ಪೊನ್ನAಪೇಟೆ, ಮೇ ೨೨: ಗೋಣಿಕೊಪ್ಪಲು ಕಾವೇರಿ ಕಾಲೇಜು ವತಿಯಿಂದ ಕಾಲೇಜಿನ ಮೈದಾನದಲ್ಲಿ ತಾ.೨೩ ರಿಂದ (ಇಂದಿನಿAದ) ೨೫ರವರೆಗೆ ರಾಜ್ಯಮಟ್ಟದ ಸೆವೆನ್ ಎ ಸೈಡ್ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಕೊಡಗು ವಿಶ್ವವಿದ್ಯಾನಿಲಯ ವ್ಯಾಪ್ತಿಯ ೨೦ ತಂಡಗಳು ಭಾಗವಹಿಸಲಿವೆ ಎಂದು ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಪ್ಪ ತಿಳಿಸಿದ್ದಾರೆ.