ಮಡಿಕೇರಿ, ಮೇ ೨೪ : ಅವಂದೂರು ಗ್ರಾಮ ನಿವಾಸಿ ದಿ. ಪಟ್ಟಡ ಮುತ್ತಣ್ಣ ಅವರ ಪುತ್ರ ಪಟ್ಟಡ ಪ್ರಭಾಕರ್ (೭೫) ತಾ. ೨೪ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. ೨೫ರಂದು (ಇಂದು) ಸ್ವಗ್ರಾಮ ಅವಂದೂರಿನಲ್ಲಿ ನಡೆಯಲಿದೆ.
ಸಾಹಿತಿಯಾಗಿದ್ದ ಪ್ರಭಾಕರ ಅವರು ಕೊಡಗು ಸಂಗಾತಿ ಎಂಬ ಪ್ರಥಮ ಅರೆಭಾಷೆ ತ್ರೆöÊಮಾಸಿಕ ಸಂಚಿಕೆಯನ್ನು ಹೊರತಂದು ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಭಾರತೀಯ ನೌಕಾಪಡೆಯ ನಿವೃತ್ತ ಉದ್ಯೋಗಿಯಾಗಿರುವ ಇವರು ಬ್ಯಾಂಕ್‌ನಲ್ಲೂ ಉದ್ಯೋಗಿಯಾಗಿದ್ದರು. ಪ್ರಸ್ತುತ ಅವಂದೂರು ದವಸ ಭಂಡಾರ ಮತ್ತು ಬೆಟ್ಟಗೇರಿ ಸಹಕಾರಿ ಪ್ರಾಥಮಿಕ ಶಾಲೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಸಾಹಿತ್ಯ ಕ್ಷೇತ್ರ ಸಾಧನೆಗಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೂ ಭಾಜನರಾಗಿದ್ದರು. ಮೃತರು ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.