ಸಿದ್ದಾಪುರ, ಮೇ ೨೨: ಕುಶಾಲನಗರ ವಲಯದ ಮೀನುಕೊಲ್ಲಿ ಶಾಖೆಯ ವ್ಯಾಪ್ತಿಯ ಅಭ್ಯತ್‌ಮಂಗಲ, ಅತ್ತಿಮಂಗಲ, ಸಂಪಿಗೆಕೊಲ್ಲಿ, ಕಾಟಿಬಾಣೆ, ಬೆಟ್ಟದಕಾಡು, ನೆಲ್ಲಿಹುದಿಕೇರಿ, ಬರಡಿ, ಒಂಟಿಯAಗಡಿ, ವಾಲ್ನೂರು-ತ್ಯಾಗತ್ತೂರು, ಅರೆಕಾಡು ಭಾಗಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ತಾ.೨೫ ರಂದು ಮತ್ತು ತಾ. ೨೬ರಂದು ನಡೆಯಲಿದೆ. ಆದ್ದರಿಂದ ಕಾಫಿ ತೋಟದ ಮಾಲೀಕರು, ಕಾರ್ಮಿಕರು, ವಾಹನ ಸವಾರರು, ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದು ಕಾಡಾನೆ ಕಾರ್ಯಾಚರಣೆಯಲ್ಲಿ ಇಲಾಖೆ ಯೊಂದಿಗೆ ಸಹಕರಿಸಬೇಕಾಗಿ ಕುಶಾಲನಗರ ಅರಣ್ಯ ವಲಯ ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.