ಗೋಣಿಕೊಪ್ಪಲು, ಮೇ ೨೧: ಗ್ರಾಮೀಣ ಭಾಗವಾದ ದ. ಕೊಡಗಿನ ಬಾಳೆಲೆಯಲ್ಲಿ ಎರಡು ದಿನಗಳ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಕೊಟ್ಟಗೇರಿಯ ಲಕ್ಷ್ಮಣ ತೀರ್ಥ ಸಂಘದ ಯುವಕರ ತಂಡದಿAದ ಮೊದಲ ಬಾರಿಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಆಯೋಜನೆಗೊಂಡಿತ್ತು.
ಪAದ್ಯಾವಳಿಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮಣ ತೀರ್ಥ ಸಂಘದ ಅಧ್ಯಕ್ಷರಾದ ಮಚ್ಚಮಾಡ ಎಂ. ಅಯ್ಯಪ್ಪ ವಹಿಸಿದ್ದರು. ಪಂದ್ಯಾವಳಿಯನ್ನು ಡಾ.ಮಾಪಂಗಡ ಪ್ರತಾಪ್ ಬೆಳ್ಯಪ್ಪ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಬಾಳೆಲೆ ವಿಜಯಲಕ್ಷಿö್ಮ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಕ್ರೀಡಾ ಉಸ್ತುವಾರಿ ಮಾಚಂಗಡ ಉಮೇಶ್ ಮುತ್ತಣ್ಣ, ಲಕ್ಷö್ಮಣ ತೀರ್ಥ ಸಂಘದ ಉಪಾಧ್ಯಕ್ಷ ಅರಮಣಮಾಡ ವಿಶ್ವನಾಥ, ಕಾರ್ಯದರ್ಶಿ ಮಾಚಂಗಡ ಸುಬ್ರಮಣಿ, ಮಾಜಿ ಅಧ್ಯಕ್ಷ ಮಾಪಂಗಡ ಸಂಪತ್ ಅಯ್ಯಪ್ಪ, ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೋಡಮಾಡ ಸುಕೇಶ್ ಭೀಮಯ್ಯ, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ವಿ.ಎಸ್.ಎಸ್.ಎನ್. ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಮಾಜಿ ಅಧ್ಯಕ್ಷ ಮಾಚಂಗಡ ಸುಜಾ ಪೂಣಚ್ಚ, ಮಾಜಿ ಜಿ.ಪಂ. ಸದಸ್ಯ ಬಿ.ಎನ್.ಪ್ರಥ್ಯು ಮತ್ತಿತರರು ಪಾಲ್ಗೊಂಡಿದ್ದರು.
- ಹೆಚ್.ಕೆ. ಜಗದೀಶ್