ಪೊನ್ನಂಪೇಟೆ, ಮೇ ೧೯: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಕಸ ಸುರಿಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಿರುಗೂರು ಗ್ರಾಮ ಪಂಚಾಯಿತಿ ೫ ಸಾವಿರ ರೂಪಾಯಿ ದಂಡ ವಿಧಿಸಿದೆ. ಪೊನ್ನಂಪೇಟೆಯಿAದ ಬಾಳೆಲೆಗೆ ಸಂಪರ್ಕ ಕಲ್ಪಿಸುವ ಕಿರುಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ತಂದು ಎಸೆಯಲಾಗುತ್ತಿತ್ತು. ಇದರಿಂದಾಗಿ ಸಾರ್ವಜನಿಕರು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಪಂಚಾಯಿತಿ ವತಿಯಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರೂ ಸಹ ಕಸ ಹಾಕುವ ಚಾಳಿ ಮುಂದುವರೆದಿತ್ತು. ಎಂದಿನAತೆ ಕಸ ತಂದು ಸುರಿಯುತ್ತಿರುವ ಬಗ್ಗೆ ಮಾಹಿತಿ ತಿಳಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುತ್ತಮನೆ ಜೀವನ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಫೀಕ್ ಸೇರಿದಂತೆ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕಸದ ರಾಶಿಯಲ್ಲಿದ್ದ ವಸ್ತು ಖರೀದಿಸಿದ ರಶೀದಿಯಲ್ಲಿ ಪೊನ್ನಂಪೇಟೆ ನಿಸರ್ಗ ಬಡಾವಣೆಯ ರಾಕೇಶ್ ಎಂಬವರ ಹೆಸರಿರುವುದನ್ನು ಗಮನಿಸಿ, ಅವರನ್ನು ಸ್ಥಳಕ್ಕೆ ಕರೆಸಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ನಂತರ ಪಿಡಿಓ ಶಫೀಕ್ ಅವರು ಸ್ಥಳದಲ್ಲೇ ೫ ಸಾವಿರ ರೂಪಾಯಿ ದಂಡ ವಸೂಲಿ ಮಾಡಿ, ಮುಂದೆ ಕಸ ಸುರಿಯದಂತೆ ಎಚ್ಚರಿಕೆ ನೀಡಿದರು. ಈ ಸಂದರ್ಭ ಗ್ರಾಂ.ಪA.ಅಧ್ಯಕ್ಷ ಪುತ್ತಮನೆ ಜೀವನ್, ಗ್ರಾಮಸ್ಥರಾದ ಪುತ್ತಮನೆ ದತ್ತು, ಚೆಪ್ಪುಡಿರ ಸುನಿಲ್, ಆಲೇಮಾಡ ಸುಧೀರ್, ಅಭಿ ಚಿಣ್ಣಪ್ಪ, ಚಿರಿಯಪ್ಪಂಡ ಜೋಯಪ್ಪ, ಪಿ. ಎಸ್. ಹರೀಶ್, ಪಿ. ಎಸ್. ಸುರೇಶ್, ಪಿ. ಕೆ. ಗಿರೀಶ್, ಚೆಪ್ಪುಡಿರ ಕಾಳಪ್ಪ, ಎ.ಜಿ.ಭವನ ಎ.ಪಿ.ಪ್ರಭು, ಕಾಕಮಾಡ ರಾಕೇಶ್ ಇನ್ನಿತರರು ಇದ್ದರು.