ಮಡಿಕೇರಿ, ಮೇ ೨೧: ಸರಸ್ವತಿ, ಮಹಾಲಕ್ಷಿö್ಮ ಮತ್ತು ಪಾರ್ವತಿ ದೇವಿಯ ಅಪರಾವತಾರವಾದ ಶ್ರೀ ಭಗವತಿ ದೇವಿಯನ್ನು ಶಾಸ್ತೊçÃಕ್ತವಾಗಿ ಆರಾಧಿಸುವ ಪೊಂಗಾಲ ಉತ್ಸವ ಮಡಿಕೇರಿಯ ಶ್ರೀ ಮುತ್ತಪ್ಪ ಸನ್ನಿಧಿಯಲ್ಲಿ ಶ್ರೀ ಮುತ್ತಪ್ಪ ಮಹಿಳಾ ವೇದಿಕೆ ವತಿಯಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸನ್ನಿಧಿಯಲ್ಲಿ ಪೊಂಗಾಲ ಉತ್ಸವವನ್ನು ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ನಡೆಸಲಾಯಿತು. ಈ ಹಿಂದೆ ಅಷ್ಟಬಂಧ ಪ್ರಶ್ನೆಯಲ್ಲಿ ಪೊಂಗಾಲ ಉತ್ಸವ ನಡೆಸುವುದರಿಂದ ಜನರಿಗೆ ಒಳಿತಾಗುತ್ತದೆ ಎಂದು ತಿಳಿದು ಬಂದ ಹಿನ್ನೆಲೆ ಆಚರಣೆಯನ್ನು ಕಳೆದ ವರ್ಷದಿಂದ ಆರಂಭಿಸಲಾಗಿದೆ.
ಮೂರು ದಿನ ಮಧುಮಾಂಸ ವರ್ಜಿಸಿ ವ್ರತದಲ್ಲಿದ್ದ ಮಹಿಳೆಯರು ಇಂದು ಶುದ್ಧವಾಗಿ, ಶುಭ್ರಬಟ್ಟೆ ಧರಿಸಿ ದೇವಾಲಯಕ್ಕೆ ಆಗಮಿಸಿದರು. ಒಲೆಯನ್ನು ತಾವೇ ನಿರ್ಮಿಸಿ ಸಿಹಿ ಪೊಂಗಲ್ ತಯಾರಿಸಿ ಅದನ್ನು ಉಕ್ಕಿಸಿ ದೇವರಿಗೆ ಸಮರ್ಪಿಸಿದರು. ಆ ಬಳಿಕ ದೇವಾಲಯದ ಆವರಣದಲ್ಲಿ ಪೊಂಗಾಲ ವಿಧಿವಿಧಾನಗಳು ನಡೆದವು. ಈ ಧಾರ್ಮಿಕ ಕಾರ್ಯದಿಂದ ಸುಖಶಾಂತಿ ನೆಮ್ಮದಿ ಆಯುರಾರೋಗ್ಯ ಐಶ್ವರ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಜನರದ್ದು, ಮಡಿಕೇರಿ ಸುತ್ತಮುತ್ತಲಿನ ನೂರಾರು ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭ ಮುತ್ತಪ್ಪ ದೇವಾಲಯದ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ರಾಮನ್, ಉಪಾಧ್ಯಕ್ಷೆ ದೀಪಾ ಕಾವೇರಪ್ಪ, ರಾಣಿ ಮುತ್ತಮ್ಮ, ಕಾರ್ಯದರ್ಶಿ ಗೀತಾ ವಿಜಯ್ ಮತ್ತು ವಿಶಾಲಾಕ್ಷಿ ಹಾಜರಿದ್ದರು.