಿ ಡಿಕುನ್ನ, ರಾಷ್ಟಿçÃಯ ಫುಟ್ಬಾಲ್ ಆಟಗಾರ್ತಿ ಶಾಶ್ವತಿ ಮಂಜುನಾಥ್, ಪುರಸಭೆ ದಪೇದಾರ್ ಮೋಹನ್ ಕುಮಾರ್, ಕುಶಾಲನಗರ ಪುರಸಭೆ ಉಪಾಧ್ಯಕ್ಷೆ ಸುರಯ್ಯ ಬಾನು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೈದ್ಯಾಧಿಕಾರಿ ಡಾ. ರವಿಚಂದ್ರನ್ ಅವರು ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು. ಮಾರ್ಚ್ ೮ ರಂದು ನಡೆಯ ಬೇಕಾಗಿದ್ದ ಕಾರ್ಯಕ್ರಮ ಕಾರಣಾಂತರಗಳಿAದ ಮುಂದೂಡ ಲಾಗಿತ್ತು ಎಂದು ಅಧ್ಯಕ್ಷೆ ಸಲಿನಾ ಡಿಕುನ್ನ ತಿಳಿಸಿದರು. ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ ವಿತರಣೆ ನಡೆಯಿತು. ಈ ಸಂದರ್ಭ ಉಪಾಧ್ಯಕ್ಷೆ ಎನ್.ಎ. ಸುಶೀಲಾ, ಕಾರ್ಯದರ್ಶಿ ಬಿ.ಆರ್. ಶೈಲ, ಕಾವೇರಿ ಕಾಳಪ್ಪ, ನಳಿನಿ ನಂಜಪ್ಪ, ಕಮಲ ಗಣಪತಿ, ಹೆಚ್.ಎಂ. ಜಯಮ್ಮ, ಟಿ.ಪಿ. ಜಯ ಮತ್ತಿತರರು ಇದ್ದರು.