ಮಡಿಕೇರಿ, ಮೇ ೧೭: ಎಫ್ಫಾಥಾ ಅಧ್ಯಾತ್ಮಿಕ ಧ್ಯಾನ ಕೂಟ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ಶಾಲಾ ಮೈದಾನದಲ್ಲಿ ತಾ. ೧೯, ೨೦ ಮತ್ತು ೨೧ ರಂದು ಬೆಳಿಗ್ಗೆ ೯ ರಿಂದ ಸಂಜೆ ೭ ರವರೆಗೆ ಜರುಗಲಿದೆ.

ವಿಶೇಷ ರೋಗ ಶಾಂತಿ, ಶುಶ್ರೂಷೆ, ಆರ್ಥಿಕ ಸಮಸ್ಯೆಗಳ ಬಿಡುಗಡೆ ಹಾಗೂ ದುರಾತ್ಮಗಳ ಬಂಧನ ಬಿಡುಗಡೆ ಪ್ರಾರ್ಥನೆ ನಡೆಯಲಿದೆ. ರೋಗ ಶಾಂತಿ ಶುಶ್ರೂಷಕ ಸಜಿತ್ ಜೋಸೆಫ್ ಭಾಗವಹಿಸಲಿದ್ದಾರೆ.