ಶನಿವಾರಸಂತೆ, ಮೇ ೨೩: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಕಿಯರ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಎಚ್.ಪಿ.ಹಂಪನಾ ವಾರ್ಷಿಕ ಪರೀಕ್ಷೆಯಲ್ಲಿ ೫೭೫ (೯೬%) ಅಂಕಗಳನ್ನು ಗಳಿಸಿದ್ದು, ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.
ಆಂಗ್ಲ ಭಾಷಾ ಹಾಗೂ ವಾಣಿಜ್ಯ ಅಧ್ಯಯನ ವಿಷಯಗಳಿಗೆ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಮರು ಮೌಲ್ಯ ಮಾಪನಾ ಫಲಿತಾಂಶ ಪ್ರಕಟವಾಗಿದ್ದು, ಆಂಗ್ಲ ಭಾಷಾ ೮೮ ಹಾಗೂ ವಾಣಿಜ್ಯ ಅಧ್ಯಯನ ೯೭ ಅಂಕ ದೊರೆತು ಒಟ್ಟು ೫೮೫ (೯೮%) ಅಂಕಗಳನ್ನು ಪಡೆದಿರುತ್ತಾರೆ. ಇವರು ಗುಡುಗಳಲೆ ಗ್ರಾಮದ ಕೊಳವೆಬಾವಿ ಗುತ್ತಿಗೆದಾರ ಪುಟ್ಟರಾಜ್-ನೇತ್ರಾವತಿ ದಂಪತಿಯ ಪುತ್ರಿ.