ಕೂಡಿಗೆ, ಮೇ ೨೨: ಮೂಲತಃ ಕೂಡಿಗೆ ಗ್ರಾಮದ, ಇತ್ತೀಚೆಗಷ್ಟೆ ಅರಕಲಗೋಡಿಗೆ ವಿವಾಹವಾಗಿದ್ದ ಮಹಿಳೆ ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಅರಕಲಗೋಡು ಸಮೀಪದ ನಾಗಲಾಪುರ ಸಮೀಪದ ಹೆದ್ದಾರಿಯಲ್ಲಿ ನಡೆದಿದೆ.

ಶೋಭಾ (೨೫) ಮೃತ ದುರ್ದೈವಿ. ಪತಿ ಐ.ಡಿ. ನವೀನ್‌ನೊಂದಿಗೆ ಅರಕಲಗೋಡಿನಿಂದ ಸ್ವಗ್ರಾಮ ಇಬಡ್ಡಿ ಗ್ರಾಮಕ್ಕೆ ತೆರಳುವ ಸಂದರ್ಭ ನಾಗಲಾಪುರ ತಿರುವಿನಲ್ಲಿ ಹಿಂಬAದಿಯಿAದ ಬಂದ ಲಾರಿ ಬೈಕ್‌ಗೆ ಡಿಕ್ಕಿಪಡಿಸಿದೆ. ಪರಿಣಾಮ ಕೆಳಗೆ ಬಿದ್ದ ಶೋಭಾಳ ಮೇಲೆ ಲಾರಿಯ ಚಕ್ರ ಹರಿದು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಪತಿ ನವೀನ್ ಕೂಡ ಗಂಭೀರ ಸ್ಥಿತಿಯಲ್ಲಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾಸನಗೆ ರವಾನಿಸಲಾಗಿದೆ. ಅಪಘಾತದ ಪರಿಣಾಮಕ್ಕೆ ಶೋಭಾಳ ತಲೆ, ದೇಹ ಛಿದ್ರವಾಗಿದೆ. ಏ. ೧೪ ರಂದು ಶೋಭಾ ಹಾಗೂ ನವೀನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.