ಮಡಿಕೇರಿ, ಮೇ ೧೮: ಕೌಶಲ್ಯ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ನೆರವು ನೀಡಲಾಯಿತು.
ದೇವರಕೊಲ್ಲಿ ಗ್ರಾಮದ ಕೆ.ಎಂ. ಜೀವನ್ ಅವರ ತಂದೆ ಎರಡು ವರ್ಷಗಳ ಹಿಂದೆ ಸಿಡಿಲು ಬಡಿದು ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ತಾಯಿಯೋರ್ವರೇ ದುಡಿದು ಮಗನ ಶಿಕ್ಷಣಕ್ಕೆ ನೆರವಾಗುತ್ತಿದ್ದು, ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ದರ್ಶನ್ಗೆ ಅಗತ್ಯವಿದ್ದ ಮೊಬೈಲ್ ಫೋನ್ ನೀಡಿ ಸಹಾಯ ಮಾಡಲಾಯಿತು. ಅಂತೆಯೇ ಡಾ. ಎಂ.ಜಿ. ಪಾಟ್ಕರ್ ಕೂಡ ದರ್ಶನ್ಗೆ ಆರ್ಥಿಕ ನೆರವು ನೀಡಿದರು. ಮಡಿಕೇರಿಯ ಹಿರಿಯ ಲೆಕ್ಕಪರಿಶೋಧಕ ಅನಂತ ಸುಬ್ಬರಾವ್ ಪುತ್ರಿ ವಿದ್ಯಾ ವಿಷ್ಣುಕಿರಣ್ ಅವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಫೋನ್ ಅನ್ನು ಇನ್ನರ್ ವೀಲ್ ಅಧ್ಯಕ್ಷೆ ಡಾ. ರೇಣುಕಾ ಸುಧಾಕರ್, ಕಾರ್ಯದರ್ಶಿ ಲಲಿತಾ ರಾಘವನ್, ಸದಸ್ಯರಾದ ಜಯಲಕ್ಷಿö್ಮÃ ಪಾಟ್ಕರ್, ಸಲೀಲಾ ಪಾಟ್ಕರ್, ಉಮಾಗೌರಿ, ಮಲ್ಲಿಗೆ ಪೈ, ಆಗ್ನೇಸ್ ಮುತ್ತಣ್ಣ, ಲತಾ ಚಂಗಪ್ಪ, ಲಕ್ಷಿö್ಮÃ ಈಶ್ವರ್ ಭಟ್, ದಾನಿಗಳಾದ ಅನಂತ ಸುಬ್ಬರಾವ್, ಡಾ. ಎಂ.ಜಿ. ಪಾಟ್ಕರ್ ಅವರುಗಳ ಸಮ್ಮುಖದಲ್ಲಿ ವಿದ್ಯಾರ್ಥಿಗೆ ನೀಡಲಾಯಿತು.