ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ತ್ಯಾಗರಾಜ ಕಾಲೋನಿಯ ನಿವಾಸಿ ಸತೀಶ್ ವಿ.ಆರ್. (೪೦) ಎಂಬವರು ತಾ. ೧೫ರಂದು ಧರ್ಮಸ್ಥಳದ ಸೌತಡ್ಕ ಗಣಪತಿ ದೇವಾಲಯಕ್ಕೆಂದು ತೆರಳಿದವರು ಮತ್ತೆ ಹಿಂತಿರುಗಿಲ್ಲ ಎಂದು ಅವರ ಪತ್ನಿ ರೇಖಾ ಅವರು ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ನಗರ ಠಾಣೆ (೨೨೯೩೩೩/ ೯೪೮೦೮೦೪೯೪೫)ಗೆ ತಿಳಿಸಲು ಪ್ರಕಟಣೆ ಕೋರಿದೆ.