ಪೊನ್ನಂಪೇಟೆ, ಮೇ ೨೩: ಗೋಣಿಕೊಪ್ಪಲು ಕಾವೇರಿ ಕಾಲೇಜು ವತಿಯಿಂದ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಸೆವೆನ್ ಎ ಸೈಡ್ ಹಾಕಿ ಪಂದ್ಯಾವಳಿಗೆ ಕಾಫಿ ಬೆಳೆಗಾರರು ಹಾಗೂ ದಾನಿ ಬಯವಂಡ ಮಹಾಬಲ, ಕಾವೇರಿ ಕಾಲೇಜು ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಪ್ಪ ಮತ್ತು ಉಪ ಪ್ರಾಂಶುಪಾಲೆ ಡಾ.ಎ.ಎಸ್.ಪೂವಮ್ಮ ಟ್ರೋಫಿ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕಿ ಪ್ರೊ.ಎಂ.ಎಸ್.ಭಾರತಿ, ಕೊಡಗು ಹಾಕಿ ಕೂರ್ಗ್ ಅಂಪೈರಿAಗ್ ಅಸೋಷಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಪವನ್, ಹಾಕಿ ಕೂರ್ಗ್ ಖಜಾಂಚಿ ಕುಪ್ಪಂಡ ದಿಲನ್, ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಮಾಡ ಸಂತೋಷ್, ಪಂದ್ಯಾವಳಿ ಸಂಚಾಲಕ ಮಿನ್ನಂಡ ಜೋಯಪ್ಪ, ಕಛೇರಿ ಅಧೀಕ್ಷಕಿ ಟಿ.ಕೆ.ಲತಾ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಕುಟ್ಟಂಡ ಕವನ್, ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಅರ್ಷದ್ ಇನ್ನಿತರರು ಇದ್ದರು.

ಫಲಿತಾಂಶ : ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿಗಳ ತಂಡ, ಬೆಂಗಳೂರು ರಾಮಯ್ಯ ಕಾಲೇಜಿನ ವಿರುದ್ಧ ೬-೨ ಗೋಲುಗಳಿಂದ ಜಯಗಳಿಸಿತು. ವೀರಾಜಪೇಟೆ ಸಂತ ಅನ್ನಮ್ನ ಕಾಲೇಜು, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ವಿರುದ್ಧ ೪-೧ ಗೋಲುಗಳ ಜಯಭೇರಿ ಬಾರಿಸಿತು. ಮೂರ್ನಾಡು ಪ್ರಥಮ ದರ್ಜೆ ಕಾಲೇಜು, ಮೈಸೂರು ಸಂತ ಫಿಲೋಮಿನ ಕಾಲೇಜನ್ನು ೫-೦ ಗೋಲಿನಿಂದ ಮಣಿಸಿತು. ಗೋಣಿಕೊಪ್ಪಲು ಕಾವೇರಿ ಕಾಲೇಜು, ಮೈಸೂರು ಸೇಫಿಯಂಟ್ ಕಾಲೇಜನ್ನು ೫-೨ ಗೋಲಿನಿಂದ ಸೋಲಿಸಿತು. ಬೆಂಗಳೂರು ರೇವ ಕಾಲೇಜು ವಿರುದ್ಧ ಗೋಣಿಕೊಪ್ಪ ಕಾವೇರಿ ಪಾಲಿಟೆಕ್ನಿಕ್ ಕಾಲೇಜು ೨-೦ ಗೋಲುಗಳ ಜಯ ಸಾಧಿಸಿತು. ಬೆಂಗಳೂರು ಸೆಂಟ್ ಜೋಸೆಫ್, ವೀರಾಜಪೇಟೆ ಕಾವೇರಿ ಕಾಲೇಜು (ಬಿ) ವಿರುದ್ಧ ೫-೦ ಗೋಲುಗಳ ಜಯ ಸಾಧಿಸಿತು.

ಗೋಣಿಕೊಪ್ಪಲು ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿಗಳ ತಂಡ, ವೀರಾಜಪೇಟೆ ಕಾವೇರಿ ಕಾಲೇಜನ್ನು ೩-೨ ಗೋಲಿನಿಂದ ಮಣಿಸಿತು.

ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜನ್ನು, ಮೂರ್ನಾಡು ಪ್ರಥಮ ದರ್ಜೆ ಕಾಲೇಜು ೫-೧ ಗೋಲಿನಿಂದ ಸೋಲಿಸಿತು.

- ಚನ್ನನಾಯಕ