ರಾಜ್ಯದಲ್ಲಿ ಈಗಾಗಲೇ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಗಳ ಫಲಿತಾಂಶ ಪ್ರಕಟ ಗೊಂಡಿದೆ. ಹಾಗೆಯೇ ಸಿಬಿಎಸ್‌ಇ, ಐಸಿಎಸ್‌ಇ ಪರೀಕ್ಷೆಗಳ ಫಲಿತಾಂಶಗಳೂ ಹೊರಬಿದ್ದಿವೆ. ಈ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳ ಯಶಸ್ಸಿನ ನಾಗಾಲೋಟ ಹೀಗೆಯೇ ಮುಂದುವರಿಯಲಿ, ಆದರೆ, ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಿರುವವರು, ಇನ್ನಷ್ಟು ಉತ್ತಮ ಅಂಕಗಳಿಸಬಹುದಿತ್ತು. ಗಳಿಸಿದ ಅಂಕ ಸಾಕಾಗಲಿಲ್ಲ ಎಂದು ಬೇಸರಿಸಿಕೊಳ್ಳುವ ವಿದ್ಯಾರ್ಥಿಗಳಿಗೊಂದು ಕಿವಿಮಾತು, ಸೋಲು ಗೆಲುವಿನ ಸೋಪಾನ, ಮರೆಯದಿರಿ, ಕುಗ್ಗದೆ, ಅಳುಕದೆ, ಆತ್ಮಸ್ಥೆöÊರ್ಯ ದೊಂದಿಗೆ ಮುನ್ನುಗ್ಗಿದರೆ ಅವಕಾಶಗಳ ಬಾಗಿಲುಗಳು ತಂತಾನೇ ತೆರೆದುಕೊಳ್ಳುತ್ತವೆ. ಈ ಒಂದು ಹಂತದ ಪರೀಕ್ಷೆ ಮಾತ್ರ ನಿಮ್ಮ ಜೀವನ ನಿರ್ಧರಿಸುವ ಅಳತೆಗೋಲು ಅಲ್ಲ ಎಂಬುದು ದೃಢವಾಗಿರಲಿ, ಸಾಧಿಸುವ ಛಲದೊಂದಿಗೆ, ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಪ್ರತಿಭೆ ಸಮರ್ಥವಾಗಿ ಅನಾವರಣಗೊಳ್ಳಲು ಅವಕಾಶಗಳ ಸದ್ಬಳಕೆಗೆ ಚಿತ್ತಹರಿಸಿ, ಅಸಕ್ತಿಯುತ ಕ್ಷೇತ್ರಗಳಲ್ಲಿ ಸಾಧನೆಯ ಹಾದಿಯೊಂದಿಗೆ ಬದುಕು ಪ್ರಕಾಶಮಾನವಾಗಿಸಲು, ಈ ಕೆಳಗಿನ ನಿದರ್ಶನಗಳು ನಿಮಗೆ ಪ್ರೇರಣೆ ಆಗಬಲ್ಲವು.
ಖ್ಯಾತ ನಟ, ನಿರ್ದೇಶಕ, ಕೊರಿಯಗ್ರಾಫರ್, ಡಾನ್ಸಿಂಗ್ ಲೆಜೆಂಡ್ ಪ್ರಭುದೇವ ಬಾಲ್ಯದಿಂದಲೂ ಓದಿನಲ್ಲಿ ಹಿಂದೆ ಹಿಂದೆ. ಚಿಕ್ಕಂದಿನಿAದ ಡಾನ್ಸ್ನಲ್ಲಿ ಅಪ್ರತಿಮ. ರಸಾಯನ ಶಾಸ್ತçವೆಂದರೆ ಪ್ರಭುದೇವ್‌ಗೆ ಕಬ್ಬಿಣದ ಕಡಲೆ. ದ್ವಿತೀಯ ಪಿ.ಯು.ಸಿ ಪರೀಕ್ಷೆ ಫಲಿತಾಂಶ ಪ್ರಕಟ ಆದಾಗ ಪ್ರಭುದೇವ ಈ ವಿಷಯದಲ್ಲಿ ಫೇಲ್ ! ಅಳುಕುತ್ತಲೇ ಮನೆಗೆ ಬಂದಾಗ ಅಪ್ಪ ಮನೆಯಲ್ಲೇ ಇದ್ದರು. ಫೇಲ್ ಆಗಿರುವ ಭಯದಲ್ಲಿ ಸೀದಾ ರೂಂಗೆ ತೆರಳಿ ಮುಗುಮ್ಮಾಗಿ ಕುಳಿತ್ತಿದ್ದರಂತೆ ಪ್ರಭು. ಕೊಠಡಿಗೆ ಧಾವಿಸಿದ ಅಪ್ಪ ಮೂಗೂರು ಸುಂದರ್, ಪ್ರಭುದೇವ ಬೆನ್ನನ್ನು ಎರಡು ಬಾರಿ ತಟ್ಟಿ, ‘ಪರವಾಗಿಲ್ಲ, ನಿನಗೇನು ಇಷ್ಟವೋ ಅದನ್ನೇ ಮಾಡು’ ಎಂದರAತೆ. ಅಪ್ಪ ಹಾಗೆ ಮೆತ್ತಗೆ ಬೆನ್ನುತಟ್ಟಿ ಹೇಳಿದಾಗ ಪ್ರಭುದೇವ್‌ಗೆ ಅಳುವೇ ಬಂದಿತ್ತAತೆ.
ಅಪ್ಪ ಅಂದು ಹಾಗೆ ಬೆನ್ನು ತಟ್ಟಿದ್ದರಿಂದಲೇ ಹಟಕ್ಕೆ ಬಿದ್ದು ನಾನು ಇಂದಿನ ಪ್ರಭುದೇವ್ ಆಗಲು ಸಾಧ್ಯವಾಗಿದ್ದು, ಎಂದು ಪ್ರಭುದೇವ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ವಿಶ್ವಖ್ಯಾತಿ ಮೆರೆದ ಹಾಲಿವುಡ್ ಆ್ಯಕ್ಷನ್ ಕಿಂಗ್, ಸೂಪರ್‌ಸ್ಟಾರ್ ಜಾಕಿಚಾನ್ ಯಾರಿಗೆ ಗೊತ್ತಿಲ್ಲ ? ಹಾಂಕಾAಗ್‌ನಲ್ಲಿ ಜನಿಸಿದ ಈ ಪ್ರತಿಭೆ ಒಂದನೇ ತರಗತಿಯಲ್ಲೇ ಫೇಲ್ ! ಈತನ ಗಮನ ಓದಿಗಿಂತ ಬೇರೆಡೆ ಇದೆ ಎಂದು ಗುರುತಿಸಿದ್ದ ಶಿಕ್ಷಕರು, ಈ ಅಂಶವನ್ನು ಈತನ ತಾಯಿಗೆ ಸ್ಪಷ್ಟಪಡಿಸಿದ್ದರು. ಈ ೮ ವರ್ಷದ ಬಾಲಕನನ್ನು ನಾಟಕ ಅಕಾಡೆಮಿಯ ಬೋರ್ಡಿಂಗ್ ಸ್ಕೂಲ್‌ಗೆ ದಾಖಲಿಸಿ, ಪೋಷಕರು ತಾವು ಜೀವನೋಪಾಯ ಕ್ಕಾಗಿ ಆಸ್ಟೆçÃಲಿಯಾಗೆ ತೆರಳಿದ್ದು, ಜಾಕಿಚಾನ್ ಭವಿಷ್ಯವನ್ನೇ ಬದಲಿಸಿತು. ಕರಾಟೆ, ಕುಂಗ್‌ಫು, ದೇಹರಕ್ಷಣೆಯ ಕಲೆಯನ್ನು ಕರತಲಾಮಲಕ ಮಾಡಿಕೊಂಡ ಜಾಕಿಚಾನ್, ನಂತರ ಎಡೆಬಿಡದೆ ಅವಮಾನ, ಸೋಲುಗಳನ್ನು ಲೆಕ್ಕಿಸದೆ, ವಿಶ್ವಖ್ಯಾತಿಯ ಅತ್ಯುತ್ತಮ ಆ್ಯಕ್ಸನ್ ಸಿನಿಮಾಗಳನ್ನು ವಿಶ್ವ ಸಿನಿಮಾಕ್ಕೆ ನೀಡಿದ್ದಾರೆ. ಹೀಗೆಯೇ ಬಿಎಂಟಿಸಿ ಕಂಡಕ್ಟರ್ ಆಗಿದ್ದ ರಜನೀಕಾಂತ್ ಇಂದು ಸೂಪರ್‌ಸ್ಟಾರ್. ೪ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದ ಕನ್ನಡದ ವರನಟ ‘ಕರ್ನಾಟಕ ರತ್ನ’ ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರಷ್ಟು ಸ್ಪಷ್ಟವಾಗಿ ಕನ್ನಡ ಮಾತ ನಾಡಲು, ಸುಶ್ರಾಯವಾಗಿ ಹಾಡಲು, ಮನೋಜ್ಞವಾಗಿ ಅಭಿನಯಿಸಲು ನಮ್ಮಿಂದ ಸಾಧ್ಯವೇ ? ಕ್ರಿಕೆಟ್ ದೇವರು, ಭಾರತ ರತ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್‌ತೆಂಡೂಲ್ಕರ್, ರಿಲಯನ್ಸ್ ಸಂಸ್ಥೆ ಸಂಸ್ಥಾಪಕ ಧೀರುಬಾಯ್ ಅಂಬಾನಿ, ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಇವರೆಲ್ಲ ಹೆಚ್ಚೇನೂ ಓದಿದವರಲ್ಲ, ಹಟ ಬಿಡದ ಸಾಧನೆಯೊಂದಿಗೆ ಎದುರಾದ ಅವಕಾಶಗಳನ್ನು ಬಾಚಿ ತಬ್ಬಿಕೊಂಡು, ಯಶಸ್ವಿನ ಉತ್ತುಂಗಕ್ಕೇರಿದವರು. ಎದುರಾಗುವ ಸತತ ಸೋಲು ಗಳನ್ನೂ ಲೆಕ್ಕಿಸದೆ, ಜಗ್ಗದೆ ಗುರಿಸಾಧನೆಗೆ ಉತ್ತಮ ನಿದರ್ಶನ ಅಮೇರಿಕಾದ ೧೬ನೇ ಅಧ್ಯಕ್ಷ ಅಬ್ರಹಾಂ ಲಿಂಕನ್ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಜೀವನಪೂರ್ತಿ ಸೋಲುಕಂಡು, ಎರಡು ಬಾರಿ ವ್ಯವಹಾರದಲ್ಲಿ ೮ ಬಾರಿ ಪ್ರಜಾಪ್ರತಿನಿಧಿ ಚುನಾವಣೆಯಲ್ಲಿ ಪರಾಜಿತರಾಗಿ ಸಾಲದ ಸುಳಿಗೆ ಸಿಲುಕಿ, ನರ ದೌರ್ಬಲ್ಯಕ್ಕೂ ಗುರಿಯಾಗಿ ಅಂತಿಮವಾಗಿ ೫೨ನೇ ವಯಸ್ಸಿನಲ್ಲಿ ೧೮೬೧ರಲ್ಲಿ ಅಮೇರಿಕಾದ ಅಧ್ಯಕ್ಷರಾಗಿ ಶ್ವೇತಭವನ ಪ್ರವೇಶಿಸಿದ ಲಿಂಕನ್, ೧೮೪೬ರಲ್ಲಿ ಪ್ರಜಾಪ್ರತಿನಿಧಿ ಆಗಿದ್ದಾಗ, ಗುಲಾಮಗಿರಿ ನಿಷೇಧಿಸುವ ಮಸೂದೆಯ ಕರುಡು ಸಿದ್ಧಪಡಿಸಿ ಖ್ಯಾತಿವೆತ್ತರು.
ಇತ್ತೀಚಿನ ಕೆಲವು ಉದಾಹರಣೆಗಳನ್ನು ಗಮನಿಸುವುದಾದರೆ, ಕೆಲವು ವರ್ಷಗಳ ಹಿಂದೆ ದಿಲ್ಲಿಯ ಚಾಂದನಿ ಚೌಕ್ ಸಮೀಪ ಬೀದಿಬದಿಯಲ್ಲಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್ ಅಧಿಕಾರಿ, ಅಂಗಡಿ ಮುಚ್ಚಿಸಿದರು. ಪೊಲೀಸನಿಗೇಕೆ ತಿರುಗೇಟು ಹೊಡೆಯಲಿಲ್ಲ ಎಂದು ತನ್ನ ಮಗ ಪ್ರಶ್ನಿಸಿದಾಗ ‘ಪೊಲೀಸರು ಹೆದರುವುದು ನ್ಯಾಯಧೀಶರಿಗೆ ಮಾತ್ರ’ ಎಂದು ಆ ವ್ಯಕ್ತಿ ಉತ್ತರಿಸಿದ್ದ ! ಅಪ್ಪನಿಗಾದ ಕಪಾಳಮೋಕ್ಷ ಬಾಲಕ ಬಿಹಾರದ ಸಹರ್ಸಾ ಮೂಲದ ಕಮಲೇಶ್‌ನನ್ನು ಬಡಿದೆಬ್ಬಿಸಿತ್ತು. ಛಲದೊಂದಿಗೆ ವ್ಯಾಸಂಗ ಮಾಡಿದ ಯುವಕ ಕಮಲೇಶ್ ೨೦೨೨ರ ಬಿಹಾರದ ನ್ಯಾಯಾಂಗ ಪರೀಕ್ಷೆಯಲ್ಲಿ ೬೪ನೇ ಸ್ಥಾನಗಳಿಸಿದ್ದಾರೆ. ಇನ್ನು ಕಾಸರಗೋಡು ಮೂಲಕ ಸುರೇಂದ್ರನ್ ೧೯ನೇ ತರಗತಿವರೆಗೆ ಓದಿದ ನಂತರ, ಬಡತನದಿಂದ ಓದು ಮುಂದುವರಿಸಲಾರದೆ ಬೀಡಿ ಕಟ್ಟುವ ಕಾಯಕಕ್ಕೆ ಇಳಿದಾಗ, ಬದುಕಿನ ಕಷ್ಟದ ನಿಜ ಅರಿವಾಯಿತು, ಹಣಕಾಸು ಸಮಸ್ಯೆ ಲೆಕ್ಕಿಸದೆ ಕಾಲೇಜು ವ್ಯಾಸಂಗಕ್ಕೆ ಗಮನಿರಿಸಿ ಕಾನೂನು ಪದವಿ ಪಡೆದು, ಸುಪ್ರೀಂಕೋರ್ಟ್ನಲ್ಲೂ ವಕೀಲರಾಗಿ ಕರ್ತವ್ಯ ನಿರ್ವಹಿಸಿದರು. ದಾದಿಯಾಗಿರುವ ತಮ್ಮ ಪತ್ನಿ ಜೊತೆ ಅಮೇರಿಕಾಗೆ ತೆರಳಿ ಹೌಸ್‌ಕೀಪಿಂಗ್ ಕೆಲಸ ಮಾಡಿ ವ್ಯಾಸಂಗ ಮುಂದುವರೆಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಟೆಕ್ಸಾಸ್ ನ್ಯಾಯಾಲಯದಲ್ಲಿ ಈ ವರ್ಷ ಜನವರಿ ೧ ರಂದು ನ್ಯಾಯಾಧೀಶರಾಗಿ ವೃತ್ತಿ ಆರಂಭಿಸಿದ್ದಾರೆ.
ನಾರಿಯರೂ ಸಾಧನೆಯಲ್ಲಿ ಹಿಂದೆ ಬಿದ್ದಿಲ್ಲ. ಮನ್‌ಪ್ರೀತ್ ಮೋನಿಕಾಸಿಂಗ್ ಅಮೇರಿಕಾದ ಹ್ಯಾರೀಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರತರಾಗಿದ್ದು, ಅಮೇರಿಕಾ ನ್ಯಾಯಾಲಯದಲ್ಲಿ ಸಿಖ್ ಜನಾಂಗಕ್ಕೆ ಸೇರಿದ ಮೊದಲ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅವಿದ್ಯಾವಂತೆಯಾದರೂ, ಸಂತಾನಭಾಗ್ಯವಿಲ್ಲದ ಹಿನ್ನೆಲೆಯಲ್ಲಿ ಗಿಡ ಮರ ಬೆಳೆಸಿ ಸಂರಕ್ಷಿಸಿ ಖ್ಯಾತಿವೆತ್ತ ಸಾಲು ಮರದ ತಿಮ್ಮಕ್ಕ, ಬಾಲ್ಯದಲ್ಲೇ ಅಪಘಾತದಲ್ಲಿ ಬಲಗಾಲು ಕಳೆದುಕೊಂಡರೂ, ಕೃತಕ ಕಾಲಿನ ನೆರವಿನಿಂದ ಭರತನಾಟ್ಯ ನೃತ್ಯ ಸಾಧನೆ ಮೆರೆದ ಸುಧಾಚಂದ್ರನ್, ಗಗನಯಾತ್ರಿಗಳಾದ ಕಲ್ಪನಾಚಾವ್ಲಾ, ಸುನೀತಾ ವಿಲಿಯಮ್ಸ್, ದೇಶದಲ್ಲೇ ಮೊದಲ ಬಾರಿಗೆ ಲೈನ್‌ವುಮನ್‌ಗಳಾಗಿ ತೆಲಂಗಾಣ ವಿದ್ಯುತ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀ ಶಿರೀಷಾ ಇಂಥವರ ಸಾಧನೆ ಎಂಥವರಿಗೂ ಪ್ರೇರಣೆ ಆಗಬಲ್ಲುದು.
-ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ,
ಮಡಿಕೇರಿ, ಮೊ:೯೮೪೫೪೯೯೧೧೨