ಪೊನ್ನಂಪೇಟೆ, ಮೇ ೧೮ : ಗೋಣಿಕೊಪ್ಪಲು ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ೨ ನೇ ವರ್ಷದ ಗೋಣಿಕೊಪ್ಪಲು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಮಾಜಿ ಶಾಸಕÀ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪ್ರತಿಯೊಬ್ಬರೂ ಕ್ರೀಡಾ ಸ್ಫೂರ್ತಿಯಿಂದ ಪಂದ್ಯಾವಳಿಯಲ್ಲಿ ಪಾಲ್ಗೊಂಡು, ಉತ್ತಮ ಆಟ ಪ್ರದರ್ಶನ ನೀಡಬೇಕು ಎಂದರು. ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷೆ ಸೌಮ್ಯ ಬಾಲು, ಗ್ರಾ.ಪಂ.ಸದಸ್ಯರಾದ ಬಿ.ಎನ್.ಪ್ರಕಾಶ್, ಬೋಜಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ.ಬೋಪಣ್ಣ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಭಗತ್ ಸಿಂಗ್ ಸಂಘದ ಅಧ್ಯಕ್ಷ ಎನ್.ಆರ್.ರಾಜ, ಪಂದ್ಯಾವಳಿ ಅಧ್ಯಕ್ಷ ವೇಣುಗೋಪಾಲ್, ಇನ್ನಿತರರು ಹಾಜರಿದ್ದರು. ತಾ. ೨೧ವರೆಗೆ ಐದು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ಒಂದು ಲಕ್ಷ ನಗದು, ರನ್ನರ್ ತಂಡಕ್ಕೆ ಟ್ರೋಫಿ ಹಾಗೂ ೫೦ ಸಾವಿರ ನಗದು, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ಟ್ರೋಫಿ ಹಾಗೂ ರೂ.೧೫,೫೫೫ ನಗದು, ೪ ನೇ ಸ್ಥಾನ ಪಡೆಯುವ ತಂಡಕ್ಕೆ ಟ್ರೋಫಿ ಮತ್ತು ರೂ.೧೧೧೧೧ನಗದು ಬಹುಮಾನ ನೀಡಲಾಗುತ್ತದೆ. ಪಂದ್ಯಾವಳಿಯಲ್ಲಿ ೧೬ ತಂಡಗಳು ಭಾಗವಹಿಸುತ್ತಿದ್ದು, ತಾ. ೨೧ ರ ಫೈನಲ್ ಹಣಾಹಣಿ ನಡೆಯಲಿದೆ ಎಂದು ಕ್ರಿಕೆಟ್ ಪಂದ್ಯಾವಳಿಯ ಅಧ್ಯಕ್ಷ ವೇಣುಗೋಪಾಲ್ ಮಾಹಿತಿ ನೀಡಿದರು.