ಅಮ್ಮನ ಪ್ರೀತಿ ಮರೆಯಲಾಗದು. ನನಗೆ ಮಾತು ಕಲಿಸಿ ವಿದ್ಯೆ ಕಲಿಸಿದ ನನ್ನಮ್ಮನೇ ನನ್ನ ಮೊದಲ ಗುರು. ನನ್ನಮ್ಮನೇ ನನಗೆ ದೇವರು. ನನ್ನಮ್ಮನ ಪ್ರೀತಿ, ಮಮತೆ ಎಂದೂ ಮರೆಯಲಾಗದು. ಅಮ್ಮನ ಪ್ರೀತಿ ದೊಡ್ಡ ಆಸ್ತಿ. ನಾವೆಷ್ಟೆ ಆಕೆಯನ್ನು ನೋಯಿಸಿ, ನಿಂದಿಸಿದರೂ ಅಮ್ಮನ ಪ್ರೀತಿ ಕಿಂಚಿತ್ತು ಮಾಸದು.
ನನ್ನ ಬಾಳಿನ ಬೆಳಕು ನನ್ನಮ್ಮ. ಬಾನಲ್ಲಿ ಚಂದಿರನ ತೋರಿಸುತ್ತಾ. ಕೈತುತ್ತು ತಿನ್ನಿಸಿದ ನನ್ನಮ್ಮ ಭೂಮಿಗಿಂತ ದೊಡ್ಡ ವಸ್ತು. ನನ್ನುಸಿರಲ್ಲಿ ಉಸಿರಾಗಿ ಬೆರೆತಿರುವ ನನ್ನಮ್ಮನ ಬಿಟ್ಟು ನಾನು ಒಂದು ಕ್ಷಣ ಇರಲಾರೆ. ನನ್ನ ಉಸಿರಿರುವರೆಗೂ ನನ್ನಮ್ಮನಿಗೆ ನಾನೆಂದೂ ನೋವು ಕೊಡಲಾರೆ. ಮಾತೃದೈವೋಭವ ಎನ್ನುವರು. ನನ್ನಮ್ಮನ ಪ್ರೀತಿ ಎಂದೂ ನದಿಯಂತೆ ಹರಿಯುತ್ತಿರಲಿ. ಅಮ್ಮನ ದಿನದಂದು ನನ್ನಮ್ಮನಿಗೆ ಶುಭಾಶಯ.
- ಅಜ್ಜಮಾಡ ಮಂತ್ರ ಮುತ್ತಮ್ಮ, ೧ನೇ ತರಗತಿ,
ಲಯನ್ಸ್ ಸ್ಕೂಲ್, ಗೋಣಿಕೊಪ್ಪ.ನನಗೆ ಅಮ್ಮನೇ ಎಲ್ಲಾ
ನನ್ನಮ್ಮ ಗೃಹಿಣಿ. ಅವಳು ನನ್ನ ಮೊದಲ ಶಿಕ್ಷಕಿ. ಓದಲು, ಹೋಮ್‌ವರ್ಕ್ ಮಾಡಲು ಸಹಾಯ ಮಾಡುತ್ತಾಳೆ. ನನ್ನ ಗುರು, ನನ್ನ ಶಕ್ತಿ, ನನಗೆ ಅಮ್ಮನೇ ಎಲ್ಲಾ. ಕೆಲವು ಸಲ ಡಾಕ್ಟರ್ ಆಗುತ್ತಾಳೆ. ಟೀಚರ್ ಆಗುತ್ತಾಳೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ತಪ್ಪು ಮಾಡಿದಾಗ ಗುದ್ದಿ ಮುದ್ದು ಮಾಡುತ್ತಾಳೆ.
ಐ ಲವ್ ಯು ಅಮ್ಮ.
- ಜಿ.ವಿ. ಚಿರಾಯು, ೧ನೇ ತರಗತಿ, ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆ, ಭದ್ರಾವತಿ. ಮೊ. ೬೩೬೨೯೩೩೧೬೮.ನನ್ನ ಮುದ್ದಿನ ಅಮ್ಮ
ತಾಯಿ ಮೊದಲ ಶಿಕ್ಷಕಿ. ಮಗು ತನ್ನ ಜೀವನದಲ್ಲಿ ಹೇಳುವ ಮೊದಲ ಪದವು ಸಹ ತಾಯಿ ಅಥವಾ ಅಮ್ಮ. ಅಮ್ಮ ತನ್ನ ಇಡೀ ಜೀವನವನ್ನು ತ್ಯಾಗ ಮಾಡುತ್ತಾಳೆ ಮತ್ತು ತನ್ನ ಇಡೀ ಜೀವನವನ್ನು ನಮಗೆ ಅರ್ಪಿಸುತ್ತಾಳೆ. ಯಾವಾಗಲೂ ತನ್ನ ದುಃಖಗಳನ್ನು ಮರೆತು ನನ್ನ ಸಂತೋಷದ ಬಗ್ಗೆ ಯೋಚಿಸುತ್ತಾಳೆ... ನನಗೆ ಒಂದೊAದು ಅಕ್ಷರ, ಪದಗಳನ್ನು ಕಲಿಸಿಕೊಟ್ಟವಳು ತಾಯಿ... ನಮ್ಮ ಕಾಲಿನ ಮೇಲೆ ನಡೆಯಲು ಕಲಿಸುವವಳು ತಾಯಿ.
ತಾಯಿ ವಾತ್ಸಲ್ಯ ಮತ್ತು ಪ್ರೀತಿಯ ಪ್ರತಿಮೆ... ತಾಯಿಯ ಮಡಿಲು ಮಗುವಿನ ಮೊದಲ ಜಗತ್ತು.. ಅವಳ ಮಡಿಲಲ್ಲಿ ಕೂತು ಪ್ರಪಂಚದಲ್ಲಿ ಹೊಸ ಬಣ್ಣಗಳನ್ನು ಮಗು ಕಾಣುತ್ತದೆ... ನನಗೆ ತಾಯಿ ಬಹಳ ವಿಶೇಷ ಮತ್ತು ಪ್ರಮುಖ ವ್ಯಕ್ತಿ. ದೇವರ ಅತ್ಯಂತ ಅಮೂಲ್ಯ ಕೊಡುಗೆ... ನಾನು ಅಮ್ಮನಿಂದ ಜಗತ್ತನ್ನು ನೋಡುತ್ತೇನೆ... ಅಮ್ಮ ತನ್ನ ಮಗುವಿಗೆ ಸ್ನೇಹಿತೆ, ಮಾರ್ಗದರ್ಶಿ ಮತ್ತು ಶಿಕ್ಷಕಿ ಆಗಿರುತ್ತಾಳೆ.. ಅಮ್ಮ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಾಳೆ ಮತ್ತು ಮನೆಯನ್ನು ಸುಂದರವಾದ ಮನೆಯಾಗಿ ಪರಿವರ್ತಿಸುತ್ತಾಳೆ... ಅಮ್ಮ ನನ್ನನ್ನು ಅತ್ಯಂತ ಕಾಳಜಿ ಸಹಾನುಭೂತಿ ಮತ್ತು ಪ್ರೀತಿಯಿಂದ ಬೆಳೆಸುತ್ತಾಳೆ.. ನನಗೆ ಅಮ್ಮ ಜಗತ್ತಿನಲ್ಲಿ ಪ್ರೀತಿ ಪ್ರಾಮಾಣಿಕತೆ ಸತ್ಯ ಮತ್ತು ಸಹಾನುಭೂತಿಯ ಸಂಕೇತವಾಗಿ ನನ್ನ ತಾಯಿಯೇ ನನಗೆ ಸ್ಫೂರ್ತಿ ಎನ್ನುವಂತೆ ನೋಡಿಕೊಳ್ಳುತ್ತಾಳೆ.
ನನಗೆ ನನ್ನ ಅಮ್ಮ ಎಂದರೆ ತುಂಬಾ ಇಷ್ಟ ನನ್ನ ಬೇಕು ಬೇಡಗಳನ್ನು ಪೂರೈಸುವವಳು ಅಮ್ಮ. ನನ್ನ ಆಟ ನಗು ಸಂತೋಷ ದಲ್ಲಿ ತನ್ನ ನೋವನ್ನು ಮರೆಯುವಳು ನನ್ನ ಅಮ್ಮ... ಅಮ್ಮ ಕೆಲಸಕ್ಕೆ ಹೋದಾಗ ಬರುವವರೆಗೂ ಕಾಯುತ್ತಾ ಕುಳಿತಿರುವೆ... ಅಮ್ಮ ಎಷ್ಟು ಹೊತ್ತಿಗೆ ಬರುತ್ತಾಳೆ ಎಂದು ಕಾತುರದಿಂದ ಕಾಯುತ್ತಿರುತ್ತೇನೆ.. ಅಮ್ಮ ಬಂದಾಗ ಆಗುವ ಸಂತೋಷ ನನಗೆ ತಡೆದುಕೊಳ್ಳಲು ಆಗದಿರುವಷ್ಟು ಇರುತ್ತದೆ...
- ಎಂ.ಕೆ. ನಮನ್, ಮಾಗುಲು ಮನೆ ಮಡಿಕೇರಿ. ಮೊ. ೯೪೪೮೭೦೫೨೮೭ ಶಿಸ್ತು ಕಲಿಸಿದಾಕೆ
ನನ್ನ ಅಮ್ಮ ಶಿಕ್ಷಕಿಯಾಗಿ ಕೆಲಸ ಮಾಡುತ್ತಾರೆ. ನನ್ನ ಅಮ್ಮ ಯಾವಾಗಲೂ ನನಗೆ ಗುರುಹಿರಿಯರನ್ನು ಗೌರವಿಸಬೇಕು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದು ಹೇಳುತ್ತಾರೆ. ನೀನು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಹೇಳುತ್ತಿರುತ್ತಾರೆ.
ನಾನು ಊಟ ಮಾಡದೇ ಇರುವಾಗ ಅಮ್ಮನಿಗೆ ತುಂಬಾ ಕೋಪ ಬರುತ್ತದೆ. ಅನ್ನದ ಮುಂದೆ ಅಹಂಕಾರ ತೋರಿಸಬಾರದು. ಅನ್ನ ದೇವರು ಅದನ್ನು ಗೌರವಿಸಬೇಕು ಎಂದು ಯಾವಾಗಲೂ ಹೇಳುತ್ತಿರುತ್ತಾರೆ. ನನಗೆ ನನ್ನ ಅಮ್ಮನೆಂದರೆ ಬಹಳ ಪ್ರೀತಿ. ಅಮ್ಮ ನನ್ನ ಭವಿಷ್ಯಕ್ಕಾಗಿ ತುಂಬಾ ಕಷ್ಟ ಪಡುತ್ತಿದ್ದಾರೆ. ಆರೋಗ್ಯ ಸರಿ ಇಲ್ಲದಿದ್ದಾಗ ಅಮ್ಮ ರಾತ್ರಿ ಇಡೀ ನಿದ್ರೆಗೆಟ್ಟು ನನ್ನನ್ನು ಆರೈಕೆ ಮಾಡುತ್ತಾಳೆ. ಅಮ್ಮ ನನ್ನ ಎಲ್ಲಾ ಕೆಲಸಗಳಲ್ಲೂ ಸಹಾಯ ಮಾಡುತ್ತಾಳೆ ಹಾಗೂ ಅದನ್ನು ಸರಿಯಾಗಿ ಮಾಡುವಂತೆ ತಿಳಿಸುತ್ತಾಳೆ. ಸಮಯವನ್ನು ವ್ಯರ್ಥ ಮಾಡಬಾರದು ಹಾಗೂ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕೆಂದು ಅಮ್ಮ ಯಾವಾಗಲೂ ಹೇಳುತ್ತಿರುತ್ತಾರೆ. ನಾನು ಮುಂದೆ ದೊಡ್ಡವಳಾಗಿ ಸಮಾಜದಲ್ಲಿ ಅಮ್ಮನಿಗೆ ಗೌರವ ತರುವಂತ ಕೆಲಸವನ್ನು ಮಾಡುತ್ತೇನೆ.
- ಟಿ.ಪಿ. ಅಕ್ಷರ ತಂಗಮ್ಮ, ೫ನೇ ತರಗತಿ, ಸಂತ ಅಂತೋಣಿ ಶಾಲೆ, ಪೊನ್ನಂಪೇಟೆ. ಮೊ. ೮೮೬೧೩೨೩೧೨೯.ಅಮ್ಮನ ಕತೆ ಇಷ್ಟ
ಅಮ್ಮ ಅಂದ್ರೆ ಅಂತಃಕರಣ. ಅಮ್ಮ ಅಂದ್ರೆ ಆಕಾಶ. ಅಮ್ಮನೇ ಮಕ್ಕಳ ಪ್ರಪಂಚ. ನನ್ನ ಅಮ್ಮನೂ ಇದರಿಂದ ಹೊರತಲ್ಲ. ಸಿಟ್ಟು ಬಂದಾಗ ಹೊಡೆದೇ ಬಿಡುವ, ಪ್ರೀತಿಯಲ್ಲಿ ಮುದ್ದಿಸುವ ಅಮ್ಮನ ಅಕ್ಕರೆಗೆ ಮಿಗಿಲು ಇನ್ಯಾವುದುಂಟು?
ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳಿಸುವ, ಬ್ರಶ್ ಮಾಡಿಸಿ, ಸ್ನಾನ ಮಾಡಿಸಿ, ತಿಂಡಿ ತಿನಿಸು, ಯೂನಿಫಾರ್ಮ್ ಹಾಕಿ, ತಲೆಬಾಚಿ ಜೊತೆಗೆ ಪ್ರೀತಿಯಿಂದ ತಲೆಗೆ ಮೊಟಕಿ ಶಾಲೆಗೆ ಹೊರಡಿಸುವ ಆಕೆಯ ಸಂಭ್ರಮಕ್ಕೆ ಮಿಗಲುಂಟೆ?
ಶಾಲೆಯಿAದ ಮನೆಗೆ ಬರುತ್ತಲೇ ಪ್ರೀತಿಯಿಂದ ಎದುರುಗೊಂಡು, ಶಾಲೆಯಲ್ಲಿ ನಡೆದಿದ್ದು ವಿಚಾರಿಸುತ್ತಲೇ ಹಾಲು, ತಿಂಡಿ ಕೊಟ್ಟು ಉಪಚರಿಸುವ ಅಮ್ಮನ ಆಥಿತ್ಯಕ್ಕೆ ಪರ್ಯಾಯ ಯಾವುದಿದೆ?
ಸಂಜೆ ಆಟವಾಡಿ ಬಂದ ನಂತರ ಹೋಂ ವರ್ಕ್ ಮಾಡಿಸಿ, ಕಥೆ ಹೇಳುತ್ತಾ ಮಲಗಿಸುವ ಅಮ್ಮ ನಿನಗೆ ಹ್ಯಾಪಿ ಮದರ್ಸ್ ಡೇ. ಐ ಲವ್ ಯು ಅಮ್ಮ.
- ಪಿ.ಎಸ್. ತಿಶ್ಯ, ಕುಶಾಲನಗರ.ಅಮ್ಮನ ಮಾತು ಇಷ್ಟ
ಪ್ರೀತಿಯ ಅಮ್ಮಂದಿರ ದಿನಕ್ಕೆ ನನ್ನದೊಂದು ವಂದನೆ. ನನ್ನ ಪ್ರೀತಿಯ ಮುದ್ದಿನ ಅಮ್ಮ. ನನ್ನ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮುದ್ದಿನ ಅಮ್ಮ. ಪಾಠದಲ್ಲಿ ಸ್ನೇಹಿತೆಯಾಗಿ ಹೇಳಿಕೊಡುವ ಅಮ್ಮ. ಆಟದಲ್ಲಿ ತುಂಬಾ ಚುರುಕು. ಅದೇ ರೀತಿ ನಾನು ಕೂಡ ಅಮ್ಮನಂತೆ ಉತ್ತಮ ಆಟಗಾರ್ತಿ ಆಗಬೇಕೆಂಬುದು ಆಸೆ. ಪ್ರೀತಿ ಎಲ್ಲರನ್ನು ಮುದ್ದು ಮಾಡುವ ಪ್ರೀತಿಯ ಅಮ್ಮ. ಅಜ್ಜ-ಅಜ್ಜಿಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಅಮ್ಮ ಸಿಟ್ಟು, ತಾಳ್ಮೆಯಿಂದ ಎಲ್ಲವನ್ನು ಸಮಾಧಾನಿಸುವ ಗುಣ ಅಮ್ಮನದು. ಅಮ್ಮನೊಂದಿಗೆ ಜಗಳವಾಡಿದರೆ ಪೆಟ್ಟು ಬೀಳುವುದು ಗ್ಯಾರೆಂಟಿ. ನಂತರ ನಾನೇ ಅಮ್ಮನನ್ನು ಸಮಾಧಾನಪಡಿಸುತ್ತೇನೆ. ನನ್ನ ಅಮ್ಮ ನನ್ನನ್ನು ಆಟ, ಪಾಠ ಯಾವುದೇ ಪರೀಕ್ಷೆ, ಯಾವುದೇ ರಂಗೋಲಿ ಸ್ಪರ್ಧೆ, ಚಿತ್ರಕಲೆ, ಯಾವುದೇ ಸ್ಪರ್ಧೆಗಳು ಉಂಟು ಎಂದು ಗೊತ್ತಾದರೆ ನನ್ನನ್ನು ಹುರಿದುಂಬಿಸಿ ತಯಾರಿ ಮಾಡುವ ಹಂಬಲ ಅಮ್ಮನ ಗುಣ ನನಗೆ ತುಂಬಾ ಇಷ್ಟ. ಅಪ್ಪ-ಅಮ್ಮಂದಿರ ಕತೆ, ಅವರ ಅಭಿಪ್ರಾಯ, ಅವರಿಗೆ ಕೊಡುವ ಗೌರವದ ಬಗ್ಗೆ ಮಾತನಾಡುವ ಮಾತು ನನಗೆ ತುಂಬಾ ಇಷ್ಟ. ಅಮ್ಮನ ಇಷ್ಟದಂತೆ ಪುಟಾಣಿ, ವಿಜ್ಞಾನ, ಶಾಲಾ ಆಟೋಟ, ರಂಗೋಲಿ ಪರೀಕ್ಷೆಗಳಲ್ಲಿ ಗೆದ್ದು ಬಹುಮಾನ ಪಡೆದು ಕೊಂಡಿರುತ್ತೇನೆ. ಇಷ್ಟು ನನ್ನ ಅಮ್ಮನ ಬಗ್ಗೆ ಅನಿಸಿಕೆ.
- ಎಂ.ಕೆ. ಕೃತಿಕ, ೬ನೇ ತರಗತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೇರಂಬಾಣೆ. ಮೊ. ೯೪೮೦೧೮೧೫೧೨.ತಾಯಿಯೇ ದೇವರು
ತಾಯಿಗಿಂತ ಮಿಗಿಲಾದ ದೇವರಿಲ್ಲ. ನಾನು ನಮ್ಮ ಅಮ್ಮನ ಕುರಿತು ಹೇಳಬೇಕೆಂದರೆ ನೂರು ಜನ್ಮಗಳೂ ಸಾಲದು. ನಮ್ಮ ಅಮ್ಮ ಎಂದರೆ ನಮಗೆ ತುಂಬಾ ಪ್ರೀತಿ. ನಮ್ಮ ಅಮ್ಮ ನಮ್ಮ ಮೇಲೆ ತುಂಬಾ ಕೋಪ ಮಾಡಿಕೊಳ್ಳುತ್ತಾರೆ. ಆದರೆ ಅದಕ್ಕಿಂತ ನೂರುಪಟ್ಟು ಪ್ರೀತಿ ನಮ್ಮ ಅಮ್ಮನಿಗೆ ನಮ್ಮ ಮೇಲೆ ಇದೆ. ನಮ್ಮ ಅಮ್ಮನಿಗೆ ನಾವು ಮೂರು ಮಕ್ಕಳು. ಮೂವರನ್ನು ಒಂದೇ ತರ ಪ್ರೀತಿ ಕೊಟ್ಟು ನೋಡಿಕೊಳ್ಳುತ್ತಾರೆ. ನಮ್ಮ ಅಮ್ಮನಿಗೆ ಬೇಗನೆ ಕೋಪ ಬರುತ್ತೆ. ನಾವು ಮಾಡುವ ಗಲಾಟೆ ಗೊಂದಲಗಳನ್ನು ನೋಡಿ ಆವಾಗ ನಮ್ಮ ಅಮ್ಮ ನಮಗೆ ಶಿಕ್ಷೆ ಕೊಡುತ್ತಾರೆ. ಆದರೂ ನಮ್ಮ ಅಮ್ಮನಿಗೆ ನಮ್ಮನ್ನ ಒಂದು ನಿಮಿಷನು ಬಿಟ್ಟಿರಲು ಆಗಲ್ಲ. ನಮ್ಮನ್ನ ಕೂಲಿ ಕೆಲಸ ಮಾಡಿ ಸಾಕುತ್ತಾರೆ. ಒಂದು ದಿನ ಕೂಲಿ ಮಾಡದಿದ್ದರೆ ನಮಗೆ ಏನು ಇಲ್ಲ. ಎಷ್ಟೇ ಕಷ್ಟವಾದರು ಒಂದು ದಿನಾನು ಒಂದು ಹೊತ್ತು ಕೂಡ ನಮಗೆ ಕಷ್ಟ ತಿಳಿಸಲಿಲ್ಲ. ಏನಾದರು ಆಹಾರದಲ್ಲಿ ಕಡಿಮೆಯಾದರು ನಮ್ಮಮ್ಮ ಊಟ ಮಾಡದೆ ಅದು ನಾವು ಮೂರು ಮಕ್ಕಳಿಗೂ ಸಮಪಾಲು ಮಾಡಿಕೊಡುತ್ತಾರೆ. ಹಸಿವಿದ್ದರು ನಮ್ಮಮ್ಮ ಅದು ತೋರಿಸಿಕೊಳ್ಳದೆ ನಗುನಗುತ್ತಾ ನಮ್ಮ ಜೊತೆ ಕಾಲ ಕಳೆಯುತ್ತಾರೆ. ನಾವು ಮೂರು ಮಕ್ಕಳು, ನನಗೆ ದೇವರು ಕೊಟ್ಟ ವರವೆಂದು ನಮ್ಮಮ್ಮ ದಿನಾ ಹೇಳಿ ಸಂತೋಷ ಪಡುತ್ತಾರೆ. ನಾವು ಮೂರು ಮಕ್ಕಳಿಂದ ನನಗೆ ದೇವರು ಒಳ್ಳೆಯದನ್ನು ಕೊಡುತ್ತಾರೆಂದು ನಮ್ಮಮ್ಮ ಹೇಳಿ ಸಮಾಧಾನಪಡುತ್ತಾರೆ. ನಮ್ಮ ಅಮ್ಮನಿಗೆ ನಾವು ಮೂರು ಹೆಣ್ಣು ಮಕ್ಕಳು. ನಾವು ಚೆನ್ನಾಗಿ ಓದಿ ಒಳ್ಳೆ ಕೆಲಸಕ್ಕೆ ಸೇರಿ ನಾವು ನಮ್ಮ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆಂದು ನಮ್ಮ ಅಮ್ಮನಿಗೆ ಪ್ರಮಾಣ ಮಾಡಿ ಹೇಳುತ್ತೇವೆ. ಏಳೇಳು ಜನ್ಮಕ್ಕೂ ನಮಗೆ ನಮ್ಮ ಅಮ್ಮನೇ ಸಾಕು. ನಮ್ಮ ಅಮ್ಮನಿಗೆ ಕೋಟಿ ಕೋಟಿ ನಮನಗಳು. ನಮ್ಮ ಅಮ್ಮನಿಗೆ ನಾವು ಯಾವ ರೀತಿ ನೋವು ಕೊಡದೆ ನೋಡಿಕೊಳ್ಳುತ್ತೇವೆ.
ನಮ್ಮ ಈ ಜನುಮದಲ್ಲಿ ಒಂದೇ ದಿನ ನಮ್ಮ ಅಮ್ಮ ನಾವು ಅಳುವಾಗ ಸಂತೋಷ ಪಡೋದು ‘ಅದೇ ನಮ್ಮ ಜನ್ಮದಿನ’.
- ಜಿನ್ಸಿ ಜೋಸೆಫ್, ರೀಯಾ ಜೋಸೆಫ್, ವಿನ್ಸಿ ಜೋಸೆಫ್, ಚೇರಂಬಾಣೆ. ಮೊ. ೯೫೯೧೯೧೭೦೨೯.ಅಮ್ಮ ಜೊತೆ ಇದ್ದರೆ ಆನೆ ಬಲ
ಅಮ್ಮ ಈ ಒಂದು ಪದವೇ ಅಮೃತ. ಅಮ್ಮ ಎಂದರೆ ಸಂಜೀವಿನಿ. ಅಮ್ಮನ ಮಾತೆ ಜೇನಿಗಿಂತಲೂ ಸಿಹಿ. ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿ ಎಂದರೆ ಅದು ಅಮ್ಮ ಮಾತ್ರ. ತಾನು ಎಲ್ಲ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ದೇವರು ಅಮ್ಮನನ್ನು ಸೃಷ್ಟಿಸಿದ ಎಂಬುದು ಬರಿ ಮಾತಲ್ಲ. ಅದು ನಿಜ ಕೂಡಾ. ಅಮ್ಮ ಜೊತೆಗಿದ್ದರೆ ನೂರಾನೆಗಳ ಬಲ ಇದ್ದಂತೆ. ಪ್ರತಿ ಕ್ಷಣವೂ ಕುಟುಂಬಕ್ಕಾಗಿ ತನ್ನ ಬದುಕನ್ನು ತೇಯುವವರು ಅಮ್ಮ. ಇವರು ರಜೆ, ಸಂಬಳವೇ ಇಲ್ಲದೆ ದುಡಿಯುವ ಜೀವ. ಪ್ರತಿಪಲಾಪೇಕ್ಷೆ ಇಲ್ಲದೆ ರಕ್ತವನ್ನೆ ಬೆವರಂತೆ ಬಸಿದು ಕುಟುಂಬವನ್ನು ಕಾಪಾಡುವ ಶಕ್ತಿ ಎಂದರೆ ಅದು ಅಮ್ಮ.
ಅಮ್ಮಂದಿರ ದಿನ, ತಾಯಿಗಾಗಿ ಮೀಸಲಾದ ದಿನ. ಅಮ್ಮನ ತ್ಯಾಗ, ಪ್ರೀತಿಗೆ ಗೌರವ ಸಲ್ಲಿಸುವ ದಿನ. ನವಮಾಸ ಹೊತ್ತು, ಹೆತ್ತು, ಸಾಕಿ, ಸಲಹಿದ ತಾಯಿಗೆ ಶುಭಾಶಯ ಹೇಳುವುದು ಎಲ್ಲರ ಜವಾಬ್ದಾರಿ.
- ಎಸ್. ಯುಕ್ತಶ್ರೀ, ೨ನೇ ತರಗತಿ, ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆ, ಕೂಡಿಗೆ.ತಾಯಿಗಿಂತ ದೇವರಿಲ್ಲ
ನನ್ನ ಅಮ್ಮ ನನ್ನ ಮೊದಲ ಗುರು ಹಾಗೂ ನನ್ನ ಒಳ್ಳೆಯ ಸ್ನೇಹಿತೆ. ಭೂಮಿಗೆ ತಂದ ದೇವತೆ ತಾಯಿ! ದೇವರು ತಾನು ಎಲ್ಲಾ ಕಡೆ ಇರುವುದಕ್ಕೆ ಆಗೋದಿಲ್ಲವೆಂದು ಎಲ್ಲಾ ಮಕ್ಕಳಿಗೂ ಅಮ್ಮನನ್ನು ಕೊಟ್ಟಿದ್ದಾನಂತೆ. ನಮಗೆ ಆಚಾರ, ವಿಚಾರಗಳನ್ನು ಹೇಳುವವಳೇ ಅಮ್ಮ. ನಮ್ಮನ್ನು ಹೆತ್ತು, ಹೊತ್ತು, ಸಾಕಿ, ಸಲುಹಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡುವವಳೇ ತಾಯಿ. ಮಮತೆಯಿಂದ ಅಕ್ಷರ ಕಲಿಸಿ, ಪ್ರೀತಿಯಿಂದ ತುತ್ತು ತಿನ್ನಿಸಿ, ದೊಡ್ಡ ಕನಸು ಕಂಡು ಮಕ್ಕಳನ್ನು ಬೆಳೆಸುವವಳು ಅಮ್ಮ. ಮಗುವಿಗೆ ಹಾಲುಣಿಸಿ ಆಕಾಶದಲ್ಲಿ ನಕ್ಷತ್ರಗಳ ಹೊಳಪನ್ನು ತೋರಿಸಿ, ಚಂದಮಾಮನನ್ನು ಕರೆದು, ಮಗು ನಗುವ ಹಾಗೇ ಮಾಡುವವಳೇ ತಾಯಿ. ನಮ್ಮ ಜೀವನ ರೂಪಿಸಿ ಸಮಾಜದಲ್ಲಿ ಒಳ್ಳೆಯ ನಾಗರಿಕರನ್ನಾಗಿ ಮಾಡುವವಳೇ ಅಮ್ಮ.
ಅಮ್ಮ ನೀನೆಂದರೆ ಏನು ಎಂಬುದನ್ನು ತಿಳಿಸಲು ಕವಿಗಳು, ಸಾಹಿತಿಗಳು, ಬರಹಗಾರರು, ಕಾದಂಬರಿಗಾರರೇ ಕಷ್ಟಪಡುತ್ತಿರುವಾಗ ನಾನು ಏನು ಹೇಳಲಿ? ನಿನ್ನನ್ನು ಪೂರ್ತಿಯಾಗಿ ಅರಿಯುವುದು ಯಾರಿಗೂ ಸಾಧ್ಯವಾಗದ ಮಾತು. ನಿನಗೆ ನನ್ನ ಪ್ರೀತಿಯ ಧನ್ಯವಾದಗಳು. ಅಮ್ಮ ನಾನಿನಗೆ ಕೊಟ್ಟ ಪಜಿತಿ, ಅಮ್ಮ ನೀನು ನನತೆ ತಿನ್ನಿಸಿದ ಕೈತುತ್ತು ನಾನೆಂದು ಮರೆಯಲಾರೆ. ಇದ್ದರೆ ನನಗೆ ಇನ್ನೊಂದು ಜನುಮ ಅದರಲ್ಲೂ ನನಗೆ ನೀನೆ ಅಮ್ಮ. ನನ್ನ ಅಮ್ಮ ಮಲಗಿದ ಸಮಯವೇ ಕಡಿಮೆ. ಬೆಳಿಗ್ಗೆ ನಾನು ಏಳುವುದಕ್ಕಿಂತ ಮೊದಲೇ ಎದ್ದು ದಿನವನ್ನು ಸ್ವಾಗತಿಸಿಯಾಗಿರುತ್ತದೆ. ನನಗೆ ಹುಷಾರು ತಪ್ಪಿದರೆ ಆಕೆಗೆ ತಲೆನೋವು ತಪ್ಪಿದಲ್ಲ. ನಾನು ಹುಷಾರಾಗುವವರೆಗೂ ಅವಳಿಗೆ ಕೆಲಸ ಜಾಸ್ತಿ. ಅಮ್ಮ ನನ್ನ ಎಲ್ಲ ಜನುಮಕ್ಕೂ ನೀನೆ ದಾರಿದೀವಿಗೆಯಾಗು. ನಿನ್ನ ಹೊರತು ಬೇರೆ ಯಾವ ಮಾರ್ಗದರ್ಶಕರೂ ಬೇಕಿಲ್ಲ. ನನ್ನ ಒಳ್ಳೆಯ ಹೆಸರು ನಿನ್ನ ಉಸಿರು ಎಂದು ಅರಿತಿರುವೆ. ಕಷ್ಟಪಟ್ಟು ಓದಿ ನಿನಗೆ ಒಳ್ಳೆ ಹೆಸರು ತರುವೆ.
ನೋವಿನಿಂದ ಅಮ್ಮಾ ಎಂದು ಕೂಗಿದರೆ ನೋವೇ ಮಾಯ. ಬೆಲೆ ಕಟ್ಟಲಾಗದ ಒಂದೇ ಒಂದು ವಸ್ತುವೆಂದರೆ ಅಮ್ಮ. ನಾನು ಅತ್ತಾಗ ಅಳುವ, ನಕ್ಕಾಗ ನಗುವ ನನ್ನಮ್ಮ ನನಗೆ ಸ್ಫೂರ್ತಿ. ಎಲ್ಲರಂಥಲ್ಲ ನನ್ನ ಅಮ್ಮ. ಅಮ್ಮ ಎಷ್ಟೇ ಬೈದರೂ, ಹೊಡೆದರೂ ಕೊನೆಗೆ ಅವಳೇ ಬೇಕು.
ಅಮ್ಮನಿಗೆ ಆಯಾಸವೆಂಬುದೇ ಇಲ್ಲ. ಕೈ ಮುಗಿಯಲು ಸಾವಿರ ದೇವರಿರ ಬಹುದು. ಕೈಹಿಡಿದು ನಡೆಸುವುದು ಅಮ್ಮ ಮಾತ್ರ. ಅಮ್ಮನಿದ್ದರೆ ಎಲ್ಲವೂ ಇದ್ದಂತೆ. ವಯಸ್ಸಿನಲ್ಲಿ ದೊಡ್ಡವ ಳಾದರೂ ನನ್ನಂತೆಯೇ ಯೋಚಿಸುತ್ತಾಳೆ ನನ್ನಮ್ಮ. ತಾಯಿಗಿಂತ ದೊಡ್ಡ ದೇವರಿಲ್ಲ.
- ಐಚೆಟ್ಟಿರ ಕವನ್ ಕುಶಾಲಪ್ಪ, ೮ನೇ ತರಗತಿ, ಲಯನ್ಸ್ ಶಾಲೆ, ಗೋಣಿಕೊಪ್ಪಲು. ಮೊ. ೯೬೦೬೬೧೩೮೨೫.ತಾಯಿ ಮೊದಲನೆಯ ಗುರು
ಮೊದಲನೆಯ ಗುರುವೇ ತಾಯಿ. ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೊ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್‌ಮೈಶ್ರೀ ಗುರುವೇ ನಮಃ. ಈ ಅರ್ಥದ ನೀತಿಯೇ ತಾಯಿ. ಅಕ್ಷರ ಕಲಿಸಿದ ತಾಯಿಗೆ ನಮಸ್ಕಾರಗಳು. ಸಣ್ಣ ವಯಸ್ಸಿನಲ್ಲಿ ಊಟ ಮಾಡದೆ ಇರುವಾಗ ನಮ್ಮನ್ನು ಹೊತ್ತು ಚಂದ್ರಮಾಮನನ್ನು ತೋರಿಸುತ್ತಾ ಕತೆಗಳನ್ನು ಹೇಳುತ್ತ ಊಟವನ್ನು ತಿನ್ನಿಸುತ್ತಾಳೆ. ಕತೆಗಳನ್ನು ಹೇಳುತ್ತ ಮಲಗಿಸುತ್ತಾಳೆ. ಅಮ್ಮ ನಮ್ಮನ್ನು ಪ್ರೀತಿಯಿಂದ ಸಾಕಿ ಬೆಳಸುತ್ತಾಳೆ. ಅವಳು ನನ್ನ ಮತ್ತು ಅಕ್ಕನನ್ನು ಪ್ರೀತಿಯಿಂದ ಬೆಳೆಸಿ ಬೇಕಾದುದ್ದನ್ನು ತಂದುಕೊಡುತ್ತಾಳೆ. ನಮಗೆ ಏನಾದರೂ ಆದರೆ ಅವಳ ಮನಸ್ಸಿಗೆ ನೋವು ಆಗುತ್ತದೆ. ನಮ್ಮೊಂದಿಗೆ ಸೇರಿ ಆಟವಾಡುತ್ತಾಳೆ. ನಮಗೆ ಬಾರದ ಆಟವನ್ನು ಹೇಳಿಕೊಡುತ್ತಾಳೆ. ಹೋಗುವ ಜಾಗಕ್ಕೆಲ್ಲ ನಮ್ಮನ್ನು ಕರೆದುಕೊಂಡು ಹೋಗುತ್ತಾಳೆ. ನಾವು ಆಟವಾಡು ಬರುವಾಗ ಕೈ ತೊಳೆದು ಊಟ ಮಾಡಬೇಕೆಂದು ಹೇಳಿಕೊಡುತ್ತಾಳೆ. ರುಚಿ ರುಚಿಯಾದ ಅಡುಗೆ ಮಾಡಿ ಬಡಿಸುತ್ತಾಳೆ. ನಮ್ಮನ್ನು ಬೈದರೆ ನಾವು ಸಿಟ್ಟು ಮಾಡಿ ಅಳುತ್ತ ಮಲಗುತ್ತೇವೆ. ಬೆಳಿಗ್ಗೆ ಎದ್ದು ಸಮಾಧಾನ ಮಾಡಿಸಿ ಮುತ್ತು ಕೊಟ್ಟು ಲಾಲಿಸುತ್ತಾಳೆ. ಅಮ್ಮ ಮಂಜು ಗಡ್ಡೆಯಂತೆ ಕರಗುವ ಮನಸ್ಸು. ನಾವು ಬೇಡದೆ ಇರುವ ಪದವನ್ನು ಹೇಳಿದರೆ ಅವಳು ಹೊಡೆದು ಬುದ್ಧಿ ಹೇಳಿ ಕಲಿಸುತ್ತಾಳೆ. ನಮಗೆ ಅವಳೆಂದರೆ ತುಂಬಾ ಪ್ರೀತಿ. ಅವಳನ್ನು ಬಿಟ್ಟು ಬದುಕುವ ಶಕ್ತಿ ನಮಗೆ ಇಲ್ಲ. ಸಿಟ್ಟು, ಕೋಪ ಬರದ ಏಕೈಕ ದೇವತೆ ತಾಯಿ.
ಕಣ್ಣಿಗೆ ಕಾಣದ ದೇವರನ್ನು ಪೂಜಿಸುವ ಬದಲು ನಮ್ಮ ತಾಯಿಯನ್ನು ಪೂಜಿಸಬೇಕು. ನಾವು ಹೇಗೆ ಬೆಳೆಯಬೇಕು ಎಂಬುದು ಒಳ್ಳೆಯದು, ಕೆಟ್ಟದ್ದು ಎಂದು ನಿರ್ಧರಿಸುತ್ತಾಳೆ. ಮನೆಯಲ್ಲಿ ಬಿಡುವಿಲ್ಲದ ಕೆಲಸವನ್ನು ಮಾಡುವ ದೇವತೆ ತಾಯಿ. ಅಪ್ಪ ತಂದಿರುವ ದುಡ್ಡನ್ನು ಅಮ್ಮ ಕೂಡಿ ಇಟ್ಟು ನಮಗೆ ಬೇಕಾದುದ್ದನ್ನು ಕೊಡಿಸುತ್ತಾಳೆ. ಅವಳನ್ನು ಎಷ್ಟು ಹೊಗಳಿದರೂ ಸಾಲದು.
- ಎಂ.ಕೆ. ತನುಷ, ೫ನೇ ತರಗತಿ, ಸೆಂಟ್ ಥೋಮಸ್ ಶಾಲೆ, ಗೋಣಿಕೊಪ್ಪಲು. ಮೊ. ೯೦೦೮೧೪೩೦೮೮.ಗುರುವೂ ಹೌದು-ಗೆಳತಿಯೂ ಹೌದು
ಅಮ್ಮ ಎಂದರೆ ಪದವಲ್ಲ. ಪದೇ ಪದೇ ಸಿಗುವ ವಸ್ತುವಲ್ಲ. ಕರೆದರೆ ಬರುವುದಿಲ್ಲ. ಬಯಸಿದರೆ ಸಿಗುವುದಿಲ್ಲ. ಅವಳನ್ನು ಕಳೆದುಕೊಂಡರೆ ಜೀವನವೇ ಇಲ್ಲ. ತಂದೆ ತಾಯಿಗೆ ಎದುರು ಮಾತಾಡೋ ಮುಂಚೆ ಯೋಚಿಸು. ಯಾಕೆಂದ್ರೆ ಈ ಜೀವ, ಈ ಮಾತು ಎಲ್ಲಾ ಅವರು ನೀಡಿದ ಭಿಕ್ಷೆ ಎಂದು ತಿಳಿ. ಅಮ್ಮ ಗುರುವು ಹೌದು. ಅಮ್ಮ ಗೆಳತಿಯು ಹೌದು. ಅಮ್ಮ ಎಲ್ಲರ ಸ್ಥಾನವನ್ನು ತುಂಬಬಹುದು. ಆದರೆ ಅಮ್ಮನ ಸ್ಥಾನವನ್ನು ಯಾರು ತುಂಬಲು ಸಾಧ್ಯವಿಲ್ಲ. ಸಾವಿರ ಜನ್ಮ ಹುಟ್ಟಿ ಬಂದರು ಸಾಸಿವೆ ಕಾಳಷ್ಟು ತೀರಿಸಲಾಗದು ಅಮ್ಮನ ಋಣ. ಹೆತ್ತವರ ಮನಸ್ಸನ್ನು ನೋಯಿಸಿ ಗೆದ್ದವರು ಇತಿಹಾಸದಲ್ಲೇ ಇಲ್ಲ. ತಾಯಿಯನ್ನು ಪೂಜಿಸಿ ಸೋತ ವರು ಚರಿತ್ರೆಯಲ್ಲೇ ಇಲ್ಲ. ನನ್ನ ಜೀವ ನದ ನನ್ನ ಗುರುಗಳು ನನ್ನ ಅಪ್ಪ ಅಮ್ಮ.
- ಎಂ.ಹೆಚ್. ಗಿರಿವರ್ಧನ್, ೪ನೇ ತರಗತಿ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿ. ಮೊ. ೯೮೪೫೦೧೭೬೨೪.ದೇವರಿಗಿಂತ ಮಿಗಿಲಾದ ಶಕ್ತಿ ಅಮ್ಮ
ಅಮ್ಮ ಈ ಒಂದು ಪದವೇ ಅಮೃತ. ಅಮ್ಮ ಎಂದರೆ ಸಂಜೀವಿನಿ. ಅಮ್ಮನ ಮಾತೇ ಜೇನಿಗಿಂತಲೂ ಸಿಹಿ. ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿ ಎಂದರೆ ಅದು ಅಮ್ಮ ಮಾತ್ರ. ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ದೇವರು ಅಮ್ಮನನ್ನು ಸೃಷ್ಟಿಸಿದ ಎಂಬುದು ಬರೀ ಮಾತಲ್ಲ ಅದು ನಿಜ ಕೂಡಾ. ಅಮ್ಮ ಜೊತೆಗಿದ್ದರೆ ನೂರಾನೆಯ ಬಲ ಇದ್ದಂತೆ. ಕಷ್ಟ ಬಂದಾಗ ಸಂತೈಸಿದವರು ಅಮ್ಮ. ಮಕ್ಕಳ ಹಾದಿಗೆ ಸದಾ ಕಾವಲಾಗಿರುವವರು ಅಮ್ಮ. ಎಡವಿ ಬಿದ್ದಾಗ ಕೈಕೊಟ್ಟು ಮೇಲೆ ಎತ್ತುವವರು ಅಮ್ಮ. ಕಣ್ಣೀರಿಟ್ಟಾಗ ಪ್ರೀತಿಯ ಮಳೆಗೆರೆದು ಕಣ್ಣೀರು ಒರೆಸುವವರು ಅಮ್ಮ. ಸಾಧನೆ ಮಾಡಿದಾಗ ಋಷಿಪಡುವವರು ಅಮ್ಮ. ತಾನು ಅರೆಹೊಟ್ಟೆಯಲ್ಲಿದ್ದರೂ ಮಕ್ಕಳು ಹಸಿದಿರಬಾರದು ಎಂದು ಕಷ್ಟಪಡುವರು ಅಮ್ಮ. ಪ್ರತೀಕ್ಷಣವೂ ಕುಟುಂಬಕ್ಕಾಗಿ ತನ್ನ ಬದುಕನ್ನು ತೇಯುವವರು ಅಮ್ಮ. ಪ್ರತಿಫಲಾಪೇಕ್ಷೆ ಇಲ್ಲದೆ ರಕ್ತವನ್ನೇ ಬೆವರಂತೆ ಬಸಿದು ಕುಟುಂಬವನ್ನು ಕಾಪಾಡುವ ಶಕ್ತಿ ಎಂದರೆ ಅದು ತಾಯಿ. ಅಮ್ಮನ ಮಮತೆಯ ಆಳ, ಅಗಲವನ್ನು ಅಳೆಯಲು ಯಾರಿಂದಲೂ ಸಾಧ್ಯವೇ ಇಲ್ಲ. ತಾಯಿಯು ಜಗತ್ತಿನಲ್ಲಿ ದೇವರ ಮತ್ತೊಂದು ರೂಪ, ನಮ್ಮ ದುಃಖಗಳನ್ನು ತೆಗೆದುಕೊಂಡು ನಮ್ಮನ್ನು ಪ್ರೀತಿಸುವ ಒಳ್ಳೆಯ ವ್ಯಕ್ತಿಯಾಗುತ್ತಾಳೆ. ದೇವರು ಎಲ್ಲೆಡೆ ವಾಸಿಸಲು ಸಾಧ್ಯವಿಲ್ಲ ಎಂದು ನಂಬಲಾಗಿದೆ. ಆದ್ದರಿಂದ ಅವನು ತಾಯಿಯನ್ನು ಸೃಷ್ಟಿಸಿದನು.
ಅಸಹನೀಯ ಸಂಕಟವನ್ನು ಅನುಭವಿಸಿದ ನಂತರವೂ ತಾಯಿ ಮೌನವಾಗಿರುತ್ತಾಳೆ. ಆದರೆ ಮಗುವಿಗೆ ಸ್ವಲ್ಪ ನೋವುಂಟಾದರೆ, ಅವಳು ತುಂಬಾ ದುಃಖಿತಳಾಗುತ್ತಾಳೆ. ಮಗುವಿನ ದುಃಖ ತಾಯಿಗೆ ಕಾಣಿಸುವುದಿಲ್ಲ. ಮಕ್ಕಳ ದುಃಖವನ್ನು ಹೋಗಲಾಡಿಸಲು ಮತ್ತು ಅವರಿಗೆ ಪ್ರೀತಿ ಮತ್ತು ರಕ್ಷಣೆಯನ್ನು ನೀಡಲು ದೇವರು ತಾಯಿಯನ್ನು ಸೃಷ್ಟಿಸಿದನು. ಅವಳು ತನ್ನ ಮಗುವಿಗಾಗಿ ಇಡೀ ದೇಶ, ಸಮಾಜ ಮತ್ತು ಪ್ರಪಂಚದಿAದ ಹೋರಾಡುತ್ತಾಳೆ. ತಾಯಿ ತನ್ನ ಮಗುವನ್ನು ರಕ್ಷಿಸಲು ದೇವರು ತಾಯಿಗೆ ಈ ಶಕ್ತಿಯನ್ನು ಒದಗಿಸಿದ್ದಾನೆ. ತಾಯಿ ತನ್ನ ಕುಟುಂಬದ ಸಂತೋಷಕ್ಕಾಗಿ ಎಲ್ಲವನ್ನು ಮಾಡುತ್ತಾಳೆ. ಅದರ ಪ್ರತಿಯಾಗಿ ಆಕೆ ಏನನ್ನೂ ಕೇಳುವುದಿಲ್ಲ. ನಾವು ನಮ್ಮ ತಾಯಂದಿರನ್ನು ಮತ್ತು ಅವಳ ಎಲ್ಲಾ ಪ್ರಯತ್ನಗಳನ್ನು ಲಘುವಾಗಿ ಪರಿಗಣಿಸುತ್ತೇವೆ. ನಾವು ನಮ್ಮ ತಾಯಿಯನ್ನು ಎಂದಿಗೂ ಮರೆಯಬಾರದು. ಏಕೆಂದರೆ ನಾವು ಅವಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ನೀವು ನಿಮ್ಮ ಸಂತೋಷ ಮತ್ತು ದುಃಖಗಳಲ್ಲಿಯೂ ಇರಬೇಕು. ಆದರೆ ನಿಮ್ಮ ತಾಯಿಯನ್ನು