ಪೊನ್ನAಪೇಟೆ.ಮೇ.೨೪: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಸೆವೆನ್ ಸೈಡ್ ಎ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು (ವೈಟ್), ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು, ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜು ಮತ್ತು ಗೋಣಿಕೊಪ್ಪಲು ಕಾವೇರಿ ಕಾಲೇಜು (ಬ್ಲೂ) ತಂಡ ಸೆಮಿಫೈನಲ್ ಪ್ರವೇಶಿಸಿವೆ. ತಾ. ೨೫ರಂದು (ಇಂದು) ಫೈನಲ್ ಪಂದ್ಯ ನಡೆಯಲಿದೆ.
ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು, ಬೆಂಗಳೂರು ಕ್ರೆöÊಸ್ಟ್ ಕಾಲೇಜು ವಿರುದ್ಧ ೮-೨ ಗೋಲುಗಳಿಂದ ಜಯಭೇರಿ ಬಾರಿಸಿತು.
ಮೈಸೂರು ಎಸ್‌ಜೆಜಿಸಿ, ನಿಟ್ಟೆ ಕಾಲೇಜು ಬೆಂಗಳೂರು ವಿರುದ್ಧ ೨-೦ ಗೋಳುಗಳ ಜಯ ಸಾಧಿಸಿತು. ಗೋಣಿಕೊಪ್ಪಲು ಕಾವೇರಿ ಕಾಲೇಜು (ವೈಟ್), ಮೈಕಾ ಕಾಲೇಜು ವಿರುದ್ಧ ೪-೩ ಗೋಲುಗಳ ವಿಜಯ ಸಾಧಿಸಿತು.
ಗೋಣಿಕೊಪ್ಪಲು ಕಾವೇರಿ ಪಾಲಿಟೆಕ್ನಿಕ್, ಮೈಸೂರು ಮಹಾಜನಾಸ್ ಕಾಲೇಜನ್ನು ೩-೦ ಗೋಲುಗಳಿಂದ ಸೋಲಿಸಿತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜು, ಗೋಣಿಕೊಪ್ಪಲು ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿಗಳ ತಂಡವನ್ನು ೬-೩ ಗೋಲುಗಳಿಂದ ಮಣಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಿತು. ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು ಮೂರ್ನಾಡು ಪ್ರಥಮ ದರ್ಜೆ ಕಾಲೇಜನ್ನು ೪-೨ ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು.
ಗೋಣಿಕೊಪ್ಪಲು ಕಾವೇರಿ ಕಾಲೇಜು (ವೈಟ್) ಮೈಸೂರು
ಸೆಂಟ್ ಜೋಸೆಫ್ ತಂಡವನ್ನು ೩-೧ ಗೋಲುಗಳಿಂದ ಮತ್ತು
ಗೋಣಿಕೊಪ್ಪಲು ಕಾವೇರಿ ಕಾಲೇಜು (ಬ್ಲೂ) ತಂಡ ಕಾವೇರಿ ಪಾಲಿಟೆಕ್ನಿಕ್ ಕಾಲೇಜು ತಂಡವನ್ನು ೫-೧ ಗೋಲುಗಳ ಹಂತರದಿAದ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟವು. -ಚನ್ನನಾಯಕ