ಕುಶಾಲನಗರ, ಮೇ ೨೩ : ಕುಶಾಲನಗರ ಪುರಸಭೆ ವತಿಯಿಂದ ನನ್ನ ಜೀವನ ನನ್ನ ಸ್ವಚ್ಛ ನಗರ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸೋಮವಾರದಿಂದ ಎರಡು ವಾರಗಳ ಕಾಲ ನಡೆಯಲಿರುವ ಈ ಅಭಿಯಾನಕ್ಕೆ ಪುರಸಭಾ ಅಧ್ಯಕ್ಷರಾದ ಜಯವರ್ಧನ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರು ಬಗೆಯ ಹಳೆಯ ವಸ್ತುಗಳನ್ನು ಪುರಸಭೆಯ ಸಿಬ್ಬಂದಿಗಳು ಸಂಗ್ರಹಿಸುವ ಅಭಿಯಾನ ಆರಂಭಿಸಲಾಗಿದ್ದು ಹಳೆಯ ಬಟ್ಟೆ ಸೀರೆಗಳು, ಆಟಿಕೆ ವಸ್ತುಗಳು, ಮರುಬಳಕೆ ಮಾಡಬಹುದಾದ ಬಟ್ಟೆಗಳು ದಿನಪತ್ರಿಕೆ ಮಾಸಪತ್ರಿಕೆ ಹಳೆಯ ಪುಸ್ತಕಗಳು ಪ್ಲಾಸ್ಟಿಕ್ ಚೀಲಗಳು ಕ್ಯಾರಿ ಬ್ಯಾಗ್ಗಳು ಇಲೆಕ್ಟಾçನಿಕ್ ವಸ್ತುಗಳನ್ನು ಈ ಅಭಿಯಾನದ ಅವಧಿಯಲ್ಲಿ ಸಂಗ್ರಹಿಸಲು ಪುರಸಭೆಯ ಮೂಲಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಕುಶಾಲನಗರದ ಗಣಪತಿ ದೇವಾಲಯ ಎದುರುಗಡೆ ಕೇಂದ್ರದಲ್ಲಿ ಪ್ರತಿನಿತ್ಯ ಬೆಳಿಗ್ಗೆ ೭ ಗಂಟೆಯಿAದ ಮಧ್ಯಾಹ್ನ ೨ ಗಂಟೆ ತನಕ ಈ ವಸ್ತುಗಳನ್ನು ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಪುರಸಭೆಯ ಆರೋಗ್ಯ ಅಧಿಕಾರಿ ಉದಯಕುಮಾರ್ ಈ ಅಭಿಯಾನದ ಸದುಪಯೋಗವನ್ನು ನಾಗರಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭ ಪುರಸಭೆ ಸದಸ್ಯರುಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.