ಮಡಿಕೇರಿ, ಮೇ ೨೨: ತವರುಮನೆ ಹೆಣ್ಣು ಮಕ್ಕಳಿಗೆ ದೇವಾಲಯ ಇದ್ದಂತೆ ಎಂದು ನಿವೃತ ಉಪಾಧ್ಯಾಯಿನಿ ಬಯವಂಡ ಇಂದಿರಾ ಬೆಳ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ದೇವಣಗೇರಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ದೇವಣಗೇರಿ ಮೂಕೊಂಡ ಕುಟುಂಬ ಆಯೋಜಿಸಿದ್ದ ಕೌಟುಂಬಿಕ ಫೈವ್ ಎ ಸೈಡ್ ಫುಟ್ಬಾಲ್ ಪಂದ್ಯಾಟದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಇಂತಹ ಪಂದ್ಯಾಟಗಳನ್ನು ಆಯೋಜಿಸುವುದರಿಂದ ಕುಟುಂಬಗಳ ನಡುವೆ ಇರುವ ಭಿನ್ನಾಭಿಪ್ರಾಯಗಳು ದೂರವಾಗಿ ಪ್ರೀತಿ ವಿಶ್ವಾಸ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು.
ಕಾಫಿ ಬೆಳೆಗಾರ ಮೂಕೊಂಡ ರಘು ರಾಮಚ್ಚ ಪಂದ್ಯಾಟವನ್ನು ಉದ್ಘಾಟಿಸಿದರು. ಮೂಕೊಂಡ ರೋಹಿತ್ ಕಾರ್ಯಕ್ರಮ ನಿರೂಪಿಸಿ ವೀಕ್ಷಕ ವಿವರಣೆ ನೀಡಿದರು.
ಮೂಕೊಂಡ ಕುಟುಂಬದ ಅಧ್ಯಕ್ಷ ರಾಜ ಬೋಪಣ್ಣ ಮಾತನಾಡಿ ಕೊಡವ ಜನಾಂಗದಲ್ಲಿ ಹಾಕಿ, ಕ್ರಿಕೆಟ್, ವಾಲಿಬಾಲ್, ಟಗ್ಆಫ್ವಾರ್ನಂತಹ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಕುಟುಂಬ ಸದಸ್ಯರಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವ ಕಾರಣ ಇದೇ ಮೊದಲ ಬಾರಿಗೆ ಫುಟ್ಬಾಲ್ ಪಂದ್ಯಾಟವನ್ನು ನಡೆಸಲಾಗುತ್ತಿದೆ ಎಂದರು.
ಕ್ರೀಡಾ ಸಂಚಾಲಕ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ ಯಾವುದೇ ಕ್ರೀಡೆಯಾದರೂ ಕೊಡವ ಜನಾಂಗದ ಓರ್ವ ಪ್ರತಿನಿಧಿ ಭಾಗವಹಿಸುತ್ತಾರೆ. ಕೊಡವ ಜನಾಂಗದಲ್ಲಿ ಕ್ರೀಡೆ ರಕ್ತಗತವಾಗಿ ಬಂದಿದೆ. ಮೂರು ದಿನಗಳ ಕಾಲ ನಡೆಯುವ ಪಂದ್ಯಾಟದಲ್ಲಿ ೩೨ ಕುಟುಂಬಗಳು ಭಾಗವಹಿಸುತ್ತಿದೆ ಎಂದು ಹೇಳಿದರು.
ಫಲಿತಾಂಶ
ಮೂಕೊAಡ ಕಪ್ ಪೈವ್ ಎ ಸೈಡ್ ಫುಟ್ಬಾಲ್ ಪಂದ್ಯಾಟದಲ್ಲಿ ಐಚಂಡ, ಮನೆಯಪಂಡ, ಮಂಡೇಡ, ಚೌರೀರ, ಅಂಜಪರವAಡ, ಕಳ್ಳಿಚಂಡ, ಕೊದೇಂಗಡ, ಕಾಡ್ಯಮಾಡ, ಅಡ್ಡೇಂಗಡ, ಕಲಿಯಂಡ, ಕೂತಂಡ, ಕೊಲ್ಲೀರ ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.
ಐಚಂಡ ತಂಡವು ೩-೧ ಗೋಲುಗಳಿಂದ ಪುಲಿಯಂಡ ತಂಡವನ್ನು ಸೋಲಿಸಿತು. ಐಚಂಡ ಪರ ಪವನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಮನೆಯಪಂಡ ತಂಡವು ಕಟ್ಟೇರ ತಂಡವನ್ನು ೪-೩ ಗೋಲುಗಳಿಂದ ಪರಾಭವ ಗೊಳಿಸಿತು. ಮನೆಯಪಂಡ ತಂಡದ ಪರ ಕರುಂಬಯ್ಯ ಹ್ಯಾಟ್ರಿಕ್ ಸಾಧನೆ ಮಾಡಿದರು. ಮಂಡೇಡ ತಂಡ ಆಲೇಮಾಡ ತಂಡವನ್ನು ಸಡನ್ ಡೆತ್ನಲ್ಲಿ ೫-೪ ಗೋಲುಗಳಿಂದ ಮಣಿಸಿತು. ಮಂಡೇಡ ಪರ ಅತಿಥಿ ಆಟಗಾರ ಮಂಡೇಪAಡ ಸುಬಿನ್ ಭೀಮಯ್ಯ ಹ್ಯಾಟ್ರಿಕ್ ಸಾಧನೆ ಮಾಡಿದರು.
ಚೌರೀರ (ಹೊದವಾಡ) ತಂಡವು ಅಲ್ಲಪಂಡ ತಂಡವನ್ನು ೩-೨ ಗೋಲುಗಳಿಂದ ಟೈ ಬ್ರೇಕರ್ನಲ್ಲಿ ಮಣಿಸಿತು. ಅಂಜಪರವAಡ ತಂಡವು ೩-೧ ಗೋಲುಗಳಿಂದ ಶಿವಚಾಳಿಯಂಡ ತಂಡವನ್ನು ಸೋಲಿಸಿತು. ಕಳ್ಳಿಚಂಡ ತಂಡ ಅಣ್ಣೀರ ತಂಡವನ್ನು ೭-೦ ಗೋಲುಗಳಿಂದ ಮಣಿಸಿತು. ಕೊದೇಂಗಡ ತಂಡ ೨-೦ ಗೋಲುಗಳಿಂದ ಕುಮ್ಮಂಡ (ಕೋಕೇರಿ) ತಂಡವನ್ನು ಪರಾಭವಗೊಳಿಸಿತು. ಪಾರುವಂಗಡ ತಂಡ ಬಾರದ ಕಾರಣ ಅಡ್ಡೇಂಗಡ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಕಲಿಯಂಡ ತಂಡ ದೇಯಂಡ ತಂಡವನ್ನು ೬-೫ ಗೋಲುಗಳ ಅಂತರದಲ್ಲಿ ಟೈ ಬ್ರೇಕರ್ನಲ್ಲಿ ಮಣಿಸಿತು. ಕೂತಂಡ ತಂಡ ೨-೦ ಗೋಲುಗಳಿಂದ ಬೊಳಿಯಾಡಿರ ತಂಡವನ್ನು ಪರಾಭವಗೊಳಿಸಿತು. ಕೊಲ್ಲೀರ ತಂಡ ೧-೦ ಗೋಲಿನಿಂದ ಮಲ್ಚೀರ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.