ಜನ್ಮ ಪಡೆದ ಮಕ್ಕಳಿಗೆ ಬೇಡವಾದವರು., ಎಲ್ಲವನ್ನೂ ಕಳೆದುಕೊಂಡು ಸಮಾಜದ ಅನಾದರಕ್ಕೆ ಒಳಗಾದವರು., ನಿರ್ಗತಿಕ ಹಿರಿಯರನ್ನು ಪೋಷಣೆ ಮಾಡುತ್ತಾ ., ಕುಂದಿ ಹೋಗಿರುವ ಜೀವಗಳಿಗೆ ಒಂದಷ್ಟು ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಾ ಹಿರಿಯ ನಾಗರಿಕರ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಮಡಿಕೇರಿಯ ಶ್ರೀಶಕ್ತಿ ಹಿರಿಯ ನಾಗರಿಕರ ವಸತಿ ನಿಲಯ.

ಆರಂಭದಲ್ಲಿ ದಾವಣಗೆರೆಯಲ್ಲಿ ಜನ್ಮತಾಳಿದ ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಒಂದು ಭಾಗವಾಗಿ ಶ್ರೀಶಕ್ತಿ ವೃದ್ಧಾಶ್ರಮ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ದಾವಣಗೆರೆಯ ಹರಿಹರದ ಗುತ್ತೂರು ಕಾಲೋನಿಯಲ್ಲಿ ಶ್ರೀ ಶಕ್ತಿ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು ೧೯೯೨ ರಲ್ಲಿ ಮಾತೃಶ್ರೀ ದಿವಂಗತ ಲಕ್ಷಿö್ಮÃಬಾಯಿ ಮೆಹರ್ವಾಡೆ ಇವರು ಅನಾಥ ನಿರ್ಗತಿಕರ ಹಾಗೂ ಹಿರಿಯ ನಾಗರಿಕರ ಮತ್ತು ಸಮಾಜದಲ್ಲಿ ನೊಂದ ಹೆಣ್ಣು ಮಕ್ಕಳಿಗಾಗಿ ಸಮಾಜ ಸೇವೆಯನ್ನು ಮನಗಂಡು ಪ್ರಾರಂಭಿಸಿದರು. ನಂತರದಲ್ಲಿ ಈ ಒಂದು ಸಂಸ್ಥೆಯ ಜವಾಬ್ದಾರಿಯನ್ನು ಅವರ ಪುತ್ರ ವಿ. ಎಂ. ಶಶಿಕುಮಾರ್ ಶಿಸ್ತುಬದ್ಧವಾಗಿ ಉತ್ತಮ ರೀತಿಯಲ್ಲಿ ವೃದ್ಧಾಶ್ರಮದ ನಿರ್ವಹಣೆ ಮಾಡುತ್ತಾ ಬರುತ್ತಿದ್ದಾರೆ.

೨೦೦೬ರಲ್ಲಿ ಮಡಿಕೇರಿಯಲ್ಲಿ ಆರಂಭ

ಪ್ರಸ್ತುತ ಸಂಸ್ಥೆಯ ನಿರ್ದೇಶಕರಾಗಿರುವ ಶಶಿಕುಮಾರ್ ಅವರ ಆಸಕ್ತಿಯ ಮೇರೆಗೆ ಕೊಡಗು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ೨೦೦೬ರಲ್ಲಿ ಮಡಿಕೇರಿಯಲ್ಲಿ ೨೫ ವಯೋವೃದ್ಧರಿಗೆ ಅನುಕೂಲವಾಗುವ ರೀತಿಯಲ್ಲಿ ಶ್ರೀ ಶಕ್ತಿ ವೃದ್ಧಾಶ್ರಮವನ್ನು ಪ್ರಾರಂಭಿಸ ಲಾಯಿತು. ಪ್ರಾರಂಭದಿAದ ಇದುವರೆಗೂ ವೃದ್ಧಾಶ್ರಮವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ.

ನಗರದ ಶ್ರೀ ಓಂಕಾರೇಶ್ವರ ದೇವಾಲಯ ಬಳಿ ಇದ್ದ ಪಾಳುಬಿದ್ದ ಬಂಗಲೆಯೊAದರಲ್ಲಿ ಆರಂಭಗೊAಡ ಈ ವೃದ್ಧಾಶ್ರಮ ಪ್ರಸ್ತುತ ತ್ಯಾಗರಾಜ ಕಾಲೋನಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವೃದ್ಧಾಶ್ರಮದಲ್ಲಿ ೨೫ ವೃದ್ಧರಿಗೆ ಅವಕಾಶವಿದ್ದು ಪ್ರಸ್ತುತ ಎಂಟು ಮಂದಿ ವೃದ್ಧ ತಂದೆಯರು, ಹದಿನೇಳು ಮಂದಿ ತಾಯಂದಿರು ಆಶ್ರಯ ಪಡೆಯುತ್ತಿದ್ದಾರೆ. ಇವರಿಗೆ ವೇಳಾಪಟ್ಟಿ ಯಂತೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟವನ್ನು ನೀಡಲಾಗುತ್ತದೆ. ಇವರಿಗೆ ಅವಶ್ಯಕವಾದ ಎಲ್ಲಾ ದಿನಬಳಕೆಯ ವಸ್ತುಗಳು, ಬಟ್ಟೆ, ವೈದ್ಯಕೀಯ ಚಿಕಿತ್ಸೆ ಎಲ್ಲವನ್ನು ಸಂಸ್ಥೆ ವತಿಯಿಂದ ನೀಡಲಾಗುತ್ತಿದೆ.

ಆರೋಗ್ಯ-ಕಾನೂನು ಸೇವೆ

ಈ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿರುವ ವೃದ್ಧ ತಂದೆ-ತಾಯAದಿರಿಗೆ ವೈದ್ಯರಾದ ಡಾಕ್ಟರ್ ಭರತ್ ಎಂಬವರು ಸಂಸ್ಥೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಗಮನ ಹರಿಸುತ್ತಾರೆ. ಆಗಿಂದಾಗೆ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳು ಭೇಟಿ ನೀಡಿ ವೃದ್ಧಾಶ್ರಮದ ಸ್ವಚ್ಛತೆ, ವೃದ್ಧರ ಆರೋಗ್ಯವನ್ನು ಪರಿಶೀಲಿಸುತ್ತಾರೆ. ಉಚಿತ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರು ಭೇಟಿ ನೀಡಿ ಕಾನೂನು ಸಲಹೆಗಳನ್ನು ನೀಡುತ್ತಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಆಗಾಗ್ಗೆ ನಡೆಯುತ್ತಿರುತ್ತವೆ.

ದಾನಿಗಳ ನೆರವಿನಿಂದ ನಿರ್ವಹಣೆ

ವೃದ್ಧಾಶ್ರಮದಲ್ಲಿರುವ ಓರ್ವ ವೃದ್ಧರಿಗೆ ಕೇವಲ ರೂ. ೧೦೦ ಲೆಕ್ಕಾಚಾರ ದಲ್ಲಿ ಸರಕಾರದಿಂದ ಅನುದಾನ ದೊರೆಯುತ್ತಿದೆ. ಸ್ಥಳೀಯ ದಾನಿಗಳ ನೆರವಿನಿಂದ ವೃದ್ಧಾಶ್ರಮವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಮಾನವೀಯ ಸ್ನೇಹಿತರ ಒಕ್ಕೂಟ ವಾಟ್ಸಾಪ್ ಬಳಗದ ವತಿಯಿಂದ ಪ್ರತಿ ತಿಂಗಳು ಔಷಧಿಯನ್ನು ವಿತರಿಸಿ ಔಷಧ ಕೊರತೆಯನ್ನು ನೀಗಿಸುವಲ್ಲಿ ಸಹಕರಿಸುತ್ತಿದೆ. ಸ್ಥಳಿಯ ಸ್ನೇಹಿತರು, ಮಾಧ್ಯಮದವರು, ಸಂಘ ಸಂಸ್ಥೆಗಳು ವೃದ್ಧರ ಮೇಲೆ ಪ್ರೀತಿಯನ್ನಿಟ್ಟು ಬಟ್ಟೆ ವಿತರಣೆ, ಹುಟ್ಟು ಹಬ್ಬದ ಆಚರಣೆ, ವಿವಾಹ ವಾರ್ಷಿಕೋತ್ಸವ, ದೀಪಾವಳಿ, ಕ್ರಿಸ್ಮಸ್ ಇನ್ನಿತರ ಕಾರ್ಯಕ್ರಮಗಳನ್ನು ವೃದ್ಧರೊಂದಿಗೆ ಆಚರಿಸಿ ವೃದ್ಧರ ಮುಖದಲ್ಲಿ ಸಂತೋಷದ ನಗು ತುಂಬಲು ಸಹಕಾರಿಯಾಗಿದ್ದಾರೆ.

ಶವ ಸಂಸ್ಕಾರಕ್ಕೂ ಸಹಕಾರ

ಉಸಿರಿರುವವರೆಗೂ ವೃದ್ಧಾಶ್ರಮದಲ್ಲಿದ್ದು, ಕೊನೆ ಘಳಿಗೆಯಲ್ಲಿ ವೃದ್ಧರು ಮರಣ ಹೊಂದುವ ಸಂದರ್ಭದಲ್ಲೂ ಸಹೃದಯರು ಶವ ಸಂಸ್ಕಾರಕ್ಕೂ ಕೈಜೋಡಿಸುತ್ತಿದ್ದಾರೆ. ನಗರದ ಸಮಾಜ ಸೇವಕರಾದ ಸಂದೀಪ್, ವಿನು, ಚಂದನ್, ದೀಪಕ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದಿವಾಕರ್, ಸಮೀರ್, ರಂಜಿತ್ ಇನ್ನೂ ಹಲವರು ಸಹಕಾರ ಮಾಡಿದರೆ, ಅನಾಥ ಶವ ಸಂಸ್ಕಾರ ಮಾಡಲು ಹಿಂದೂ ರುದ್ರ ಭೂಮಿಯ ಉಸ್ತುವಾರಿ ಯಾಗಿರುವ ಚೇತನ್ ನೆರವು ನೀಡುತ್ತಿದ್ದಾರೆ. ರಾಜು ಎಂಬುವವರುÀÀ ಆ್ಯಂಬ್ಯುಲೆನ್ಸ್ ಸೇವೆಯನ್ನು ನೀಡುತ್ತಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಮೈಕಲ್ ವೇಗಸ್ ಮೃತದೇಹವನ್ನು ಉಚಿತವಾಗಿ ಯಾವುದೇ ಪ್ರತಿಫಲ ನಿರೀಕ್ಷಿಸದೆ ಸ್ಮಶಾನಕ್ಕೆ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಕುಟುಂಬದ ಒಪ್ಪಿಗೆ ಮೇಲೆ ಮೃತ ದೇಹ ದಾನ ಮಾಡಲು ಬಯಸಿದ ಸಂದರ್ಭ ವೈದ್ಯಕೀಯ ವಿಜ್ಞಾನ ಸಂಸ್ಥೆಯವರು ಸಹಕರಿಸುತ್ತಿದ್ದಾರೆ. ಪೊಲೀಸ್ ಇಲಾಖೆಯು ಉತ್ತಮ ರೀತಿಯಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತಾ ಬರುತ್ತಿದ್ದಾರೆ ಎಂದು ಆಶ್ರಮದ ವ್ಯವಸ್ಥಾಪಕ ಸತೀಶ್ ಎಲ್ಲರ ಸಹಕಾರವನ್ನೂ ಸ್ಮರಿಸಿಕೊಳ್ಳುತ್ತಾರೆ.

ಈ ಆಶ್ರಮದ ಸಮಾಜ ಸೇವಾ ಕಾರ್ಯಕ್ಕೆ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟç ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳು ಕೂಡ ದೊರತಿರರುವದು ಶ್ಲಾಘನೀಯ ವಾದುದು. -ಕುಡೆಕಲ್ ಸಂತೋಷ್.

‘ನಮ್ಮ ವೃದ್ಧಾಶ್ರಮದಲ್ಲಿ ಮಕ್ಕಳಿಂದ ತಿರಸ್ಕರಿಸಲ್ಪಟ್ಟವರು, ಮದುವೆ ಆಗದೆ ಹಾಗೆ ಉಳಿದವರು, ಸೊಸೆ-ಅತ್ತೆಯ ಹೊಂದಾಣಿಕೆ ಕೊರತೆಯಿಂದ ಬಂದವರು, ಎಲ್ಲಾ ಸಂಬAಧವನ್ನು ಕಳೆದುಕೊಂಡು ರಸ್ತೆ ಬದಿ ಒಂಟಿ ಯಾಗಿರುವವರು., ಹೀಗೆ ಹತ್ತು ಹಲವಾರು ರೀತಿಯಲ್ಲಿ ನೊಂದವರು ಆಶ್ರಯವನ್ನು ಪಡೆಯುತ್ತಿದ್ದಾರೆ. ನಮ್ಮ ಆಶ್ರಮಕ್ಕೆ ತೋಟಂಬೈಲು ಬೆಳ್ಳಿಯಪ್ಪನವರು ಹಾಗೂ ಚೆಟ್ಟಳ್ಳಿಯ ಪ್ರಿಯಾ ಮೇಡಂ ಅವರ ತಂಡದಿAದ ಅಗತ್ಯ ಸೌಲಭ್ಯವನ್ನು ಕಲ್ಪಿಸಿರುತ್ತಾರೆ. ಇನ್ನು ಹತ್ತು ಹಲವಾರು ದಾನಿಗಳು ನಮ್ಮ ವೃದ್ಧಾಶ್ರಮಕ್ಕೆ ಆಹಾರ, ಬಟ್ಟೆ, ಇನ್ನಿತರ ದಾನದ ರೂಪದಲ್ಲಿ ನಮ್ಮೊಡನೆ ಕೈಜೋಡಿಸಿರುತ್ತಾರೆ. ಒಟ್ಟಿನಲ್ಲಿ ಈ ವೃದ್ಧಾಶ್ರಮವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಜಿಲ್ಲೆಯ ಸರ್ವ ಜನರು, ಸರ್ವ ಸಂಘ ಸಂಸ್ಥೆಗಳು ಪತ್ರಿಕಾ ಮಾಧ್ಯಮದವರು, ನನ್ನ ಸ್ನೇಹಿತರು, ಪ್ರತಿಯೊಬ್ಬರೂ ನಮ್ಮೊಡನೆ ಕೈಜೋಡಿಸಿದ್ದಾರೆ. ಜಿಲ್ಲಾಸ್ಪತ್ರೆಯವರು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇನೆ.’

‘ಶಕ್ತಿ’ಗೆ ಧನ್ಯವಾದ

‘ಈ ಸಂದರ್ಭದಲ್ಲಿ ಶಕ್ತಿ ದಿನಪತ್ರಿಕೆಯ ಸಂಪಾದಕರಿಗೆ ನಾವು ಹೃದಯಪೂರ್ವಕ ಧನ್ಯವಾದಗಳು ತಿಳಿಸಲು ಇಚ್ಛಿಸುತ್ತೇವೆ. ಕಾರಣ ೨೦೦೬ ರಲ್ಲಿ ಪ್ರಾರಂಭಗೊAಡ ನಮ್ಮ ಸಂಸ್ಥೆಯನ್ನು ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟಿಸಿ ಹಲವಾರು ವೃದ್ಧರಿಗೆ ಹಾಗೂ ನೊಂದ ಹೆಣ್ಣು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಹಕರಿಸಿದೆ ಎಂದರೆ ತಪ್ಪಾಗಲಾರದು. ಯಾರಾದರೂ ದಾನಿಗಳು ಯಾರಿಗಾದರೂ ಸಹಾಯ ಮಾಡಲು ದೂರವಾಣಿ ಮೂಲಕ ಶಕ್ತಿ ದಿನಪತ್ರಿಕೆ ಕಚೇರಿಯನ್ನು ಸಂಪರ್ಕಿಸಿದಾಗ ನಮ್ಮ ವೃದ್ಧಾಶ್ರಮಕ್ಕೆ ನೀಡುವಂತೆ ಎಷ್ಟೋ ಬಾರಿ ಹೇಳಿರುವುದು ನನ್ನ ಗಮನಕ್ಕೂ ಕೂಡ ಬಂದಿದೆ. ದಾನಿಗಳು ವೃದ್ಧಾಶ್ರಮಕ್ಕೆ ಅಕ್ಕಿ ಇತರ ಸಾಮಗ್ರಿಗಳನ್ನು ಶಕ್ತಿ ದಿನ ಪತ್ರಿಕೆ ಕಚೇರಿ ಮೂಲಕ ತಂದು ಕೊಟ್ಟಿರುತ್ತಾರೆ.’ -ಸತೀಶ್, ವ್ಯವಸ್ಥಾಪಕರು.