ಮಡಿಕೇರಿ, ಮೇ ೨೬ : ಹತ್ತು ಕುಟುಂಬ ಹದಿನೆಂಟು ಗೋತ್ರದ ಕೊಡಗು ಹಾಗೂ

ದಕ್ಷಿಣ ಕನ್ನಡ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇದೇ

ಪ್ರಥಮ ಬಾರಿಗೆ ಏರ್ಪಡಿ ಸಲಾಗಿರುವ ಲೆದರ್ ಬಾಲ್ ಕ್ರಿಕೆಟ್ ಹಬ್ಬ ‘ಗೌಡ ಪ್ರೀಮಿಯರ್ ಲೀಗ್-೨೦೨೩’ ಅಂತಿಮ ಹಂತಕ್ಕೆ ತಲಪಿದೆ. ತಾ.೨೭ರಂದು(ಇAದು) ಪ್ಲೇ ಆಫ್ ಪಂದ್ಯಾವಳಿ ನಡೆಯಲಿದ್ದು, ತಾ.೨೮ರಂದು ಫೈನಲ್ ಪಂದ್ಯಾಟ ನಡೆಯಲಿದೆ.

ಐಪಿಎಲ್ ಮಾದರಿಯಲ್ಲಿ ಬಿಡ್ಡಿಂಗ್ ಮೂಲಕ ಆಟಗಾರರನ್ನು

ಆಯ್ಕೆ ಮಾಡಿ ಎಂಟು ಫ್ರಾಂಚೈಸಿಗಳ ಮೂಲಕ ಎಂಟು ತಂಡಗಳನ್ನು ರಚನೆ ಮಾಡಿ ಇದೇ ಪ್ರಥಮ ಬಾರಿಗೆ ಜನಾಂಗದ ನಡುವೆ

ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಸುವ ಸಾಹಸಕ್ಕೆ ಕೈ ಹಾಕಿದ ಕೊಡಗು ಗೌಡ ಯುವ ವೇದಿಕೆಯ ಪ್ರಥಮ ಯತ್ನಕ್ಕೆ ಯಶಸ್ಸು ಸಿಕ್ಕಿದ್ದು, ಸುರಿಯುವ ಮಳೆಯ ನಡುವೆಯೂ ಪಂದ್ಯಾವಳಿಯನ್ನು ನಡೆಸಿಕೊಂಡು ಬರಲಾಗಿದೆ. ಹತ್ತು ದಿನಗಳ ಕಾಲದ ಪಂದ್ಯಾಟ ಕಳೆದ ತಾ. ೨೦ರಿಂದ ಆರಂಭಗೊAಡು ಮಡಿಕೇರಿಯ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈಗಾಗಲೇ ಲೀಗ್ ಹಂತದ ಪಂದ್ಯಾಟಗಳು ಮುಕ್ತಾಯ ಕಂಡಿವೆ.

(ಮೊದಲ ಪುಟದಿಂದ) ಕೊನೆಯ ಘಟ್ಟ ಎಂಬAತೆ ನಾಲ್ಕು ತಂಡಗಳು ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆದಿದ್ದು, ತಾ. ೨೭ರಂದು ಪ್ಲೇ ಆಫ್ ಪಂದ್ಯಾವಳಿಗಳು ನಡೆಯಲಿವೆ. ಎರಡು ಪ್ಲೇ ಆಫ್ ಪಂದ್ಯಾವಳಿಗಳು ನಡೆಯಲಿದ್ದು, ಗೆಲುವು ಸಾಧಿಸುವ ತಂಡಗಳು ಫೈನಲ್‌ನಲ್ಲಿ ಸೆಣಸಾಡಲಿವೆ.

ಫೈನಲ್ ಉದ್ಘಾಟನೆ

ಅಂತಿಮ ಪಂದ್ಯಾವಳಿಯ ಉದ್ಘಾಟನೆ ತಾ.೨೮ರಂದು ಮಧ್ಯಾಹ್ನ ೧ ಗಂಟೆಗೆ ನಡೆಯಲಿದೆ. ಕೆಎಸ್‌ಪಿಎಸ್‌ಟಿಎ ರಾಜ್ಯ ಕಾರ್ಯದರ್ಶಿ ಹೆಚ್.ಎಸ್. ಚೇತನ್ ಪಂದ್ಯಾಟ ಉದ್ಘಾಟಿಸುವರು. ಅತಿಥಿಗಳಾಗಿ ಉದ್ಯಮಿ ಚೊಕ್ಕಾಡಿ ಶರತ್ ಕುಶಾಲಪ್ಪ, ಕೊಡಗು ಗೌಡ ಯುವ ವೇದಿಕೆ ಗೌರವ ಅಧ್ಯಕ್ಷ ಪೊನ್ನಚನ ಮಧು ಸೋಮಣ್ಣ, ಯುವ ವೇದಿಕೆ ನಿಕಟಪೂರ್ವ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕುಕ್ಕುನೂರು ಬುಲ್ಸ್ ತಂಡದ ಮಾಲೀಕ ಕುಕ್ಕುನೂರು ಚಂದ್ರಶೇಖರ್, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಮಕ್ಕಳ ತಜ್ಞ ಡಾ.ಕುಶ್ವಂತ್ ಕೋಳಿಬೈಲ್, ಗೌಡ ಕಿಂಗ್ಸ್ ತಂಡದ ಮಾಲೀಕ ಅಜಿರಂಗಳ ರಾಮಣ್ಣ ಸೋಮಪ್ಪ, ಇಲೈಟ್ ಕ್ರಿಕೆಟ್ ಕ್ಲಬ್ ಮಾಲೀಕ ಎಡಿಕೇರಿ ಪ್ರಸನ್ನ, ಟೀಂ ಭಗವತಿ ತಂಡದ ಮಾಲೀಕ ಬಾಣೆಗದ್ದೆ ಸುಜಿತ್ ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭ

ಜಿಪಿಎಲ್ ಕ್ರಿಕೆಟ್ ಹಬ್ಬದ ಸಮಾರೋಪ ಸಮಾರಂಭ ತಾ. ೨೮ರಂದು ಸಂಜೆ ೪ ಗಂಟೆಗೆ ನಡೆಯಲಿದೆ. ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಸ್ಮಯಿ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು (ಮೊದಲ ಪುಟದಿಂದ) ಕೊನೆಯ ಘಟ್ಟ ಎಂಬAತೆ ನಾಲ್ಕು ತಂಡಗಳು ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆದಿದ್ದು, ತಾ. ೨೭ರಂದು ಪ್ಲೇ ಆಫ್ ಪಂದ್ಯಾವಳಿಗಳು ನಡೆಯಲಿವೆ. ಎರಡು ಪ್ಲೇ ಆಫ್ ಪಂದ್ಯಾವಳಿಗಳು ನಡೆಯಲಿದ್ದು, ಗೆಲುವು ಸಾಧಿಸುವ ತಂಡಗಳು ಫೈನಲ್‌ನಲ್ಲಿ ಸೆಣಸಾಡಲಿವೆ.

ಫೈನಲ್ ಉದ್ಘಾಟನೆ

ಅಂತಿಮ ಪಂದ್ಯಾವಳಿಯ ಉದ್ಘಾಟನೆ ತಾ.೨೮ರಂದು ಮಧ್ಯಾಹ್ನ ೧ ಗಂಟೆಗೆ ನಡೆಯಲಿದೆ. ಕೆಎಸ್‌ಪಿಎಸ್‌ಟಿಎ ರಾಜ್ಯ ಕಾರ್ಯದರ್ಶಿ ಹೆಚ್.ಎಸ್. ಚೇತನ್ ಪಂದ್ಯಾಟ ಉದ್ಘಾಟಿಸುವರು. ಅತಿಥಿಗಳಾಗಿ ಉದ್ಯಮಿ ಚೊಕ್ಕಾಡಿ ಶರತ್ ಕುಶಾಲಪ್ಪ, ಕೊಡಗು ಗೌಡ ಯುವ ವೇದಿಕೆ ಗೌರವ ಅಧ್ಯಕ್ಷ ಪೊನ್ನಚನ ಮಧು ಸೋಮಣ್ಣ, ಯುವ ವೇದಿಕೆ ನಿಕಟಪೂರ್ವ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕುಕ್ಕುನೂರು ಬುಲ್ಸ್ ತಂಡದ ಮಾಲೀಕ ಕುಕ್ಕುನೂರು ಚಂದ್ರಶೇಖರ್, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಮಕ್ಕಳ ತಜ್ಞ ಡಾ.ಕುಶ್ವಂತ್ ಕೋಳಿಬೈಲ್, ಗೌಡ ಕಿಂಗ್ಸ್ ತಂಡದ ಮಾಲೀಕ ಅಜಿರಂಗಳ ರಾಮಣ್ಣ ಸೋಮಪ್ಪ, ಇಲೈಟ್ ಕ್ರಿಕೆಟ್ ಕ್ಲಬ್ ಮಾಲೀಕ ಎಡಿಕೇರಿ ಪ್ರಸನ್ನ, ಟೀಂ ಭಗವತಿ ತಂಡದ ಮಾಲೀಕ ಬಾಣೆಗದ್ದೆ ಸುಜಿತ್ ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭ

ಜಿಪಿಎಲ್ ಕ್ರಿಕೆಟ್ ಹಬ್ಬದ ಸಮಾರೋಪ ಸಮಾರಂಭ ತಾ. ೨೮ರಂದು ಸಂಜೆ ೪ ಗಂಟೆಗೆ ನಡೆಯಲಿದೆ. ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಸ್ಮಯಿ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಬಿ.ಜಿ.ಅನಂತಶಯನ, ಸೋನಾ ಟಿವಿಎಸ್ ವ್ಯವಸ್ಥಾಪಕ ಎಂ.ಜಿ. ಪೂವಯ್ಯ ಭಾಗವಹಿಸುವರು. ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಕಾರ್ಯ ಕೂಡ ನಡೆಯಲಿದೆ. ಪಂದ್ಯಾವಳಿಯ ಯಶಸ್ಸಿಗಾಗಿ ಯುವ ವೇದಿಕೆಯ ಅಧ್ಯಕ್ಷ ಜಗದೀಶ್ ಮಾದಪ್ಪ, ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ, ಉಪಾಧ್ಯಕ್ಷ ಕೋಚನ ಅನುಪ್, ಖಜಾಂಚಿ ಮೂಲೆಮಜಲು ಮನೋಜ್ ನೇತೃತ್ವದಲ್ಲಿ ತಂಡದವರು ಎಲ್ಲ ರೀತಿಯಲ್ಲಿಯೂ ಶ್ರಮ ವಹಿಸುತ್ತಿದ್ದಾರೆ.

? ಕುಡೆಕಲ್ ಸಂತೋಷ್