ಮಡಿಕೇರಿ, ಮೇ ೨೩ : ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯಿ) ತರಬೇತಿ ಕೇಂದ್ರದ ವತಿಯಿಂದ ಮಡಿಕೇರಿಯ ಬಾಲಕಿಯರ ಕ್ರೀಡಾ ಹಾಸ್ಟ್ಲ್ಗೆ ಪ್ರತಿಭಾವಂತ ಹಾಕಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ತಾ. ೨೭ ರಂದು ಬೆಳಗ್ಗೆ ೯ ಗಂಟೆಗೆ ನಗರದ ರೇಸ್ಕೋರ್ಸ್ ರಸ್ತೆಯ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ನಡೆಯಲಿದೆ.
೧೨ ರಿಂದ ೧೮ ವರ್ಷದೊಳಗಿನ ಬಾಲಕಿಯರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವ ಕ್ರೀಡಾಪಟುಗಳು ತಮ್ಮ ವೈಯಕ್ತಿಕ ಕ್ರೀಡಾ ಸಾಮಗ್ರಿಗಳನ್ನು ತರಬೇಕು. ವೈದ್ಯಕೀಯ ಅರ್ಹತಾ ಪತ್ರ ವೈದ್ಯಾಧಿಕಾರಿಯವರಿಂದ, ಕ್ರೀಡಾ ಸಾಧನೆಯ ಸರ್ಟಿಫಿಕೇಟ್(ಜಿಲ್ಲಾ, ವಿಭಾಗ, ರಾಜ್ಯ ಹಾಗೂ ಅದಕ್ಕಿಂತ ಮೇಲ್ಪಟ್ಟ ೩ ವರ್ಷದ ಹಿಂದಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು), ಜನ್ಮ ದಿನಾಂಕ ಪ್ರಮಾಣ ಪತ್ರ(ಜನನ ಮರಣ ನೋಂದಣಿ ಅಧಿಕಾರಿಗಳಿಂದ), ಇತ್ತೀಚಿನ ೫ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ವಿಳಾಸ ದೃಢೀಕರಣಗೊಳಿಸಲು ಆಧಾರ್ ಕಾರ್ಡ್ ಈ ದಾಖಲಾತಿಗಳ ಮೂಲ ಪ್ರತಿಯೊಂದಿಗೆ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ತರಬೇಕು.
ಈ ಆಯ್ಕೆ ಪ್ರಕ್ರಿಯೆಯನ್ನು ಹಿಂದಿನ ೩ ವರ್ಷದ ಹಾಕಿ ಕ್ರೀಡಾ ಸಾಧನೆಯ ಪ್ರಮಾಣ ಪತ್ರ ಹಾಗೂ ಕೆಲವೊಂದು ಸಾಯಿ ನಿಗದಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ತುಟ್ಟಿ ಭತ್ಯೆ ಮತ್ತು ಪ್ರಯಾಣ ದರವನ್ನು ನೀಡಲಾಗುವುದಿಲ್ಲ. ಆಯ್ಕೆಯಾದಂತಹ ಕ್ರೀಡಾಪಟುಗಳಿಗೆ ವಸತಿ, ಊಟ, ಕ್ರೀಡಾ ಸಾಮಗ್ರಿ, ವೈದ್ಯಕೀಯ ಖರ್ಚು, ಶೈಕ್ಷಣಿಕ ಸೌಲಭ್ಯವನ್ನು ಉಚಿತವಾಗಿ ಸಾಯಿ ತರಬೇತಿ ಕೇಂದ್ರದಿAದ ಕೊಡಲಾಗುತ್ತದೆ ಎಂದು ಮಡಿಕೇರಿ ಸಾಯಿ ತರಬೇತಿ ಕೇಂದ್ರದ ಆಡಳಿತಾಧಿಕಾರಿ ಮಿನಿ ಉಣ್ಣಿರಾಜ್ ಅವರು ತಿಳಿಸಿದ್ದಾರೆ.