ನಾಪೋಕ್ಲು, ಮೇ ೧೯: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಶುಕ್ರವಾರದ ಪಂದ್ಯಗಳಲ್ಲಿ ಆಟ್ರಂಗಡ ಮತ್ತು ಚೆಕ್ಕೆರ ತಂಡಗಳು ಫೈನಲ್ಸ್ ಪ್ರವೇಶಿಸಿವೆ. ಭಾನುವಾರ ಈ ಎರಡು ತಂಡಗಳ ನಡುವೆ ಬಾಳೆಯಡ ಕ್ರಿಕೆಟ್ ಕಪ್ಗಾಗಿ ಸೆಣೆಸಾಟ ನಡೆಯಲಿದೆ.
ಶುಕ್ರವಾರ ನಡೆದ ಮೊದಲ ಸೆಮಿ ಫೈನಲ್ಸ್ ಪಂದ್ಯದಲ್ಲಿ ಮಾಳೆಟಿರ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೯೦ ರನ್ ಗಳಿಸಿ ಉತ್ತರವಾಗಿ ಆಡಿದ ಆಟ್ರಂಗಡ ತಂಡ ೪ ವಿಕೆಟ್ ನಷ್ಟಕ್ಕೆ ೯೩ ರನ್ ಗಳಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಪಂದ್ಯದಲ್ಲಿ ಮಂಡುವAಡ ವಿರುದ್ಧ ಚೆಕ್ಕೆರ ತಂಡ ೧ ವಿಕೆಟ್ ನಷ್ಟಕ್ಕೆ ೫೬ ರನ್ ಗಳಿಸಿತು. ಮಂಡುವAಡ ೪ ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸಿ ಚೆಕ್ಕೆರ ತಂಡದ ವಿರುದ್ಧ ಸೋಲನ್ನು ಅನುಭವಿಸಿತು.
ಇಂದು ನಡೆದ ಪಂದ್ಯಾಟಕ್ಕೆ ಡಾ. ಅಮೃತ ನಾಣಯ್ಯ, ಸೌಮ್ಯ ಗಣೇಶ್ ನಾಣಯ್ಯ, ಡಾ. ಕಾಡ್ಯಮಾಡ ಜೀವನ್ ಬೋಪಣ್ಣ, ಡಾ. ಕವಿತಾ ಬೋಪಣ್ಣ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ತಾ. ೨೧ರಂದು ಫೈನಲ್ ಪಂದ್ಯಾಟ ನಡೆಯಲಿದೆ.