ನಾಪೋಕ್ಲು, ಮೇ ೨೫: ಮಲೇಶಿಯಾದಲ್ಲಿ ಇತ್ತೀಚೆಗೆ ನಡೆದ ೧೯ನೇ ಅಂತರರಾಷ್ಟಿçÃಯ ಒಕಿನಾವ ಗೊಜು ರಿಯು ಲಿವೋ ಸಿಟಿ ಕರಾಟೆ ಚಾಂಪಿಯನ್ ಶಿಪ್ ೨೦೨೩ ರ ಮಹಿಳೆಯರ ವಿಭಾಗದಲ್ಲಿ ನೆಲಜಿ ಗ್ರಾಮದ ನಾಪನೆರವಂಡ ಡಿಂಪಲ್ ಪೂವಯ್ಯ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕಗಳಿಸಿದ್ದಾರೆ. ಇವರು ಕುಮಿತೆ ವಿಭಾಗದಲ್ಲಿ ಒಂದು ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.ಇವರು ಬೆಂಗಳೂರಿನ ನಿವಾಸಿ ಕುಪ್ಪಣ್ಣಮಾಡ ಮೀನಾ ಮತ್ತು ವಸಂತ ಇವರ ಪುತ್ರಿ ಹಾಗೂ ನಾಪನೆರವಂಡ ಲಿಖಿತ ಪೂವಯ್ಯ ನವರ ಪತ್ನಿ ಆಗಿದ್ದಾರೆ.