ಮಡಿಕೇರಿ, ಮೇ ೧೭ : ಮಡಿಕೇರಿಯ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿರುವ ಶ್ರೀ ಭಗವತಿ ದೇವಿಗೆ ಪೊಂಗಾಲ ಮಹೋತ್ಸವ ತಾ.೨೧ರಂದು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಶ್ರಿ ಮುತ್ತಪ್ಪ ಮಹಿಳಾ ವೇದಿಕೆ ಪದಾಧಿಕಾರಿ ವಿಶಾಲಾಕ್ಷಿ ಅವರು ಮಾತನಾಡಿ; ತಂತ್ರಿಗಳು ಹಾಗೂ ಅರ್ಚಕರ ಸಲಹೆ ಮೇರೆಗೆ ಪೊಂಗಾಲ ಅರ್ಪಣೆ ಮಹೋತ್ಸವ ಕಾರ್ಯ ಏರ್ಪಡಿಸಲಾಗಿದೆ. ಮಹಿಳೆಯರು ಮಾಡುವ ಸೇವೆ ಇದಾಗಿದ್ದು, ಸೇವೆ ಮಾಡಲು ಇಚ್ಛಿಸುವವರು ಮೂರು ದಿಗಳ ಕಾಲ ಶುದ್ಧ ಮುದ್ರಿಕೆಯಿಂದ ಇರಬೇಕಾಗುತ್ತದೆ. ತಾ.೨೧ರಂದು ಬೆಳಿಗ್ಗೆ ೮.೩೦ ಗಂಟೆಗೆ ದೇವಾಲಯದ ಆವರಣದಲ್ಲಿ ಪೊಂಗಾಲ ತಯಾರಿಸಿ ಅರ್ಪಣೆ ಮಾಡಬಹುದಾಗಿದೆ. ಸೇವೆಗೆ ಬೇಕಾಗುವ ಸಾಮಗ್ರಿಗಳನ್ನು ದೇವಾಲಯದ ವತಿಯಿಂದ ನೀಡಲಾಗುವದು. ಮಾಡಿಸುವವರು ಮುಂಗಡವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಹೇಳಿದರು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ. ೯೪೮೧೪೮೮೬೦೨, ೯೪೮೦೪೨೭೬೧೫ ಸಂಖ್ಯೆಗಳನ್ನು ಸಂಪರ್ಕ ಮಾಡುವಂತೆ ತಿಳಿಸಿದರು. ಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷೆ ದೀಪಾ ಕಾವೇರಮ್ಮ, ಕಾರ್ಯದರ್ಶಿ ಗೀತಾ ವಿಜಯನ್, ಖಜಾಂಚಿ ರಾಣಿ ಮುತ್ತಮ್ಮ ಇದ್ದರು.