ಕುಶಾಲನಗರ, ಮೇ ೧೭: ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮತ್ತಿ ಒಂಟಿ ಅಂಗಡಿ ಗ್ರಾಮದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಾಳೆ.

ಅಲ್ಲಿನ ಕಾರ್ಮಿಕ ಮಂಜು ಎಂಬವರ ಪುತ್ರಿ ಹತ್ತು ವರ್ಷ ಪ್ರಾಯದ ಸುಪ್ರಿಯ ತಾ. ೮ ರಿಂದ ನಾಪತ್ತೆೆಯಾಗಿರುವುದಾಗಿ ಠಾಣೆಗೆ ದೂರು ನೀಡಿದ್ದಾರೆ. ೩.೫ ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ದುಂಡಗಿನ ಶರೀರ, ಸಾಧಾರಣ ಮೈಕಟ್ಟು ಹೊಂದಿರುವ ಬಾಲಕಿ ನಾಪತ್ತೆಯಾದ ದಿನ ನೀಲಿ ಬಣ್ಣದ ಶರ್ಟ್ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾಳೆ.

ಬಾಲಕಿ ಕಂಡುಬAದಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸಂಖ್ಯೆ ೦೮೨೭೪೨೫೭೪೬೨, ೯೪೮೦೮೦೪೯೫೬ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ೦೮೭೨-೨೨೮೩೩೦ ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.