ಮಡಿಕೇರಿ, ಮೇ ೧೭: ಮೂರ್ನಾಡು ಪದವಿ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಸ್ಥಾಪನೆ ಮತ್ತು ಮೊದಲ ಪೂರ್ವಭಾವಿ ಸಭೆಯನ್ನು ಕಾಲೇಜಿನ ಆವರಣದಲ್ಲಿ ಪ್ರಾಂಶುಪಾಲೆ ಡಾ. ರೇಖಾ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಸಂಯೋಜಕ ನವೀನ್ ವಿದ್ಯಾರ್ಥಿ ಸಂಘದ ಪ್ರಾಮುಖ್ಯತೆಯ ಉದ್ದೇಶಗಳನ್ನು ಸಭೆಗೆ ತಿಳಿಸಿದರು. ಹಳೆ ವಿದ್ಯಾರ್ಥಿ ಸಂಘದ ನೂತನ ಉಪಾಧ್ಯಕ್ಷರಾಗಿ ಉಸ್ಮಾನ್, ಕಾರ್ಯದರ್ಶಿಯಾಗಿ ನೌಶಾದ್, ಖಜಾಂಚಿಯಾಗಿ ಕವನ್ ಕರುಂಬಯ್ಯ ಆಯ್ಕೆಯಾದರು.
ಐಕ್ಯೂಎಸಿ ಸಂಚಾಲಕಿ ವಿಲ್ಮಾ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ಬೋಪಣ್ಣ ಸ್ವಾಗತಿಸಿದರು, ಉಪನ್ಯಾಸಕ ಹರೀಶ್ ವಂದಿಸಿದರು.