ಮಡಿಕೇರಿ, ಮೇ ೨೩ : ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಪ್ರಯುಕ್ತ ಮಹಾಗಣಪತಿ ಹೋಮ, ನವಕ ಪಂಚಗವ್ಯ, ಕಳಸ ಪೂಜೆ, ಕಳಶಾಭಿಷೇಕ, ಸರ್ವಾಲಂಕಾರ, ಮಹಾಪೂಜೆ ಹಾಗೂ ಪಾಷಾಣಮೂರ್ತಿ ದೈವದ ಕಳಸ ಪೂಜೆ, ಅಲಂಕಾರ ಪೂಜೆ ಮತ್ತು ಮಂಗಳಾರತಿ, ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭಿಷೇಕ ನಡೆಯಿತು. ಪೂರ್ವಾಹ್ನ ೧೧ ಗಂಟೆಗೆ ನಾಗದರ್ಶನ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಮಧ್ಯಾಹ್ನ ೧೨.೩೦ಕ್ಕೆ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.