ಸೋಮವಾರಪೇಟೆ, ಮೇ ೧೯: ನಿನ್ನೆ ಸುರಿದ ಮಳೆ-ಗಾಳಿಗೆ ವಿದ್ಯುತ್ ಕಂಬವೊAದು ವಾಸದ ಮನೆಯ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದೆ.
ಸಮೀಪದ ತಣ್ಣೀರುಹಳ್ಳ ಗ್ರಾಮದ ಬಿ.ಆರ್. ನಾರಾಯಣ ಎಂಬವರಿಗೆ ಸೇರಿದ ವಾಸದ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು, ಮನೆಗೆ ಹಾನಿ ಸಂಭವಿಸಿದೆ. ಈ ಸಂದರ್ಭ ವಿದ್ಯುತ್ ಸ್ಥಗಿತಗೊಂಡಿದ್ದರಿAದ ಹೆಚ್ಚಿನ ಅಪಾಯ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು ಈವರೆಗೆ ಭೇಟಿ ನೀಡಿಲ್ಲ. ಮನೆಯ ಮೇಲೆ ಬಿದ್ದಿರುವ ಕಂಬವನ್ನು ತೆರವುಗೊಳಿಸಿಲ್ಲ ಎಂದು ಆರೋಪಿಸಿರುವ ಸ್ಥಳೀಯರು, ಇಲಾಖೆಯ ನಿರ್ಲಕ್ಷö್ಯದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.