ಕೂಡಿಗೆ, ಮೇ ೨೩: ಬದಲಾಗುತ್ತಿರುವ ಹವಾಮಾನ, ಜಾಗತಿಕ ತಾಪಮಾನ ಏರಿಕೆ ಪ್ರಪಂಚದಾದ್ಯAತ ಎಲ್ಲಾ ರಾಷ್ಟçಗಳು ಎದುರಿಸುತ್ತಿರುವ ಸವಾಲಾಗಿದೆ. ಜಗತ್ತಿನ ಗಂಡಾAತರವನ್ನು ತಡೆಗಟ್ಟಲು ಹಸಿರು ಪ್ರೀತಿಯನ್ನು ಜಾಗೃತಿ ಗೊಳಿಸಿ, ಜನರ ಬೇಡಿಕೆಗೆ ಅನುಸಾರವಾಗಿ ಸಸ್ಯಗಳನ್ನು ಪೂರೈಸುವ ಜವಾಬ್ದಾರಿ ಮೂಲಕ ಹುದುಗೂರು ಸಸ್ಯ ಕ್ಷೇತ್ರದಲ್ಲಿ ಸೋಮವಾರಪೇಟೆ ವಲಯ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ೫೨ ಬಗೆಯ ಸಸ್ಯಗಳನ್ನು ಬೆಳೆಸಲಾಗಿದೆ.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಸೋಮವಾರಪೇಟೆ ವಲಯ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಬೆಳೆಸಲಾದ ವಿವಿಧ ಕಾಡು ಜಾತಿ ಮರಗಳ ಜೊತೆಗೆ ಜಿಲ್ಲೆಯಲ್ಲೇ ಪ್ರಥಮವಾಗಿ ಬೆಳೆಸಲಾದ ವಿವಿಧ ಔಷಧೀಯ ಗುಣಗಳನ್ನು ಹೊಂದಿರುವ ಗಿಡಗಳನ್ನು ಹುದುಗೂರು ಸಸ್ಯಕ್ಷೇತ್ರದಲ್ಲಿ ಬೆಳೆಸಲಾಗಿದೆ.
ಹುದುಗೂರು ಸಸ್ಯ ಕ್ಷೇತ್ರದಲ್ಲಿ ೮ ಬಗೆಯ ಔಷಧೀಯ ಸಸ್ಯಗಳನ್ನು ವಿವಿಧ ಜಾತಿಗಳ ಮೂಲಕ ಹೆಚ್ಚು ಆಕರ್ಷಿಸುವ ರೀತಿಯಲ್ಲಿ ಬೆಳೆಸಲಾಗಿದೆ ಈ ಕ್ಷೇತ್ರದಲ್ಲಿ ಔಷಧೀಯ ಸಸ್ಯಗಳಾಗಿ ಕಾಚಂಪುಳಿ, ಬಿಲ್ವಪತ್ರೆ, ಅಮೃತ ಬಳ್ಳಿ, ಚಕ್ರಮುನಿ, ನೋನಿ, ದೊಡ್ಡ ಪತ್ರೆ, ಪಾರಿಚಾತ, ಇನ್ಸುಲಿನ್ ಸಸ್ಯಗಳನ್ನು ಬೆಳೆಸಲಾಗಿದೆ. ಇವುಗಳನ್ನು ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಸರಕಾರದ ನಿಗದಿತ ದರದಲ್ಲಿ ರೈತರಿಗೆ ಮತ್ತು ಸಾರ್ವಜನಿಕೆ ವಿತರಣೆ ಮಾಡಲು ಸಿದ್ಧತೆ ನಡೆದಿದೆ. ಸಮಾಜಿಕ ಅರಣ್ಯ ಇಲಾಖೆಯ ವತಿಯಿಂದ ೨೦೨೨-೨೩ ಸಾಲಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಹುದುಗೂರು ಸಸ್ಯ ಕ್ಷೇತ್ರದಲ್ಲಿ ಇಲಾಖೆಯ ನಿಯಮಾನುಸಾರ ೫೨ ಬಗೆಯ ವಿವಿಧ ಜಾತಿ ಸಸ್ಯಗಳನ್ನು ಬೆಳೆಸಲಾಗಿದೆ.
ನೋಡಲು ಹಸಿರುಮಯವಾಗಿರುವ ಸಸ್ಯ ಕ್ಷೇತ್ರದಲ್ಲಿ ೫೨ ಬಗೆಯ ಸಾವಿರಾರು ಸಸಿಗಳನ್ನು ಇರುವ ಎರಡೂ ಎಕರೆಗಳಷ್ಟು ಪ್ರದೇಶದಲ್ಲಿ ಬೆಳೆಸಲಾಗಿದೆ. ಖಾಸಗಿ ಸಸ್ಯ ಕ್ಷೇತ್ರದಲ್ಲಿ ಬೆಳೆಸುವಂತೆ ಸರಕಾರಿ ಸಸ್ಯ ಕ್ಷೇತ್ರದ ಬೆಳೆಸಿರುವುದು ನೋಡುಗರಿಗೆ ಅಚ್ಚುಮೆಚ್ಚಿನ ಕ್ಷೇತ್ರವಾಗಿದೆ.
ಇದರ ಜೊತೆಯಲ್ಲಿ ಕೊಡಗಿನ ಕಾಡು ಜಾತಿಯ ಹಣ್ಣುಗಳ ಸಸಿಗಳು, ಹಾಗೂ ಪ್ರಥಮ ಬಾರಿಗೆ ಜಾನುವಾರಿಗೆ ಉತ್ತಮ ಮೇವಿನ ಬೆಳೆಯಾದ ಅಗಸೆಸಸಿಗಳು ಮತ್ತು ಮಣ್ಣಿನ ಸವಕಳಿಯನ್ನು ತಡೆಗಟ್ಟಲು ನೆಡಬಹುದಾದ. 'ಲಾವಂಚ' ಸಸ್ಯಗಳನ್ನು ಬೆಳೆಸಲಾಗಿದೆ. ವಿಶೇಷವಾಗಿ ಅಪರೂಪವಾದ ಪಾರಿಜಾತ ಸಸಿಗಳು ಸಹ ಲಭ್ಯವಿರುತ್ತವೆ ಎಂದು ಸೋಮವಾರಪೇಟೆ ವಲಯ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಗಾನಶ್ರಿ ತಿಳಿಸಿದ್ದಾರೆ. ಜಿಲ್ಲೆಯ ರೈತರು ಜಮೀನಿನ ದಾಖಲೆ ಮತ್ತು ಆಧಾರಕಾರ್ಡ್ ನಕಲುಗಳನ್ನು ಒದಗಿಸಿ ಸರಕಾರ ನಿಗದಿಪಡಿಸಿ ದರದಲ್ಲಿ ಪಡೆದುಕೊಳ್ಳಲು ಮನವಿ ಮಾಡಿರುತ್ತಾರೆ.
ಹುದುಗೂರು ಸಸ್ಯ ಕ್ಷೇತ್ರದಲ್ಲಿ ಲಭ್ಯವಿರುವ ಸಸಿಗಳು ನೇರಳೆ, ಮಹಾಗನಿ, ನೆಲ್ಲಿ, ಸೀತಾಫಲ, ಜಂಬುನೇರಳೆ, ಮರಸೇಬು, ಆಮೆಹಣ್ಣು, ಬಿಳಿದೂಪ, ಸಂಪಿಗೆ, ಹಿಪ್ಪೆ, ರುದ್ರಾಕ್ಷಿ, ಬಿದಿರು, ಮೊಟ್ಟೆ ಹಣ್ಣು, ಕಾಚಿಂಪುಳಿ, ಶಿವನಿ, ವಾಡೆ ಹುಳಿ ಕಹಿಬೇವು, ಸೀಮರೂಬ, ಬಿಲ್ವಪತ್ರೆ, ಲಿಚ್ಚಿ, ನಿಂಬೆ, ಗೇರು, ಕಾಡು ಬಾದಾಮಿ, ನಕ್ಷತ್ರ ಹಣ್ಣು, ಶ್ರೀ ಗಂಧ, ದಾಳಿಂಬೆ, ಕೂಳಿ, ಲಾವಂಚ, ಅಗಸೆ, ರಕ್ತ ಚಂದನ , ಪಾರಿಜಾತ, ಹೊನ್ನೆ, ಹೊಳೆದಾಸವಾಳ, ಚಕ್ಕೆ, ಕಹಿಹುಳಿ, ಮುಳ್ಳುಸಂಪಿಗೆ, ದೊಡ್ಡ ಪತ್ರೆ, ಬುಗುರಿ, ನೋನಿ, ತೇಗ, ಹೆಬ್ಬೇವು, ಇನ್ಸುಲಿನ್, ಹಲಸು, ಸಿಲ್ವರ್, ಹೆಬ್ಬಲಸು, ಚಕ್ರಮುನಿ, ಅಮೃತ ಬಳ್ಳಿ ಬೆಣ್ಣೆ ಹಣ್ಣು, ಅಮಟೆ, ಅರಳಿ, ಪಲಾವ್ ಎಲೆ ಸೇರಿದಂತೆ ವಿವಿಧ ಬಗೆಯ ಸಸಿಗಳು ಬೆಳೆಸಲಾಗಿದ್ದು, ಇದರ ಸದುಪಯೋಗವನ್ನು ರೈತರು ಬಳಕೆ ಮಾಡಿಕೊಳ್ಳುವಂತೆ ಸೋಮವಾರಪೇಟೆ ವಲಯ ಸಾಮಾಜಿಕ ಅರಣ್ಯ ಅಧಿಕಾರಿ ಮನವಿ ಮಾಡಿರುತ್ತಾರೆ.