ಗೋಣಿಕೊಪ್ಪಲು, ಮೇ ೨೩: ಗಾಳಿ - ಮಳೆಗೆ ಮನೆಯ ಸಮೀಪವಿದ್ದ ವಿದ್ಯುತ್ ಕಂಬವೊAದು ಮಹಿಳೆಯ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯವಾಗಿರುವ ಘಟನೆ ದ.ಕೊಡಗಿನ ಶ್ರೀಮಂಗಲ ಸಮೀಪದ ಚಂದನಕೆರೆ ಗಿರಿಜನ ಹಾಡಿಯಲ್ಲಿ ನಡೆದಿದೆ.
ನಿನ್ನೆ ಸಂಜೆ ಗಾಳಿ - ಮಳೆಯ ರಭಸಕ್ಕೆ ಹಾಡಿಯ ಬಳಿಯಿದ್ದ ಮರವೊಂದು ಮುರಿದು ಬಿದ್ದಿದೆ. ಈ ವೇಳೆ ರಸ್ತೆಯ ಬಳಿ ಅಳವಡಿಸಿದ್ದ ವಿದ್ಯುತ್ ಕಂಬವು ಕೂಡ ಮುರಿದು ಬಿದ್ದಿದ್ದು, ಈ ವೇಳೆ ಮಳೆಯಿಂದ ರಕ್ಷಣೆ ಪಡೆಯಲು ತನ್ನ ಮನೆಯತ್ತ ತೆರಳುತ್ತಿದ್ದ ಕಾರ್ಮಿಕ ಮಹಿಳೆ ಪರಿಶಿಷ್ಟ ಪಂಗಡದ ಸೀತಮ್ಮ (೬೫) ಅವರ ತಲೆಯ ಭಾಗಕ್ಕೆ ಗಾಯವಾಗಿದೆ. ಸಮೀಪದ ಮನೆಯವರು ಗಾಯಗೊಂಡ ಮಹಿಳೆಯನ್ನು ಶ್ರೀಮಂಗಲ ಆಸ್ಪತ್ರೆಗೆ ದಾಖಲಿಸಿದ್ದು ತುರ್ತು ಚಿಕಿತ್ಸೆ ಕೊಡಿಸುವಲ್ಲಿ ಸಹಕಾರ ನೀಡಿದ್ದಾರೆ.
ತಹಶೀಲ್ದಾರ್ ಭೇಟಿ
ಸುದ್ದಿ ತಿಳಿದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಮಹಿಳೆಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು ಸೆಸ್ಕ್ ಹಿರಿಯ ಅಧಿಕಾರಿಗಳಿಗೆ ಪರಿಹಾರ ನೀಡಲು ನಿರ್ದೇಶನ ನೀಡಿದ್ದಾರೆ.
ಅಲ್ಲದೆ ಘಟನೆಯ ಸ್ಥಳಕ್ಕೆ ಇಲಾಖೆಯ ಸಿಬ್ಬಂದಿಗಳೊAದಿಗೆ ಭೇಟಿ ಮಾಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. -ಜಗದೀಶ್