ನಾಪೋಕ್ಲು, ಮೇ ೧೯: ಮಲೇಶ್ಯಾದಲ್ಲಿ ತಾ. ೧೨ ರಿಂದ ೧೪ ರತನಕ ನಡೆದಂತಹ ೧೯ನೇ ಅಂರ‍್ರಾಷ್ಟಿçÃಯ ಓಕಿನಾವ ಗೊಜು-ರಿಯು ಇಪೋಹ್ ಸಿಟಿ ಕರಾಟೆ ಚಾಂಪಿಯನ್‌ಶಿಪ್ - ೨೦೨೩ ನಲ್ಲಿ ಬಾಲಕರ (೭-೧೦ ವರ್ಷದೊಳಗಿನ) ವಿಭಾಗದಲ್ಲಿ ಕೊಡಗಿನ ನಂಜರಾಯಪಟ್ಟಣದ ಕೊಳ್ಳಿರ ಯೋಗೇಶ್-ರಮ್ಯಾ ದಂಪತಿ ಪುತ್ರ ಭವಿನ್ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕಗಳನ್ನು ಪಡೆದಿದ್ದಾರೆ.

ಕಟ ವಿಭಾಗದಲ್ಲಿ ಜಪಾನ್ ಪ್ರತಿಸ್ಪರ್ಧಿ ಜೊತೆಯಲ್ಲಿನ ಸೆಣಸಾಟದಲ್ಲಿ ಬೆಳ್ಳಿ ಪದಕ ಹಾಗೂ ಕುಮಿಟಿ ವಿಭಾಗದಲ್ಲಿ ಮಲೇಶ್ಯಾದ ಪ್ರತಿಸ್ಪರ್ಧಿಯೊಂದಿಗೆ ವಿಜೇತನಾಗಿ ಚಿನ್ನದ ಪದಕ ಸಾಧನೆ ಮಾಡಿದ್ದಾನೆ.